ಬೆಳ್ಳುಳ್ಳಿ ತಿನ್ನುವುದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯು ರೋಗದ ಅಪಾಯ ಕಡಿಮೆ. ಬೆಳ್ಳುಳ್ಳಿ ಎಂದರೆ ಎಲ್ಲರಿಗೂ ಇಷ್ಟವಾಗುವುದಿಲ್ಲ. ಆದರೆ ಬೆಳ್ಳುಳ್ಳಿ ಸೇವಿಸುವುದರಿಂದ ನಿಮ್ಮ ಆರೋಗ್ಯ ಉತ್ತಮಗೊಳ್ಳುತ್ತದೆ ಎಂದ ಸತ್ಯ ನಿಮಗೆ ತಿಳಿದಿದೆಯೇ? ಹಾಗಾದರೆ ಇಲ್ಲಿ ನೋಡಿ ನಮ್ಮ ಆರೋಗ್ಯದ ಗುಟ್ಟು ಬೆಳ್ಳುಳ್ಳಿಯಲ್ಲಿದೆ ಎಂಬು ಅದ್ಬುತ ಅಂಶವನ್ನು.
ಬೆಳ್ಳುಳ್ಳಿ ತಿನ್ನುವುದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯು ರೋಗದ ಅಪಾಯವನ್ನು ಕಡಿಮೆ. ಹಾಗೂ ಹೃದಯ ರಕ್ತನಾಳಗಳ ರೋಗದ ಅಪಾಯವನ್ನು ಕಡಿಮೆಮಾಡುತ್ತದೆ. ಅಧಿಕ ಕೊಲೆಸ್ಟ್ರಾಲ್ ಇರುವ ವಯಸ್ಕರಲ್ಲಿ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಹಾಗೂ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.
ಬೆಳ್ಳುಳ್ಳಿ ಸೇವನೆಯಿಂದ ಕ್ಯಾನ್ಸರ್ ನ ಅಪಾಯವೂ ಕಡಿಮೆಯಾಗುತ್ತದೆ. ಜ್ವರ ನೆಗಡಿ ಯಂತಹ ಸಾಮಾನ್ಯ ರೋಗಗಳ ನಿಯಂತ್ರಣ ಬೆಳ್ಳುಳ್ಳಿಯಿಂದ ಸಾಧ್ಯವಿದೆ. ಈ ರೋಗಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾ ಮತ್ತು ವೈರಸ್ ಗಳ ವಿರುದ್ದ ಹೋರಾಡಿ ಈ ಖಾಯಿಲೆಯ ತೀವ್ರತೆಯನ್ನು ಕಡಿಮೆ ಮಾಡುತ್ತದೆ.
ಇದರಲ್ಲಿ ನಮ್ಮ ದೇಹಕ್ಕೆ ಅಗತ್ಯವಿರುವ ವಿಟಮಿನ್ ಸಿ, ವಿಟಮಿನ ಬಿ6, ಮತ್ತು ಮ್ಯಾಂಗನೀಸ್ ಸಮೃದ್ಧವಾಗಿದೆ. ಇವು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಚರ್ಮದ ಕಾಂತಿಗೂ ಕಾರಣವಾಗಿದ್ದು,ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ.
Comments are closed.