ಆರೋಗ್ಯ

ತಾಯ್ತನದ ಅಪೌಷ್ಟಿಕ ಆಹಾರಗಳು ಜನಿಸಿದ ಮಗುವಿನ ಕಡಿಮೆ ತೂಕಕ್ಕೆ ಕಾರಣವಾಗಬಹುದು ಜಾಗ್ರತೆ!

Pinterest LinkedIn Tumblr

ಗರ್ಭಾವಸ್ಥೆಯಲ್ಲಿ ಪೌಷ್ಟಿಕ ಆಹಾರದ ಅಗತ್ಯ ಬಹಳ ಹೆಚ್ಚು. ಭ್ರೂಣದ ಮತ್ತು ಗರ್ಭಿಣಿ ಮಹಿಳೆಯ ಆವಶ್ಯಕತೆ ಪೂರೈಸಲು ಹೆಚ್ಚಿನ ಪ್ರಮಾಣದಲ್ಲಿ ಆಹಾರದ ಅಗತ್ಯವಿದೆ . ಭಾರತದಲ್ಲಿ, ಬಡವರ್ಗಕ್ಕೆ ಸೇರಿದ ಮಹಿಳೆಯರ ಅದರಲ್ಲೂ ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರ ಆಹಾರಕ್ರಮ ಸಾಮಾನ್ಯ ಮಹಿಳೆಯರ ಆಹಾರಕ್ರಮ ದಂತೆಯೇ ಇರುವುದನ್ನು ಗಮನಿಸಲಾಗಿದೆ.

ತಾಯ್ತನದ ಅಪೌಷ್ಟಿಕತೆ ಜನಿಸಿದ ಮಗುವಿನ ಕಡಿಮೆ ತೂಕಕ್ಕೆ ಕಾರಣ ಅದು ಹೆಚ್ಚಿನ ಪ್ರಮಾಣದಲ್ಲಿ ತಾಯಿಯರ ಮತ್ತು ಶಿಶುವಿನ ಸಾವಿಗೂ ಕಾರಣ ವಾಗುತ್ತದೆ. ಹೆಚ್ಚಿನ ಆಹಾರ ಮಗುವಿನ ಜನನ ತೂಕ ವೃದ್ಧಿಸುವುದಕ್ಕಾಗಿ ಮತ್ತು ತಾಯಿಯ ದೇಹದ ಮೇದಸ್ಸುದ ಶೇಖರಣೆಯನ್ನು ಉತ್ತಮಗೊಳಿಸುವುದ ಕ್ಕಾಗಿ ಅತ್ಯಾವಶಕ. ಹೆಚ್ಚಿನ ಪ್ರಮಾಣದ ಹಾಲುತ್ಪತ್ತಿಗಾಗಿ ಹಾಲುಣಿಸುವ ತಾಯಂದಿರಿಗೆ ಅಧಿಕ ಪೌಷ್ಟಿಕ ಆಹಾರ ಅಗತ್ಯ.

ಗರ್ಭಿಣಿಯರಿಗೆ ಆಹಾರಕ್ರಮದ ಆವಶ್ಯಕತೆಗಳು :
* ಗರ್ಭಿಣಿಯ ಆಹಾರಕ್ರಮವು ನೇರವಾಗಿ ಮಗುವಿನ ಜನನ ಸಮಯದ ತೂಕದ ಮೇಲೆ ಪರಿಣಾಮ ಬೀರುತ್ತದೆ.
* ಗರ್ಭಾವಸ್ಥೆಯ ಆಹಾರಕ್ರಮವು ಹೆಚ್ಚಿನ ಪ್ರಮಾಣದಲ್ಲಿ ಸುರಕ್ಷಿತ ಆಹಾರ ಪದಾರ್ಥಗಳನ್ನು ಹೊಂದಿರಬೇಕು.
* ಗರ್ಭಿಣಿ ಮಹಿಳೆಗೆ ಗರ್ಭಾವಸ್ಥೆಯ ಮಧ್ಯತರ ದಿನಗಳ ನಂತರ ಹೆಚ್ಚಿನ 300 ಕೆ.ಸಿ.ಎ.ಎಲ್ ಶಕ್ತಿ, ಹೆಚ್ಚುವರಿ 15 ಗ್ರಾಂ ಪ್ರೋಟೀನ್ ಮತ್ತು 10 ಗ್ರಾಂ ಮೇದಸ್ಸು ಬೇಕಾಗುತ್ತದೆ.
* ಗರ್ಭಾವಸ್ಥೆಯಲ್ಲಿ ಮತ್ತು ಹಾಲುಣಿಸುವ ಸಮಯದಲ್ಲಿ, ಮೂಳೆಗಳ ಹಾಗೂ ಹಲ್ಲುಗಳ ಸೂಕ್ತ ರಚನೆಯಲ್ಲಿ ಮತ್ತು ಮೊಲೆ ಹಾಲಿನ ಒಸರುವಿಕೆಗಾಗಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಬೇಕಾಗುತ್ತದೆ.
* ಗರ್ಭಾವಸ್ಥೆಯಲ್ಲಿ ಕಬ್ಬಿಣಾಂಶದ ಕೊರತೆಯಿಂದಾಗುವ ರಕ್ತಹೀನತೆ ತಾಯಂದಿರ ಮರಣ ಪ್ರಮಾಣ ಹೆಚ್ಚಿಸುವುದಲ್ಲದೆ ಮಗುವಿನ ಜನನ ಸಮಯದ ತೂಕವನ್ನು ಕುಸಿತಗೊಳಿಸುತ್ತದೆ. ಆದುದರಿಂದ, ಕಬ್ಬಿಣಾಂಶ ಭರಿತ ಆಹಾರ ಸೇವನೆ ಅತ್ಯಗತ್ಯ.

ಗರ್ಭಾವಸ್ಥೆಯಲ್ಲಿ ಮಾಡಬೇಕಾದದ್ದು ಮತ್ತು ಮಾಡಬಾರದದ್ದು:
ಒಂದು ಹೆಚ್ಚುವರಿ ಊಟವನ್ನು ಮಾಡುವುದು ಉತ್ತಮ.
ಹೆಚ್ಚಿನ ಪ್ರಮಾಣದಲ್ಲಿ ಕಾಳು-ಧಾನ್ಯಗಳು, ಮೊಳಕೆಕಾಳುಗಳು ಮತ್ತು ಹುದುಗುಬಂದ ಆಹಾರವನ್ನು ಸೇವಿಸಿರಿ.
ಹಾಲು /ಮಾಂಸ / ಮೊಟ್ಟೆ ತೆಗೆದುಕೊಳ್ಳಿರಿ.
ಅಧಿಕವಾಗಿ ತರಕಾರಿಗಳು ಮತ್ತು ಹಣ್ಣುಗಳನ್ನು ತಿನ್ನಿರಿ.
ಮದ್ಯ ಮತ್ತು ತಂಬಾಕುವನ್ನು ಉಪಯೋಗಿಸಬೇಡಿ.
ಔಷಧಿಯನ್ನು ತಿಳಿಸಿದಾಗ ಮಾತ್ರ ತೆಗೆದುಕೊಳ್ಳಿರಿ.
14-16 ವಾರಗಳ ಗರ್ಭಧಾರಣೆಯ ನಂತರ ಕ್ರಮಬದ್ಧವಾಗಿ ಕಬ್ಬಣಾಂಶ, ಫೊಲೇಟ್ ಮತ್ತು ಕ್ಯಾಲ್ಸಿಯಂ ತೆಗೆದುಕೊಳ್ಳಿರಿ. ಹಾಗೂ ಇದನ್ನು ಹಾಲುಣಿಸುವಾಗ ಮುಂದುವರೆಸಿರಿ.
ಟೀ, ಕಾಫಿ ನಂತಹ ಪಾನೀಯಗಳು ಆಹಾರಕ್ರಮ ಕಬ್ಬಣಾಂಶವನ್ನು ತಡೆಹಿಡಿದು ದೇಹಕ್ಕೆ ದೊರೆಯದ ಹಾಗೆ ಮಾಡುತ್ತದೆ. ಹಾಗಾಗಿ ಊಟದ ಮುಂಚೆ ಮತ್ತು ಊಟದ ನಂತರ (ತಕ್ಷಣ) ಇವುಗಳನ್ನು ಸೇವಿಸಬೆಡಿ. .
ಗರ್ಭಿಣಿ ಮಹಿಳೆಯರು ನಡೆದಾಡುವ ಮತ್ತು ಇತರೆ ದೈಹಿಕ ಚಟುವಟಿಕೆ ಮಾಡುವುದು ಆವಶ್ಯಕ. ಆದರೆ ಕಷ್ಟಕರ ಮತ್ತು ಭಾರದ ದೈಹಿಕ ಕೆಲಸ, ಮುಖ್ಯವಾಗಿ ಗರ್ಭಧಾರಣೆಯ ಕೊನೆಯ ತಿಂಗಳಲ್ಲಿ, ತೊರೆಯಿ ರಿ.

Comments are closed.