ಆರೋಗ್ಯ

ಆಶಾ, ಆರೋಗ್ಯ ಇಲಾಖೆಗೆ ಅವಮಾನಿಸುವ ‘ಕ್ರಿಮಿ’ಗಳಿಗೆ ಬುದ್ದಿ ಕಲಿಸ್ತೇವೆ: ಉಡುಪಿ ಡಿಸಿ ಎಚ್ಚರಿಕೆ(Video)

Pinterest LinkedIn Tumblr

ಉಡುಪಿ: ಆಶಾ ಕಾರ್ಯಕರ್ತರಿಂದ ಹಿಡಿದು ಆರೋಗ್ಯ ಇಲಾಖೆಯ ಡಿ.ಎಚ್.ಒ ತನಕ ಎಲ್ಲರೂ ರಾತ್ರಿ ಹಗಲು ಎನ್ನದೇ ಕೆಲಸ ಮಾಡುತ್ತಿದ್ದಾರೆ. ಆದರೆ ಅವರನ್ನು ಅವಮಾನಿಸಿದರೆ ಸುಮ್ಮನಿರಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಉಡುಪಿಯ ಹೆಬ್ರಿಯಲ್ಲಿ ಗುರುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ‘ಅತಿಯಾಗಿ ಮಾಡಿದರೆ ಬುದ್ದಿ ಕೆಲಸ ಮಾಡಿಯೇ ಮಾಡುತ್ತೇವೆ. ಆಶಾ ಕಾರ್ಯಕರ್ತರಿಂದ ಹಿಡಿದು ಆರೋಗ್ಯ ಇಲಾಖೆ ಡಿ.ಎಚ್.ಒ ತನಕ ಎಲ್ಲರೂ ಹಗಲು ರಾತ್ರಿ ಕೆಲಸ ಮಾಡುತ್ತಿದ್ದು ಅಂತವರನ್ನು ಅವಮಾನಿಸುವ ಕೆಲಸ ಕೆಲ ಕ್ರಿಮಿಗಳು ಮಾಡುತ್ತಿದ್ದಾರೆ. ಬೇಡದ್ದನ್ನು ಮಾಡುವ ಇಂತವರಿಗೆ ಯಾವುದೇ ಕಾರಣಕ್ಕೂ ಸೊಪ್ಪು ಹಾಕಲ್ಲ, ತಕ್ಕ ಬುದ್ದಿ ಕಲಿಸ್ತೇವೆ; ಎಂದು ಡಿಸಿ ಎಚ್ಚರಿಕೆ ನೀಡಿದ್ದಾರೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.