ಆರೋಗ್ಯ

ಕೊರೋನಾ ಭಯದಿಂದ ಐಸೋಲೇಷನ್ ವಾರ್ಡಲ್ಲಿದ್ದ ವ್ಯಕ್ತಿ ಆತ್ಮಹತ್ಯೆ: ಉಡುಪಿಯಲ್ಲಿ ಘಟನೆ

Pinterest LinkedIn Tumblr

ಉಡುಪಿ: ಉಡುಪಿಯ ಅಜ್ಜರಕಾಡುವಿನಲ್ಲಿರುವ ಜಿಲ್ಲಾಸ್ಪತ್ರೆಯ ಐಸೊಲೆಷನ್ ವಾರ್ಡ್ ನಲ್ಲಿ‌ದ್ದ ವ್ಯಕ್ಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಪ್ರಭಾಕರ್ ಪುತ್ರನ್ (63) ಆತ್ಮಹತ್ಯೆ ಮಾಡಿಕೊಂಡವರು‌.

ಉಡುಪಿ ಜಿಲ್ಲಾಸ್ಪತ್ರೆಯ ಐಸೋಲೇಶನ್ ವಾರ್ಡ್ ನಲ್ಲಿ ಜುಲೈ 5 ರಂದು ಇವರು ದಾಖಲಾಗಿದ್ದರು. ಆತ್ಮಹತ್ಯೆ ನಂತರ ವೈದ್ಯರ ಕೊರೋನಾ ಪರೀಕ್ಷಾ ವರದಿ ಕೈಸೇರಿದ್ದು ನೆಗೆಟಿವ್ ಬಂದಿದೆ ಎನ್ನಲಾಗುತ್ತಿದೆ.ಇವರು ಕೊರೋನಾ ಆತಂಕದಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಅಂದಾಜಿಸಲಾಗಿದೆ.

ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.