ಆರೋಗ್ಯ

ಸಿಡಿಲು, ಮಿಂಚಿನಿಂದ ನಮ್ಮನು ನಾವು ರಕ್ಷಿಸಿಕೊಳ್ಳಲು ಬೇಕಾದ ಟಿಪ್ಸ್

Pinterest LinkedIn Tumblr

ಭಯಂಕರವಾದ ಸಿಡಿಲಿನಿಂದ ಮತ್ತು ಮಿಂಚಿನಿಂದ ಹೇಗೆ ರಕ್ಷಿಸಿಕೊಳ್ಳಬೇಕು ಎಂದು ತಿಳಿಯೋಣ. ಎಲ್ಲರಿಗೂ ಸಿಡಿಲಿನ ಬಗ್ಗೆ ಗೊತ್ತೇ ಇದೆ ಆದರೆ ಕೆಲವರಿಗೆ ಸಿಡಿಲು ಹೇಗೆ ಉಂಟಾಗುತ್ತದೆ ಎನ್ನುವ ಸಂದೇಹ ಇರುತ್ತೆ ಮೋಡಗಳಲ್ಲಿ ಉಷ್ಣತೆ ಕಡಿಮೆ ಇರುವುದರಿಂದ ಮೋಡಗಳ ಮೇಲೆ ನೀರು ಚಿಕ್ಕ ಚಿಕ್ಕ ಐಸ್ ಪಾರ್ಟಿಕಲ್ ರೂಪದಲ್ಲಿ ಇರುತ್ತೆ ಆದರೆ ತುಂಬಾ ಗಾಳಿ ಬೀಸಿದಾಗ ಈ ಮಂಜು ಕಣಗಳ ಮಧ್ಯೆ ಘರ್ಷಣೆ ಉಂಟಾಗಿ ಒಂದು ವಿಧ್ಯುತ್ ಚಕ್ತಿ ಉಂಟಾಗುತ್ತದೆ ಇದರಿಂದ ಪಾಸಿಟಿವ್ ಮತ್ತು ನೆಗಟಿವ್ ಕಣಗಳು ಉಂಟಾಗುತ್ತದೆ ಇದರಿಂದ ಪಾಸಿಟಿವ್ ಕಣಗಳು ಕಡಿಮೆ ವೈಟ್ ಇರುವುದಕ್ಕೆ ಮೋಡದ ಮೇಲ್ಭಾಗಕ್ಕೆ ನೆಗಟಿವ್ ಕಣಗಳು ಕಡಿಮೆ ತೂಕ ಇರುವುದರಿಂದ ಕೆಳಭಾಗಕ್ಕೆ ಇರುತ್ತೆ ಅಯಸ್ಕಾಂತದ ನಾರ್ತ್ ಪೊಲ ಸೌತ್ ಪೋಲ್ ಯಾವ ರೀತಿ ಆಕರ್ಷಣೆ ಒಳಗಾಗುವುದು ಅದೇ ರೀತಿ ಮೋಡಗಳ ಪಾಸಿಟಿವ್ ಮತ್ತು ನೆಗಟಿವ್ ಕಣಗಳು ಆಕರ್ಷಣೆಗೆ ಒಳಗಾಗುತ್ತವೆ ಒಂದು ಮೋಡಕ್ಕೆ ಇನ್ನೊಂದು ಮೋಡ ಡಿಕ್ಕಿ ಹೊಡೆದಾಗ ಕಣಗಳ ಆಕರ್ಷಣೆ ಇಂದ ಸಿಡಿಲು ಉತ್ಪತ್ತಿ ಆಗುತ್ತದೆ.

ಸಿಡಿಲು ಬೀಳುತ್ತಿರುವ ಸಮಯದಲ್ಲಿ ಲ್ಯಾಂಡ್ ಲೈನ್ ಫೋನ್ ಗಳನ್ನು ಬಳಸಬಾರದು ಈ ಸಿಡಿಲು ನಿಮ್ಮ ಹತ್ತಿರದಲ್ಲಿ ಇರುವ ಟೆಲಿಫೋನ್ ಕಂಬಕ್ಕೆ ಬಡಿಯಬಹುದು ಅದರ ಪ್ರಭಾವ ನಿಮ್ಮ ಶರೀರದಲ್ಲಿ ಕೂಡ ಬೀಳಬಹುದು ನಿಮ್ಮ ಮೊಬೈಲ್ ಫೋನ್ ಗಳು ಬಳಸಬಹುದು ಸಿಡಿಲು ಬಡಿಯುವ ಸಮಯದಲ್ಲಿ ಟಿ ವೀ ನೋಡಬಾರದು ಮೊದಲು ನೀವು ಎಲ್ಲಾ ಸ್ವಿಚ್ ಬೋರ್ಡ್ ಗಳಿಂದ ಕೇಬಲ್ ಅನ್ನು ತೆಗೆಯಬೇಕು ಇಲ್ಲ ಅಂದ್ರೆ ನಿಮ್ಮ ಮನೆಯಲ್ಲಿ ಇರುವ ಎಲೆಕ್ಟ್ರಿಕ್ ವಸ್ತುಗಳು ಹಾಳಾಗುವ ಸಾಧ್ಯತೆ ಇದೆ ಸಿಡಿಲು ಬೀಳುವ ಸಮಯದಲ್ಲಿ ಶವರ್ ಕೆಳಗೆ ಸ್ನಾನ ಮಾಡುವುದು ಟ್ಯಾಪ್ ನಲ್ಲಿ ಕೈ ತೊಳೆಯುವುದು ಪಾತ್ರೆ ತೊಳೆಯುವುದು ಕೆಲಸ ಮಾಡಬಾರದು ತುಂಬಾ ಜನ ಮಳೆ ಬೀಳುವ ಸಮಯದಲ್ಲಿ ಕಿಟಕಿ ಬಾಗಿಲಲ್ಲಿ ನಿಂತು ನೋಡುತ್ತಾರೆ ಮೇಲೆ ಸಿಡಿಲು ಬೀಳುವ ಸಮಯದಲ್ಲಿ ಎಲ್ಲ ಕಿಟಕಿ ಬಾಗಿಲು ಮುಚ್ಚಬೇಕು.

ಒಂದು ವೇಳೆ ನೀವು ಬೇರೆ ವಸತಿ ಇಲ್ಲದೆ ಇರೋ ಪ್ರದೇಶದಲ್ಲಿ ಇರುವಾಗ ಕೂಡಲೇ ಬೆನ್ನು ಬಾಗಿ ನೆಲದ ಮೇಲೆ ಅಂಗಾತ ಮಲಗಬೇಕು. ಒಂದು ವಿಷಯ ಅರ್ಥ ಮಾಡಿಕೊಳ್ಳಿ ಯಾವುದೇ ಕಾರಣಕ್ಕೂ ಮರದ ಕೆಳಗಡೆ ನಿಂತುಕೊಳ್ಳಬೇಡಿ ಅದು ದೊಡ್ಡ ಮರವಾಗ್ಲಿ ಅಥವಾ ಚಿಕ್ಕ ಮರ ಆಗಲಿ ಏಕೆ ಅಂದರೆ ಮರಗಳಿಗೆ ಮತ್ತು ವಿಧ್ಯುತ್ ಕಂಬಗಳಿಗೆ ಸಿಡಿಲು ತುಂಬಾ ಸುಲಭವಾಗಿ ಆಕರ್ಷಿತವಾಗುತ್ತದೆ ಇದರಿಂದ ಇವುಗಳಿಂದ ದೂರ ಇರಬೇಕು ಸಿಡಿಲು ಬೀಳುವ ಸಮಯದಲ್ಲಿ ಮಳೆಯಲ್ಲಿ ನೆಂದರೂ ಪರವಾಗಿಲ್ಲ ಛತ್ರಿಯನ್ನು ಮಾತ್ರ ಬಳಸಬೇಡಿ. ನಿಮ್ಮ ಹತ್ತಿರದಲ್ಲಿ ಯಾವುದೇ ಕಾರು ಇದ್ದರೂ ಅದರ ಎಲ್ಲ ಕಿಟಕಿ ಬಾಗಿಲನ್ನು ಮುಚ್ಚಿ ಅದರಲ್ಲಿ ಕುಳಿತು ಕೊಳ್ಳಬಹುದು ಆದರೆ ಎಫ್ ಎಂ ಮಾತ್ರ ಅನ್ ಮಾಡಬಾರದು. ಗೊತ್ತಾಯತಲ್ಲ ಸ್ನೇಹಿತರೆ ಸಿಡಿಲಿನಿಂದ ನಮ್ಮನ್ನು ನಾವು ಹೇಗೆ ರಕ್ಷಿಸಿ ಕೊಳ್ಳಬೇಕೆಂದು..

Comments are closed.