ಆರೋಗ್ಯ

ಕರ್ಪೂರದಿಂದ ಇತಂಹ ಹಲವು ಸಮಸ್ಯೆಗಳಿಗೆ ಸಿಗುವುದು ಮುಕ್ತಿ !

Pinterest LinkedIn Tumblr

ಅತಿ ಹೆಚ್ಚು ಧನಾತ್ಮಕ ಶಕ್ತಿಯನ್ನು ಹೊಂದಿರುವ ವಸ್ತು ಕರ್ಪುರ ಈ ಕರ್ಪುರ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಅಲ್ಲವೇ ಕರ್ಪುರವು ಬಿಳಿಯ ಬಣ್ಣದಿಂದ ಕೂಡಿರುತ್ತದೆ ಈ ಕರ್ಪುರವನ್ನು ದೇವರ ಪೂಜೆ ಆರತಿಗೆಂದು ಬಳಸುತ್ತಾರೆ ಈ ಕರ್ಪುರವು ನಮ್ಮ ಸುತ್ತ ಮುತ್ತಲು ಇರುವ ಕೆಟ್ಟ ಶಕ್ತಿಯನ್ನು ದೂರ ಮಾಡುವ ಅದ್ಬುತವಾದ ಶಕ್ತಿಯನ್ನು ಹೊಂದಿದೆ. ಕರ್ಪುರವನ್ನು ರಾಸಾಯನಿಕವಾಗಿ ಟರ್ಪಂಟೈನ್ ಎಣ್ಣೆಯಲ್ಲಿ ತಯಾರಿಸುತ್ತಾರೆ. ಇದು ಸಣ್ಣ ಸಣ್ಣ ಕಣಗಳಿಂದ ಕೂಡಿರುತ್ತದೆ ಇದು ತುಂಬಾ ಬೇಗ ಪುಡಿ ಪುಡಿ ಆಗುತ್ತದೆ ಜೊತೆಗೆ ಈ ಕರ್ಪುರವನ್ನು ಹಚ್ಚಿದಾಗ ಇದರ ಬೂದಿ ಕೂಡ ಉಳಿಯದೆ ಇದು ಸಂಪೂರ್ಣವಾಗಿ ಉರಿದು ಹೊಗೆಯಾಗುತ್ತದೆ ಆದುದರಿಂದ ದೇವರ ಪೂಜೆಯಲ್ಲಿ ಇದನ್ನು ಹೆಚ್ಚಾಗಿ ಬಳಸುತ್ತಾರೆ.

ಇಂತಹ ಕರ್ಪುರವನ್ನು ನಿತ್ಯ ದೇವರ ಗುಡಿಯಲ್ಲಿ ಹಚ್ಚಿ ಮಂಗಳ ಆರತಿ ಮಾಡುತ್ತಾರೆ ಅಲ್ಲವೇ ಆದರೆ ಸಾಮಾನ್ಯವಾಗಿ ಕೆಲವು ಮನೆಗಳಲ್ಲೂ ಕೂಡ ನಿತ್ಯ ಕರ್ಪುರ ಹಚ್ಚುತ್ತಾರೆ ಆದರೆ ಕೆಲವು ಮನೆಗಳಲ್ಲಿ ಕರ್ಪುರದಿಂದ ಹೊಗೆ ಬರುತ್ತದೆ ಈ ಹೊಗೆಯು ಮನೆಯಲ್ಲಿ ತುಂಬಿ ಕೊಳ್ಳುವುದರಿಂದ ಮನೆಯು ಕಪ್ಪಾಗುತ್ತದೆ ಎಂದು ಮನೆಯಲ್ಲಿ ಗಂಧದ ಕಡ್ಡಿ. ಕರ್ಪುರವನ್ನು ಹಚ್ಚುವುದಿಲ್ಲ. ಆದರೆ ನಾವು ನಿತ್ಯ ಮನೆಯಲ್ಲಿ ಕರ್ಪುರವನ್ನು ಹಚ್ಚುವುದರಿಂದ ಏನೆಲ್ಲ ಪ್ರಯೋಜನ ಆಗುತ್ತದೆ ಎಂದು ನೋಡೋಣ ಬನ್ನಿ. ಕರ್ಪೂರವು ಸಾತ್ತ್ವಿಕವಾಗಿರುವುದರಿಂದ ಕರ್ಪೂರದೀಪವನ್ನು ಹಚ್ಚುವುದರಿಂದ ಹೆಚ್ಚಿನ ಸಾತ್ತ್ವಿಕತೆ ಸಿಗಲು ಸಹಾಯವಾಗುತ್ತದೆ. ಇದೆ ಕಾರಣದಿಂದ ನೈವೇದ್ಯ ಅರ್ಪಿಸಿದ ನಂತರ ಕರ್ಪೂರದ ದೀಪವನ್ನು ಹಚ್ಚುತ್ತಾರೆ.

ನಿತ್ಯ ಮನೆಯಲ್ಲಿ ಕರ್ಪೂರದ ದೀಪವನ್ನು ಹಚ್ಚುವುದರಿಂದ ಅಶ್ವಮೇಧ ಯಾಗದ ಪುಣ್ಯವು ಸಿಗುತ್ತದೆ ನಮಗೆ ಸಿಗುತ್ತದೆ. ದೇವರ ಮುಂದೆ ಕರ್ಪುರವನ್ನು ಹಚ್ಚುವುದರಿಂದ ಅಹಂಕಾರ. ಕೋಪ. ಕೆಟ್ಟತನ ಎಂಬುದು ಉರಿದು ಹೋಗಿ ಆತ್ಮ ಪರಿಶುದ್ಧವಾಗುತ್ತದೆ. ದೇವರಿಗೆ ಕರ್ಪುರವನ್ನು ಹಚ್ಚುವುದರಿಂದ ಅದರಲ್ಲಿ ಬರುವ ಹೊಗೆಯನ್ನು ಕುಡಿಯುವುದರಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಈ ಅಶ್ವಮೇಧ ಯಾಗವು ಎಲ್ಲಕ್ಕಿಂತ ದೊಡ್ಡದಾದ ಯಾಗವಾಗಿದೆ. ಅಶ್ವ ಎಂದರೆ ಕುದುರೆ ಈ ಕುದುರೆಯು ಶಕ್ತಿ ಮತ್ತು ವೇಗದ ಪ್ರತೀಕವಾಗಿದೆ. ಈ ಅಶ್ವಮೇಧ ಯಾಗದಿಂದ ಉತ್ಪನ್ನವಾಗುವ ಶಕ್ತಿಯನ್ನು ವಿರಾಟ ಪುರುಷರೂಪಿ ಶಿವರೂಪಿ ಈಶತತ್ತ್ವದೊಂದಿಗೆ ತುಲನೆ ಮಾಡಲಾಗುತ್ತದೆ.

ಕರ್ಪೂರ ರೂಪೀ ದೀಪದಿಂದ ಸ್ವಯಂ ಶಿವರೂಪಿ ಪುರುಷ ಶಕ್ತಿಯು ಜಾಗೃತವಾಗುವುದರಿಂದ ಅದರ ಸಹವಾಸವು ನಮಗೆ ದೊರಕಿ ನಾವು ಬಲಶಾಲಿ ಮತ್ತು ಕ್ರಿಯೆಯಲ್ಲಿ ಅಶ್ವದಂತೆಯೇ ವೇಗವಂತರಾಗುತ್ತೇವೆ. ಕರ್ಪೂರ ದೀಪದ ಬಳಿ ಶಿವರೂಪಿ ವಿರಾಟ ಪುರುಷರೂಪಿ ತೇಜದ ವಾಸ್ತವ್ಯವಿರುವುದರಿಂದ ಇಂತಹ ದೀಪದ ಸಾನ್ನಿಧ್ಯದಿಂದ ವಾಯುಮಂಡಲದಲ್ಲಿನ ತ್ರಾಸದಾಯಕ ಸ್ಪಂದನಗಳು ಲಯವಾಗಲು ಸಹಾಯವಾಗುತ್ತದೆ. ದೇವರಿಗೆ ಕರ್ಪೂರವನ್ನು ಹಚ್ಚಿದಾಗ ಅದರಿಂದ ಬರುವ ಹೊಗೆಯಿಂದ ಅಸ್ತಮಾ ಟೈಪಾಯಿಡ್ ಮನಸ್ಸಿನ ದುಗುಡ ಬೆಚ್ಚಿ ಬೀಳುವಿಕೆ ಹಿಸ್ಟೀರಿಯಾ ಕೀಲುಗಳ ನೋವು ಮೊದಲಾದ ಖಾಯಿಲೆಗಳು ದೂರ ಆಗುತ್ತವೆ.

ದೇವರಿಗೆ ಕರ್ಪೂರವನ್ನು ಹಚ್ಚಿದಾಗ ಅದರಿಂದ ಬರುವ ಹೊಗೆಯ ವಾಸನೆಯಿಂದ ಅಪಸ್ಮಾರ, ಉನ್ಮಾದ ಮತ್ತು ಸಂಧಿವಾತದ ಸಮಸ್ಯೆಗಳು ದೂರ ಆಗುತ್ತದೆ. ಮನೆಯಲ್ಲಿ ಕರ್ಪುರವನ್ನು ಹಚ್ಚುವುದರಿಂದ ಅದರ ಜ್ವಾಲೆಯಿಂದ ಮನೆಯಲ್ಲಿ ಇರುವ ಕೆಟ್ಟ ಶಕ್ತಿಯು ದೂರ ಆಗುತ್ತದೆ. ಕರ್ಪುರವನ್ನು ಹಚ್ಚಿದಾಗ ಅದರಿಂದ ಬರುವ ಸುವಾಸನೆ ಹಾಗೂ ಹೊಗೆಯಿಂದ ಮನೆಯಲ್ಲಿ ಇರುವ ಕೀಟನುಗಳು ಹೊರ ಹೋಗುತ್ತವೆ. ಹಾಗಾಗಿ ಪ್ರತಿನಿತ್ಯ ಮನೆಯಲ್ಲಿ ಕರ್ಪುರವನ್ನು ಹಚ್ಚಬೇಕು. ಕರ್ಪುರ ಕೇವಲ ಪೂಜೆಗೆ ಮಾತ್ರ ಅಲ್ಲದೆ ಇದರಿಂದ ನಮ್ಮ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಕರ್ಪುರವನ್ನು ನೀರಿನಲ್ಲಿ ಹಾಕಿ ಕರಗಿಸಿ ಆ ನೀರನ್ನು ಸುಟ್ಟ ಗಾಯಗಳಿಗೆ. ತುರಿಕೆ. ಅಲರ್ಜಿಗಳಿಗೆ ಹಾಕಿದರೆ ಬೇಗ ಗುಣ ಆಗುತ್ತದೆ. ಕರ್ಪುರದಲ್ಲಿ ಆಂಟಿಸೆಪ್ಟಿಕ್. ಅಂಟಿಪಂಗಲ್ ಗುಣಗಳು ಇದ್ದು ಇವು ಮುಖದ ಮೊಡವೆಗಳನ್ನು ಹೋಗಿಸುತ್ತದೆ. ಕರ್ಪುರದ ಎಣ್ಣೆಯನ್ನು ಕೀಲುಗಳಿಗೆ ಹಚ್ಚುವುದರಿಂದ ಕೀಲುಗಳ ಸ್ನಾಯುಗಳ ಸೆಳೆತ ಕಡಿಮೆ ಆಗುತ್ತದೆ. ಹಾಗಾಗಿ ಮನೆಯಲ್ಲಿ ನಿತ್ಯ ದೇವರಿಗೆ ಕರ್ಪುರವನ್ನು ಹಚ್ಚಿ ಅದರ ಹೊಗೆ ಆರೋಗ್ಯಕ್ಕೆ ಒಳ್ಳೆಯದು.

Comments are closed.