ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಒಂಬತ್ತು ಕೊರೋನಾ ಪಾಸಿಟಿವ್ ಪ್ರಕರಣಗಳು ಸಾಭೀತಾಗಿದೆ. ಆರು ಮಂದಿ ಪುರುಷರು, ಮೂವರು ಮಹಿಳೆಯರಲ್ಲಿ ಕೊರೋನಾ ಕಾಣಿಸಿಕೊಂಡಿದೆ. ಮುಂಬೈನಿಂದ ವಾಪಾಸ್ಸಾದ ಮೂವರು, ಹೈದರಬಾದಿನಿಂದ ವಾಪಾಸ್ಸಾದ ಒಬ್ಬರು, ಈ ಹಿಂದೆ ಪಾಸಿಟಿವ್ ಇದ್ದವರ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಇಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.
(ಸಾಂದರ್ಭಿಕ ಚಿತ್ರ)
ಚಾಲಕರಿಬ್ಬರಿಗೆ ಕೊರೋನಾ…
ಕುಂದಾಪುರ- ಬೆಂಗಳೂರು ನಡುವೆ ಓಡಾಟ ಮಾಡುವ ಬಸ್ಸಿನ ಚಾಲಕರಿಬ್ಬರಿಗೆ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದೆ ಎಂದು ಡಿಸಿ ತಿಳಿಸಿದ್ದಾರೆ. ಸ್ಥಳೀಯ ಪ್ರಕರಣವೊಂದರಲ್ಲಿ ಬಟ್ಟೆ ಅಂಗಡಿಯೊಂದರ ಮಾಲಿಕನಿಗೆ ಕೊರೋನಾ ಪಾಸಿಟಿವ್ ಬಂದಿದೆ. ಇವರ ಮಗ ಬೆಂಗಳುರು ಪ್ರಯಾಣದ ಹಿನ್ನೆಲೆ ಹೊಂದಿದ್ದು ಆತನಿಗೂ ಕೊರೋನಾ ಪರೀಕ್ಷೆ ಮಾಡಲಾಗಿದೆ ಎಂದು ಡಿಸಿ ಹೇಳೀದ್ದಾರೆ.
(ಉಡುಪಿ ಡಿಸಿ)
ಬಸ್ ಚಾಲಕರಿಬ್ಬರು ಮತ್ತು ಬಟ್ಟೆ ಅಂಗಡಿ ಮಾಲಿಕನಿಗೆ ಕೊರೋನಾ ದೃಢಪಟ್ಟ ವಿಚಾರ ಜನರ ಆತಂಕಕ್ಕೂ ಕಾರಣವಾಗಿದ್ದು ಸೋಂಕು ಸಮುದಾಯಕ್ಕೂ ಹಬ್ಬಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.
Comments are closed.