ಆರೋಗ್ಯ

ಪ್ರತಿದಿನ ದೀಪ ಹಚ್ಚುವಾಗ ಅನುಸರಿಸಬೇಕಾದ ನಿಯಮಗಳೇನು..?

Pinterest LinkedIn Tumblr

ಹಿಂದೂ ಪದ್ಧತಿಯಲ್ಲಿ ಪ್ರತಿದಿನ ದೇವರಿಗೆ ದೀಪ ಹಚ್ಚುವುದು ವಾಡಿಕೆ. ಹಿಂದೂಗಳು ಬೆಳಿಗ್ಗೆ ಮತ್ತು ಸಂಜೆ ದೀಪ ಹಚ್ಚುವುದನ್ನ ನಾವು ನೋಡಿರ್ತಿವಿ. ಆದ್ರೆ ದೀಪ ಹಚ್ಚುವಾಗ ಅನುಸರಿಸಬೇಕಾದ ನಿಯಮಗಳೇನು..? ದೀಪಕ್ಕೆ ಯಾವ ಎಣ್ಣೆ ಬಳಸಬೇಕೆಂಬುದರ ಬಗ್ಗೆ ನಾವಿವತ್ತು ತಿಳಿಯೋಣ ಬನ್ನಿ..

ದೇವರಿಗೆ ತುಪ್ಪ ಅಥವಾ ಎಳ್ಳೆಣ್ಣೆಯಿಂದ ದೀಪ ಹಚ್ಚಬೇಕು. ಅದರಲ್ಲೂ ಶುದ್ಧ ಎಳ್ಳೆಣ್ಣೆ, ಶುದ್ಧ ತುಪ್ಪ ಬಳಸಿದರೆ ಉತ್ತಮ. ಇತ್ತೀಚೆಗೆ ಮಾರುಕಟ್ಟೆಗಳಲ್ಲಿ ಕಲಬೆರಕೆ ತುಪ್ಪ ಎಣ್ಣೆ ಸಿಗಲು ಶುರುವಾಗಿದೆ. ಈ ಕಾರಣಕ್ಕೆ ದೀಪಕ್ಕೆ ಬಳಸುವ ಎಣ್ಣೆ ತುಪ್ಪ ಶುದ್ಧವಾಗಿರುವಂತೆ ನೋಡಿಕೊಳ್ಳಿ.

ಬೇರೆ ಎಣ್ಣೆಗಳಿಂದ ದೀಪ ಏಕೆ ಹಚ್ಚಬಾರದು..?
ಎಳ್ಳೆಣ್ಣೆ ಬಿಟ್ಟು ಬೇರೆ ಎಣ್ಣೆಯಿಂದ ದೀಪ ಹಚ್ಚಬಾರದೆಂದು ಹಿಂದೂ ಶಾಸ್ತ್ರದಲ್ಲಿ ಹೇಳಲಾಗಿದೆ. ತೆಂಗಿನ ಎಣ್ಣೆ, ಬದಾಮ್ ಎಣ್ಣೆ, ಸಾಸಿವೆ ಎಣ್ಣೆ ಇವೆಲ್ಲವೂ ಅಡುಗೆಗೆ ಬಳಸುವ ಎಣ್ಣೆ. ಹೀಗಾಗಿ ಈ ಎಣ್ಣೆಗಳಿಂದ ದೀಪ ಹಚ್ಚುವುದು ನಿಷಿದ್ಧ ಎನ್ನಲಾಗಿದೆ.

ಇಷ್ಟೇ ಅಲ್ಲದೇ, ಮೇಕೆ ಹಾಲಿನಿಂದ ಮತ್ತು ಎಮ್ಮೆ ಹಾಲಿನಿಂದ ಮಾಡಿದ ತುಪ್ಪದಿಂದ ಎಂದಿಗೂ ದೀಪ ಬೆಳಗಿಸುವಂತಿಲ್ಲ. ಹಸುವಿನ ಹಾಲಿನಿಂದ ಮಾಡಿದ ತುಪ್ಪವೇ ಶ್ರೇಷ್ಠವಾದ್ದರಿಂದ, ಬೇರೆ ಪ್ರಾಣಿಯ ಹಾಲಿನಿಂದ ಮಾಡಿದ ತುಪ್ಪ ದೀಪ ಹಚ್ಚಲು ಯೋಗ್ಯವಲ್ಲ.

Comments are closed.