ಆರೋಗ್ಯ

ಬೈಂದೂರು ಠಾಣೆ ಕಾನ್ಸ್‌ಟೇಬಲ್’ಗೆ ಕೊರೋನಾ ಪಾಸಿಟಿವ್; ಠಾಣೆ, ಸಿಪಿಐ ಕಛೇರಿ ಸೀಲ್ ಡೌನ್

Pinterest LinkedIn Tumblr
ಕುಂದಾಪುರ: ಬೈಂದೂರು ಆರಕ್ಷಕ ಠಾಣೆಯ ಸಿಬಂದಿಯೊಬ್ಬರಿಗೆ ಕೊರೊನಾ ಸೋಂಕು ಪಾಸಿಟಿವ್ ವರದಿ ಬಂದಿದೆ. ಬೈಂದೂರು ಆರಕ್ಷಕ ಠಾಣೆಗೂ ಕೊರೊನೊ ಕಾಟ ಕೊಟ್ಟಂತಾಗಿದ್ದು ಠಾಣೆಯ ಸಿಬ್ಬಂದಿಗೆ ಸೋಂಕು ದೃಢವಾಗಿದೆ.
ಭಾನುವಾರ ಸಂಜೆಯಿಂದ ವೃತ್ತ ನಿರೀಕ್ಷಕರ ಕಛೇರಿ ಮತ್ತು ಠಾಣಾಧಿಕಾರಿಗಳ ಕಛೇರಿಯನ್ನು ಶೀಲ್ ಡೌನ್ ಮಾಡಲಾಗುವುದು.ತಾತ್ಕಾಲಿಕವಾಗಿ ಹಳೆಯ ವೃತ್ತ ನಿರೀಕ್ಷಕರ ಕಛೇರಿ ಬಳಸಿಕೊಳ್ಳಲಾಗುವುದು.ಮತ್ತು ಸಿಬಂದಿಗಳಿಗೆ ಕ್ವಾರಂಟೈನ್ ಜೊತೆಗೆ ನೇರ ಸಂಪರ್ಕ ಇದ್ದವರನ್ನು ಪರೀಕ್ಷಿಸಲಾಗುವುದು ಎಂದು ಕುಂದಾಪುರ ಎಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.

Comments are closed.