ಆರೋಗ್ಯ

ಉಡುಪಿಗೆ ಅಶುಭ ಶುಕ್ರವಾರ- ಜಿಲ್ಲೆಯಲ್ಲಿ 11 ಮಂದಿಗೆ ಕೊರೋನಾ ಪಾಸಿಟಿವ್ ದೃಢ

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮತ್ತೆ ಪುನಃ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡಿದ್ದು, ಶುಕ್ರವಾರ ಒಟ್ಟು 11 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗುವ ಮೂಲಕ ಜಿಲ್ಲೆಯಲ್ಲಿಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 1050 ಕ್ಕೆ ಏರಿಕೆಯಾಗಿದೆ.

ಶುಕ್ರವಾರ ಪತ್ತೆಯಾದ 11 ಸೋಂಕಿತರಲ್ಲಿ 6 ಮಂದಿ ಪುರುಷರು, 3 ಮಹಿಳೆಯರು ಹಾಗು ಇಬ್ಬರು ಮಕ್ಕಳು ಸೇರಿಕೊಂಡಿದ್ದಾರೆ. ಸೋಂಕಿತರಲ್ಲಿ 4 ಮಂದಿ ಮಹಾರಾಷ್ಟ್ರದಿಂದ ಬಂದವರಾಗಿದ್ದು, ಇಬ್ಬರು ತಮಿಳುನಾಡು ಪ್ರಯಾಣ ಮಾಡಿದ್ದು, ಇಬ್ಬರು ರೋಗಿ ಸಂಖ್ಯೆ 7024 ರೊಂದಿಗೆ ಸಂಪರ್ಕದಿಂದ ಮತ್ತಿಬ್ಬರು ರೋಗಿ ಸಂಖ್ಯೆ 7291 ರ ಜೊತೆ ಸಂಪರ್ಕದಿಂದಾಗಿ ಸೋಂಕು ದೃಢಪಟ್ಟಿದೆ.

Comments are closed.