ಆರೋಗ್ಯ

ಜೀವನದಲ್ಲಿ ನಿಜವಾದ, ಸಂತೋಷ, ಯಶಸ್ಸು ಸಾಧಿಸಲು ಪಾಲಿಸಬೇಕಾದ ದಶಸೂತ್ರಗಳು

Pinterest LinkedIn Tumblr

ಜೀವನದಲ್ಲಿ ಹಿಂದೆ ಆದುದನ್ನು ನೆನಪಿಸಿಕೊಂಡು ಜೀವನ ಸಾಗಿಸಿದರೆ ಅದರಿಂದ ನೋವು ಹೊರತು ಬೇರೆನು ಸಿಗುವುದಿಲ್ಲ. ನೀವು ಲೈಫ್ ನಲ್ಲಿ ನಿಜವಾದ ಯಶಸ್ಸು ಸಾಧಿಸಬೇಕು ಅಥವಾ ಯಾವಾಗಲೂ ಸಂತೋಷವಾಗಿರಬೇಕು ಎಂದಾದರೆ ನೀವು ಈ ದಶಸೂತ್ರಗಳನ್ನು ಪಾಲಿಸಬೇಕು. ಹಾಗೆ ಮಾಡಿದರೆ ಮಾತ್ರ ನಿಮ್ಮನ್ನು ಯಾರಿಂದಲೂ ಸೋಲಿಸಲು ಸಾಧ್ಯವಾಗದು…

ಜೀವನದ ದಶಸೂತ್ರಗಳು:

1.ಜೀವನದಲ್ಲಿ ನೀವು ಏನು ಸಾಧನೆ ಮಾಡಬೇಕೆಂದು ಕೊಂಡಿದ್ದೀರೋ ಅದನ್ನು ಎಷ್ಟು ಕಷ್ಟವಾದರು ಸಾಧಿಸಿ.

2.ಯಾವುದರ ಮೇಲೆ ನಂಬಿಕೆ ಇದೆಯೋ ಅದರ ಜೊತೆಗೆ ಹೆಜ್ಜೆ ಹಾಕಿ. ಬೇರೆ ಯಾರೋ ಏನೋ ಹೇಳಿದರೆಂದು ಅರ್ಧದಲ್ಲಿ ಕೈಬಿಡಬೇಡಿ.

3.ಗಾಳಿ ಬಂದ ಕಡೆ ತೂರಲು ಪ್ರಯತ್ನಿಸಬೇಡಿ. ನಿಮಗೆ ಏನು ಬೇಕೋ ಅದನ್ನು ಮಾಡಿ.

4.ನಿಮಗೆ ಸಂತೋಷಕ್ಕಿಂತ ಬೇಸರವನ್ನೇ ಹೆಚ್ಚಾಗಿ ನೀಡುವ ಸಂಬಂಧದಿಂದ ಹೊರಬನ್ನಿ.

5.ಜೀವನದ ಬಾಗಿಲನ್ನು ಬಡಿದು ಬಂದ ಯಾವುದೇ ಅವಕಾಶಗಳಿಗೆ ನೋ ಎನ್ನಬೇಡಿ. ಎಷ್ಟೇ ಕಷ್ಟವಾದರೂ ಒಂದು ಬಾರಿ ಟ್ರೈ ಮಾಡಿ ನೋಡಿ.

6.ನಿಮ್ಮ ಸುತ್ತಮುತ್ತಲಿರುವ ಪ್ರಪಂಚವನ್ನೆಲ್ಲಾ ಒಂದು ಬಾರಿ ಸುತ್ತು ಹಾಕುವ ಯೋಜನೆ ರೂಪಿಸಿ. ಆವಾಗ ನಿಮಗೆ ವಿವಿಧ ಜನ, ಸಂಸ್ಕೃತಿ, ಭಾಷೆ ಎಲ್ಲವೂ ಅರ್ಥವಾಗುತ್ತದೆ.

7.ಪ್ರತಿ ದಿನ ನಾನು ಮುಗುಳ್ನಗುತ್ತಾ ಇರಲು ಏನಾದರು ಮಾಡಲೇ ಬೇಕು ಎಂದು ನಿಮ್ಮಲ್ಲಿ ನೀವು ಹೇಳಿಕೊಂಡು ಅದರಂತೆ ನಡೆಯಿರಿ.

8.ನೀವು ತುಂಬಾ ಕೇರ್‌ ಮಾಡುವ ಜನರಿಗೆ ಗೌರವ ನೀಡಿ, ಅವರನ್ನು ಸಂತೋಷವಾಗಿಡಲು ಪ್ರಯತ್ನಿಸಿ.

9.ನೀವು ನಂಬಿಕೊಂಡು ಬಂದ ಮೌಲ್ಯಗಳಿಗೆ ಬದ್ಧವಾಗಿರಿ.

10.ಇನ್ನೊಬ್ಬರು ನಿಮ್ಮ ಬಗ್ಗೆ ಏನು ಅಂದುಕೊಳ್ಳುತ್ತಾರೆ ಎಂಬುದನ್ನು ಬಿಡಿ. ಇದು ನಿಮ್ಮ ಜೀವನ ಸೋ ನಿಮಗೆ ಬೆಸ್ಟ್‌ ಎನಿಸಿದ್ದನ್ನು ಮಾಡಿ.

Comments are closed.