ಪ್ರತಿ ತಿಂಗಳು, ನಮ್ಮ ಮುಟ್ಟಿನ ಹರಿವನ್ನು ಸಂಗ್ರಹಿಸಲು ನಾವು ನೈರ್ಮಲ್ಯ ಕರವಸ್ತ್ರಗಳನ್ನು ಬಳಸಬೇಕಾಗಿದೆ. ನಮ್ಮ ಬಟ್ಟೆಗೆ ಸೋರಿಕೆಯನ್ನು ತಡೆಗಟ್ಟುವುದನ್ನು ಭರವಸೆ ನೀಡುವ ಹಲವು ವಿಧಗಳಿವೆ. ಆದರೆ ನಾವು ಬಳಸುವ ಪ್ಯಾಡ್ಗಳ ಬಗ್ಗೆ ನಮಗೆ ಎಷ್ಟು ತಿಳಿದಿದೆ? ಅವುಗಳು ನಿಜವಾಗಿಯೂ ಸುರಕ್ಷಿತವಾಗಿವೆಯೇ? ಈ ಮೂಲಭೂತ ನೈರ್ಮಲ್ಯ ಉತ್ಪನ್ನದ ಕುರಿತು ನೀವು ಮತ್ತು ಪ್ರತಿ ಮಹಿಳೆಯು ಏನನ್ನು ತಿಳಿದುಕೊಳ್ಳಬೇಕು ಎಂಬುದರ ಕುರಿತು ಓದಿ.
1. 5 ಗಂಟೆಗಳಿಗಿಂತ ಹೆಚ್ಚಿನ ಕಾಲ ಸ್ಯಾನಿಟರಿ ನಾಪ್ಕಿನ್ ಧರಿಸಬಾರದು
ನೈರ್ಮಲ್ಯ ಕರವಸ್ತ್ರಗಳಲ್ಲಿ ಬಳಸುವ ರಾಸಾಯನಿಕಗಳು ದ್ರವಗಳನ್ನು(ವಿಸರ್ಜಿಸಿದ ರಕ್ತವನ್ನು) ಜೆಲ್ ಆಗಿ ಪರಿವರ್ತಿಸುತ್ತವೆ. ಇದು ತೀವ್ರವಾದ ಸೋಂಕುಗಳಿಗೆ ಕಾರಣವಾಗಬಹುದು ಮತ್ತು ಗರ್ಭಕೋಶ ಅಥವಾ ಮೂತ್ರಕೋಶದ ಕ್ಯಾನ್ಸರ್ ಗೆ ಕಾರಣವಾಗಬಹುದು. ಪ್ರತಿ ವರ್ಷ, ಇಡೀ ದಿನ ಒಂದೇ ಪ್ಯಾಡ್‍ನ್ನು ಧರಿಸಿದ ಹುಡುಗಿಯರು ಸಾಯಲ್ಪಡುತ್ತಾರೆ.
2. ಬೆಂಜಮಿನ್ ಫ್ರಾಂಕ್ಲಿನ್‍ರವರು ನಾವು ಇಂದು ಬಳಸುವ ಸ್ಯಾನಿಟರಿ ಪ್ಯಾಡ್ಗಳನ್ನು ವಿನ್ಯಾಸಗೊಳಿಸಿದ್ದಾರೆ
ಆದರೆ ಬೆಂಜಮಿನ್ ಫ್ರಾಂಕ್ಲಿನ್ ವಿನ್ಯಾಸಗೊಳಿಸಿದ ಪ್ಯಾಡ್ಗಳನ್ನು ಮುಟ್ಟಿನ ನೈರ್ಮಲ್ಯಕ್ಕಾಗಿ ಬಳಸುವ ಉದ್ದೇಶಕ್ಕಾಗಿ ರಚಿಸಿಲ್ಲ. ಸೈನಿಕರಿಗೆ ತಗಲುವ ಗುಂಡೇಟಿನ ಸುಶ್ರೂಷೆಗೆಂದು ವಿನ್ಯಾಸಗೊಳಿಸಲಾಯಿತು.
3. ಸಂಶ್ಲೇಷಿತ ಅಥವಾ ಪ್ಲ್ಯಾಸ್ಟಿಕ್ ವಸ್ತುಗಳಿಂದ ಮಾಡಿದ ನೈರ್ಮಲ್ಯ ಪ್ಯಾಡ್ಗಳು ಅಪಾಯಕಾರಿ
ಸಂಶ್ಲೇಷಿತ ಫೈಬರ್ಗಳಿಂದ ತಯಾರಿಸಿದ ಪ್ಯಾಡ್ಗಳು ಗಂಭೀರ ಶಿಲೀಂಧ್ರ ಸೋಂಕುಗಳಿಗೆ ಕಾರಣವಾಗುತ್ತವೆ. ಗುಪ್ತ ಪ್ರದೇಶದಲ್ಲಿ ಗಾಳಿಯಾಡದಂತಾಗುವ ಕಾರಣ, ಶಿಲೀಂಧ್ರದ ಬೆಳವಣಿಗೆಯನ್ನು ಅನುಮತಿಸುವಂತಾಗುತ್ತದೆ. ಬದಲಿಗೆ, ಸಾಮಾನ್ಯ ರೀತಿಯ ಹತ್ತಿ ಸ್ಯಾನಿಟರಿ ಪ್ಯಾಡ್ಗಳನ್ನು ಆರಿಸಿಕೊಳ್ಳಿ.
4. ಹತ್ತಿ ಪ್ಯಾಡ್ಗಳು ಅಸುರಕ್ಷಿತವಾಗಿರಬಹುದು
ಹತ್ತಿಯ ಪ್ಯಾಡ್ಗಳನ್ನು ಡಯಾಕ್ಸಿನ್‍ನೊಂದಿಗೆ ಮಿಶ್ರಮಾಡಿರಲ್ಪಟ್ಟಿರುತ್ತವೆ. ಈ ರಾಸಾಯನಿಕವು ನಮ್ಮ ಸಂತಾನೋತ್ಪತ್ತಿ ಅಂಗಗಳಿಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ರಯಾನ್ ಎಂಬ ರಾಸಾಯನಿಕವನ್ನು ಹೀರಿಕೊಳ್ಳುವಿಕೆಯನ್ನು ಹೆಚ್ಚಿಸಲು ಪ್ಯಾಡ್ಗಳಿಗೆ ಸೇರಿಸಲಾಗುತ್ತದೆ. ಈ ರಾಸಾಯನಿಕವು ಕೂಡಾ ಡಯಾಕ್ಸಿನ್ ಅನ್ನು ಹೊಂದಿದೆ.
5. ಮಹಿಳೆಯರು ಆರೋಗ್ಯ ಕಾರಣಗಳಿಗಾಗಿ ಬಟ್ಟೆ ಪ್ಯಾಡ್ಗಳನ್ನು ಆರಿಸಿಕೊಳ್ಳುತ್ತಾರೆ
ಹೆಚ್ಚಿನ ಸಿಂಥೆಟಿಕ್ ಸ್ಯಾನಿಟರಿ ಪ್ಯಾಡ್ ಗಳಿಂದ ಉಂಟಾಗುವ ಸೋಂಕುಗಳ ಅಪಾಯವನ್ನು ತಪ್ಪಿಸಲು, ಹೆಚ್ಚಿನ ಮಹಿಳೆಯರು ಬಟ್ಟೆ ಪ್ಯಾಡ್ಗಳನ್ನು ಆಯ್ಕೆ ಮಾಡುತ್ತಾರೆ.ತೊಳೆಯಬಹುದಾದ, ಮರುಬಳಕೆ ಮಾಡಬಹುದಾದ ಮತ್ತು ದೀರ್ಘಕಾಲ ಉಳಿಯಬಹುದಾದ ಬಟ್ಟೆಯ ಬಳಕೆಯು ಆರೋಗ್ಯಕ್ಕೂ ಉತ್ತಮ. ನಿಮ್ಮ ಜೀವಿತಾವಧಿಯಲ್ಲಿ ಸಾಮಾನ್ಯ ಪ್ಯಾಡ್ ಗಳನ್ನು ಬಳಸಿ ಅಭ್ಯಾಸವಾದ ನಿಮಗೆ,ಬಟ್ಟೆಯ ಬಳಕೆಗೆ ಒಗ್ಗಿಕೊಳ್ಳಲು ಕಷ್ಟವಾಗುತ್ತದೆ.
6 .ಮೆನ್ಸ್ಟ್ರುವಲ್ ಕಪ್‍ಗಳ ಬಳಕೆ
ಈಗ, ಹೆಚ್ಚಿನ ಮಹಿಳೆಯರು ಋತುಚಕ್ರದ ಕಪ್‍ಗಳನ್ನು ಬಳಸಬಹುದೇ ಎಂಬುದರ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಾರೆ. ಆದರೆ ಅದರ ಬಳಕೆಯು ಎಷ್ಟು ಆರೋಗ್ಯಕರವೆಂದು ಅರಿತು ಬಳಸಬೇಕೆಂದು ಪರಿಗಣಿಸುತ್ತಾರೆ. ಈ ಕಪ್‍ಗಳು ರಕ್ತಸ್ರಾವವನ್ನು ಹೀರಿಕೊಳ್ಳದೇ, ಅದನ್ನು ಸಂಗ್ರಹಿಸಿಟ್ಟುಕೊಳ್ಳುವುದು. ಒಂದು ಸಾರಿ ಯೋನಿಯೊಳಗೆ ಸೇರಿಸಿಟ್ಟರೆ, ಕನಿಷ್ಠಪಕ್ಷ 12 ಗಂಟೆಗಳ ಹರಿವನ್ನು ಸಂಗ್ರಹಿಸಿಟ್ಟುಕೊಳ್ಳಬಹುದು. ಸರಿಯಾಗಿ ಉಳಿಸಿಕೊಂಡರೆ , ಈ ಕಪ್‍ಗಳು ಕನಿಷ್ಠ 2 ವರ್ಷಗಳವರೆಗೆ ಬಾಳಿಕೆ ಬರುತ್ತದೆ ಎಂದು ಬಳಸುವ ಮಹಿಳೆಯರು ಹೇಳುತ್ತಾರೆ.
7. ನೇರವಾಗಿ ಪ್ಯಾಡ್ ಅನ್ನು ಫ್ಲಷ್ ಮಾಡುವುದು ನೀರಿನ ಕಟ್ಟಿನಿಲ್ಲುವಿಕೆಗೆ ಕಾರಣವಾಗಬಹುದು
ಬಳಸಿ,ಬಿಸಾಡಲಿರುವ ಪ್ಯಾಡನ್ನು ಕಾಗದದಿಂದ ಸುತ್ತಿಕೊಂಡು ಕಸದ ಬುಟ್ಟಿಗೆ ಎಸೆಯುವಂತೆ ತಿಳಿಸಲಾಗುತಿತ್ತು. ಇದಕ್ಕೆ ಕಾರಣವೆಂದರೆ ನೀವು ಶೌಚಾಲಯದಲ್ಲಿ ಕೆಳಕ್ಕೆ ತಳ್ಳಿದಲ್ಲಿ, ಪ್ಯಾಡ್‍ಗಳು ಬ್ಲೋಕ್ ಉಂಟುಮಾಡುತ್ತದೆ.
8. ಬಳಕೆ ಮಾಡಿದ ರಾಸಾಯನಿಕಗಳು
ಸಾನಿಟರಿ ನ್ಯಾಪ್ಕಿನ್‍ಗಳನ್ನು ಉತ್ಪಾದಿಸುವ ಕಂಪನಿಗಳು ಯಾವತ್ತೂ ತಾವು ಬಳಸಿದ ರಾಸಾಯನಿಕ ವಸ್ತುಗಳನ್ನು ಹೊರಹಾಕುವುದಿಲ್ಲ. ಕೇವಲ ವೈದ್ಯಶಾಸ್ತ್ರವು ಶಿಫಾರಸು ಮಾಡಿದ ಘಟಕಗಳನ್ನು ಅಥವಾ ಇಂಗ್ರೀಡಿಯನ್ಸ್ ಗಳನ್ನು ಮಾತ್ರ ಬಳಸಿದ್ದೇವೆಂದು ಜಾಹೀರಾತು ನೀಡುತ್ತಾರೆ.
9. ಕೊರಿಯಾದ ಸಂಶೋಧನಾ ತಂಡವು ಪದಾರ್ಥಗಳನ್ನು ಪತ್ತೆಹಚ್ಚಿದೆ
ಸಂಶೋಧನೆಯಿಂದ, ಸಾನಿಟರಿ ಪ್ಯಾಡ್‍ಗಳು ಪಾಲಿಯಾಕ್ರಿಲೇಟ್ಗಳು, ಪ್ಲ್ಯಾಸ್ಟಿಕ್, ಸರ್ಫ್ಯಾಕ್ಟಂಟ್ಗಳು, ಪಾಲಿಪ್ರೊಪಿಲೀನ್ ಮತ್ತು ಮರುಬಳಕೆಯ ಕಾಗದ ಅಥವಾ ಕ್ಲೋರೀನ್ ಬ್ಲೀಚ್ಡ್ ಮರದ-ಪಲ್ಪ್ ನಂತಹ ಪದಾರ್ಥಗಳನ್ನು ಒಳಗೊಂಡಿದೆ ಎಂದು ತಿಳಿದುಬಂದಿದೆ.
10. 1896 ರಲ್ಲಿ ಮೊದಲ ವಾಣಿಜ್ಯ ನೈರ್ಮಲ್ಯ ಕರವಸ್ತ್ರವನ್ನು ತಯಾರಿಸಲಾಯಿತು
ಜಾನ್ಸನ್ ಮತ್ತು ಜಾನ್ಸನ್ ಮೊದಲ ವ್ಯಾಪಾರದ ದೃಷ್ಟಿಕೋನದಿಂದ ಸಾನಿಟರಿ ನ್ಯಾಪ್ಕಿನ್ ಅನ್ನು ನಿರ್ಮಿಸಿದರು. ಸ್ಯಾನಿಟರಿ ಪ್ಯಾಡ್‍ಗಳನ್ನು ತಯಾರಿಸಿದ ಈ ಕಂಪನಿಯು ಹೆಚ್ಚಾಗಿ ಬ್ಯಾಂಡೇಜ್ಗಳನ್ನು ತಯಾರಿಸುತ್ತಿತ್ತು, ಇದು ಬ್ಯಾಂಡೇಜ್ ಮಾಡಿದ ರೀತಿಯಲ್ಲಿ ರಕ್ತದ ಹರಿವನ್ನು ಹೇಗೆ ನಿಲ್ಲಿಸಬಹುದು ಎಂಬ ಬಗ್ಗೆ ಒಂದು ಕಲ್ಪನೆಯನ್ನು ನೀಡಿತು ಹಾಗೂ ಪ್ಯಾಡ್‍ಗಳ ತಯಾರಿಕೆಗೆ ನಾಂದಿಯಾಯಿತು.
Comments are closed.