ಆರೋಗ್ಯ

ಹೆರಿಗೆ ನಂತರ ಮಹಿಳೆ ಮಾಡಬೇಕಾದ ಮತ್ತು ಮಾಡಬಾರದ ಅಂಶಗಳು

Pinterest LinkedIn Tumblr

ಶಿಶುವಿಗೆ ಜನ್ಮ ನೀಡಿದ ನಂತರ ತಾಯಿ ಮತ್ತು ಮಗು ಇಬ್ಬರೂ ಒತ್ತಡದ ಕ್ಷಣಗಳನ್ನು ಕಳೆಯುತ್ತಾರೆ. ಸೋಂಕು ತಗ್ಗಿಸಲು ಮತ್ತು ತಾಯಿಗೆ ಇತರ ಸಮಸ್ಯೆಗಳ ಅಪಾಯವನ್ನು ತಗ್ಗಿಸಲು ಸಾಧ್ಯವಾಗುವ ಎಲ್ಲವನ್ನೂ ಮಾಡಲು ಪ್ರಯತ್ನಿಸುವುದು ಮುಖ್ಯ. ಇಲ್ಲಿ ಮಗುವಿಗೆ ಜನ್ಮ ನೀಡಿದ ನಂತರ ಮಾಡಬೇಕಾದ ಮತ್ತು ಮಾಡಬಾರದ ಕೆಲವು ಅಂಶಗಳನ್ನು ನೀಡಲಾಗಿದೆ.

೧. ಟ್ಯಾಂಪೋನ್ಸ್ ಗಳನ್ನು ಬಳಸದಿರಿ
ಇವುಗಳನ್ನು ಬಳಸುವುದರಿಂದ ಸೋಂಕು ತಗುಲಬಹುದು. ಏಕೆಂದರೆ, ಜನ್ಮ ನೀಡುವಾಗ ಆದ ಗಾಯದೊಂದಿಗೆ ಅದು ಸೇರ್ಪಡೆಯಾಗುತ್ತದೆ, ಇದರಿಂದ ಮುಂದೆ ದೊಡ್ಡ ತೊಂದರೆಯನ್ನು ಎದುರಿಸಬೇಕಾದಿತು.

೨. ಪ್ರತಿ ೪ ಗಂಟೆಗೊಮ್ಮೆ ನಿಮ್ಮ ನೈರ್ಮಲ್ಯ ಕರವಸ್ತ್ರ(ನ್ಯಾಪ್ಕಿನ್)ವನ್ನು ಬದಲಿಸಿ
ಅದೇ ನೈರ್ಮಲ್ಯ ಕರವಸ್ತ್ರವನ್ನು ಪುನಃ ಹಾಕಿಕೊಳ್ಳುವುದರಿಂದ ಸೋಂಕು ತಗುಲಬಹುದು, ಅಥವಾ ಜನ್ಮ ನೀಡುವಾಗ ಆದ ಗಾಯವು ಕಿರಿಕಿರಿಯನ್ನು ಅನುಭವಿಸಬಹುದು, ಇದರಿಂದ ಗಾಯ ಕಿತುಕೊಂಡು ದೊಡ್ಡ ಪ್ರಮಾಣದಲ್ಲಿ ಗಾಯವಾಗಬಹುದು. ಅದಕ್ಕೆ ಹಾಗಾಗೆ ಅದನ್ನು ಬದಲಿಸುವುದು ಒಳ್ಳೆಯದು.

೩. ಲೈಂಗಿಕತೆ ಬೇಡ
ರಕ್ತಸ್ರಾವ(ಪ್ರಸವ ಸೆಲೆ) ನಿಲ್ಲುವವರೆಗೆ ನೀವು ಕಾಯಬೇಕಿದೆ. ಏಕೆಂದರೆ, ನಿಮ್ಮ ಪ್ಲಾಸೆಂಟದಲ್ಲಿ ಆಗಿರುವ ಗಾಯ ಇನ್ನೂ ಸಂಪೂರ್ಣವಾಗಿ ಗುಣವಾಗಿರುವುದಿಲ್ಲ, ಅದು ಸಂಪೂರ್ಣ ವಾಸಿಯಾಗುವ ಮೊದಲು ಲೈಂಗಿಕತೆಯಲ್ಲಿ ಪಾಲ್ಗೊಳ್ಳುವುದು, ಸೋಂಕಿನ ಅಪಾಯವನ್ನು ಹೆಚ್ಚಿಸಬಹುದು.

೪. ಒಳ್ಳೆಯ ದೇಹ ಸ್ಥಿತಿ ಪಡೆಯಲು ಅಭ್ಯಾಸ ಮಾಡಿ
ಮಗುವಿಗೆ ಜನ್ಮ ನೀಡಿದ ನಂತರ ಉತ್ತಮ ದೇಹ ಭಂಗಿ ಹೊಂದುವುದು ಒಳ್ಳೆಯದು, ಇದರಿಂದ ಬೆನ್ನುನೋವು ಕಡಿಮೆಯಾಗುತ್ತದೆ. ಇದು ಮೂಲಾಧಾರದ(perineum) ಮೇಲೆ ಒತ್ತಡವನ್ನು ಸರಾಗಗೊಳಿಸುತ್ತದೆ. ಇದು ಮಹಿಳೆಯರ ಗುಧದ್ವಾರ ಮತ್ತು ಯೋನಿಯ ನಡುವೆ ಇರುತ್ತದೆ.

೫. ಒಂದು ಮೆತ್ತಗಿರುವ ವಸ್ತು ಅಥವಾ ಪ್ಯಾಡೆಡ್ ವೃತ್ತ(ರಿಂಗ್)ದಲ್ಲಿ ಕುಳಿತುಕೊಳ್ಳಿ
ಒಂದು ಮೆತ್ತಗಿರುವ ವಸ್ತು ಅಥವಾ ‘ಡೋನಟ್’ (ಪ್ಯಾಡೆಡ್ ರಿಂಗ್) ಮೇಲೆ ಕುಳಿತುಕೊಳ್ಳುವುದರಿಂದ ನಿಮ್ಮ ಮೂಲಾಧಾರ ಮತ್ತು ನಿಮ್ಮ ಬಟ್ಟೆಗಳ ನಡುವಿನ ಘರ್ಷಣೆಯನ್ನು ಕಡಿಮೆ ಮಾಡಬಹುದು. ಇದು ಪ್ರದೇಶದಲ್ಲಿ ಯಾವುದೇ ಊತ ಮತ್ತು ಬಿರುಕುಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಮೆತ್ತಗಿನ ವಸ್ತು ಮೇಲೆ ಕುಳಿತುಕೊಳ್ಳುವುದರಿಂದ ನೋವು ಕಡಿಮೆಯಾಗುತ್ತದೆ, ಮತ್ತು ಮಹಿಳೆಯು ಆರಮದಾಯಕವಾಗಿ ಕುಳಿತುಕೊಳ್ಳಬಹುದು.

Comments are closed.