ಆರೋಗ್ಯ

ಮಗುವಿನ ಆರೋಗ್ಯ ಮತ್ತು ದೇಹದ ಪ್ರತಿರಕ್ಷಣಾ ವ್ಯವಸ್ಥೆಗೆ ಈ ಆಹಾರಗಳು ಉತ್ತಮ.

Pinterest LinkedIn Tumblr

ಚಳಿಗಾಲ ಶುರುವಾಗಿದೆ, ನೀವು ಬೆಳಿಗ್ಗೆ ಕೆಲಸಕ್ಕೆ ಹೋಗುವಾಗ ಚಳಿಯಲ್ಲಿ ಕಷ್ಟ ಪಟ್ಟು ಹೋಗುವ ಪರಿಸ್ಥಿತಿಯನ್ನು ಕೆಲವರು ಎದುರಿಸಬಹುದು, ಮತ್ತು ಕೆಲವರು ಇದನ್ನು ಇಷ್ಟ ಪಡುವರು. ಚಳಿಗಾಲ ಅನೇಕರಿಗೆ ಇಷ್ಟ ಸಂಜೆ ಚಳಿಯಲ್ಲಿ ಬಿಸಿಬಿಸಿ ತಿನಿಸುಗಳನ್ನು ತಿನ್ನಬಹುದು, ಮತ್ತು ಮುಂತಾದ ಕಾರಣಗಳಿಗೆ, ಆದರೆ ಚಳಿಗಾಲದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಆದ್ದರಿಂದ ನಿಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯ ಮಾಡುವ ಕೆಲವು ಆಹಾರ ಪದಾರ್ಥಗಳನ್ನು ಇಲ್ಲಿ ನೀಡಲಾಗಿದೆ, ಇವುಗಳಿಂದ ನಿಮ್ಮ ಮತ್ತು ಮಗುವಿನ ಆರೋಗ್ಯವನ್ನು ಮತ್ತು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಿಕೊಳ್ಳಿ.

೧.ಓಟ್ (oat) ಅಥವಾ ತೊಕ್ಕೆ ಗೋಧಿ
ಇದು ಚಳಿಗಾಲದಲ್ಲಿ ಆರೋಗ್ಯಕರ ಆಹಾರ ಎಂದು ಪರಿಗಣಿಸಲಾಗಿದೆ. ಇದರಲ್ಲಿ ಮಕ್ಕಳ ಶಕ್ತಿಯನ್ನು ಹೆಚ್ಚಿಸಲು ಅವಶ್ಯವಿರುವ ಎಲ್ಲಾ ಪೌಷ್ಟಿಕಾಂಶಗಳು ಇವೆ, ಮತ್ತು ರುಚಿಕರ ಕೂಡ ಆಗಿರುವುದರಿಂದ ಚಳಿಗಾಲದ ಉತ್ತಮ ಆಹಾರ ಎನ್ನಬಹುದು.

೨.ದಾಳಿಂಬೆ ಹಣ್ಣು
ಇದನ್ನು ಚಳಿಗಾಲದಲ್ಲಿ ಸೇವಿಸಲು ಕಷ್ಟವಾಗಬಹುದು, ಆದರೆ ಇದು ಉತ್ಕರ್ಷಣ ನಿರೋಧಕದ ಅತ್ಯುತ್ತಮ ಮೂಲ, ಇದು ನಿಮ್ಮ ದೇಹವನ್ನು ಆರೋಗ್ಯವಾಗಿ ಇಡಲು ಮತ್ತು ಬಿಳಿರಕ್ತಕಣಗಳನ್ನು ಆರೋಗ್ಯವಾಗಿರುವಂತೆ ನೋಡಿಕೊಳ್ಳುವುದರಿಂದ ಇದನ್ನು ಸೇವಿಸುವುದು ಉತ್ತಮ.

೩.ಆಮ್ಲಿಯಾ ಹಣ್ಣುಗಳು (citrus)
ಆಮ್ಲಿಯಾ ಗುಣ ಇರುವ ಎಲ್ಲಾ ಹಣ್ಣುಗಳು ಚಳಿಗಾಲದಲ್ಲಿ ಒಳ್ಳೆಯದು, ಇದು ಆರೋಗ್ಯವನ್ನು ಕಾಪಾಡುವುದರ ಜೊತೆಗೆ, ಚರ್ಮದ ಸಮಸ್ಯೆಯನ್ನು ಹೋಗಲಾಡಿಸಿ, ಆರೋಗ್ಯಕರ ಚರ್ಮ ಮತ್ತು ಚಳಿಗಾಲದಲ್ಲು ಚರ್ಮದ ಹೊಳಪನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

೪.ಗೆಣಸು
ಗೆಣಸು ತನ್ನಲ್ಲಿ ಹಲವು ಪೌಷ್ಟಿಕಾಂಶಗಳನ್ನು ಇರಿಸಿಕೊಂಡಿದೆ, ಇದು ಆರೋಗ್ಯವನ್ನು ಕಾಪಾಡುವುದರ ಜೊತೆಗೆ, ದೇಹಕ್ಕೆ ಪುಷ್ಟಿಯನ್ನು ನೀಡುತ್ತದೆ.

೫.ಈರುಳ್ಳಿ
ಇದನ್ನು ಸೇವಿಸುವುದರಿಂದ ದೇಹಕ್ಕೆ ಆಗುವ ಪ್ರಯೋಜನಗಳ ಹಿಂದಿನ ವೈಜ್ಞಾನಿಕ ಕಾರಣ ತಿಳಿದಿಲ್ಲ, ಆದರೆ ಇದನ್ನು ಸೇವಿಸುವುದರಿಂದ ರಕ್ತದ ಸಂಚಾರ ದೇಹದಲ್ಲಿ ಸರಾಗವಾಗಿ ಆಗುತ್ತದೆ. ಕೆಲವರಿಗೆ ಒಂದೇ ಕಡೆ ಕೂತಿದ್ದರೆ ಜೋಗು(numbness) ಹಿಡಿದಂತೆ ಭಾಸವಾಗುತ್ತದೆ, ಈರುಳ್ಳಿಯನ್ನು ಸೇವಿಸುವುದರಿಂದ ರಕ್ತಸಂಚಲನವನ್ನು ಸರಾಗವಾಗಿ ಹರಿಯುವಂತೆ ಮಾಡುವುದರಿಂದ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

೬.ಟೀ
ಸಾಮಾನ್ಯವಾಗಿ ಅನೇಕರು ಸಾಮಾನ್ಯ ದಿನಗಳಲ್ಲಿಯೂ ಸಹ ಟೀ ಅನ್ನು ಕುಡಿಯುವರು, ಮತ್ತು ಇಷ್ಟಪಡುವರು, ಇದಕ್ಕೆ, ಶುಂಠಿ, ಲವಂಗ, ಮತ್ತು ಚಕ್ಕೆ(ದಾಲ್ಚಿನ್ನಿ)ಯನ್ನು ಸೇರಿಸುವುದರಿಂದ ರುಚಿಯ ಜೊತೆಗೆ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು. ಟೀ ಗೆ ಇವುಗಳನ್ನು ಸೇರಿಸಿಕೊಂಡು ಕುಡಿಯುವುದರಿಂದ ಚಳಿಗಾಲದಲ್ಲಿ ಸಾಮಾನ್ಯವಾದ ಶೀತ ಮತ್ತು ಕೆಮ್ಮಿನಿಂದ ಮುಕ್ತಿಪಡೆಯಬಹುದು.

೭.ಜೇನುತುಪ್ಪ
ಆಂಟಿಆಕ್ಸಿಡೆಂಟ್ಸ್ ಗಳ ಮೂಲ ಜೇನುತುಪ್ಪ, ಇದನ್ನು ನೇರವಾಗಿ ಅಥವಾ ಬೇರೆ ಯಾವುದೇ ಆಹಾರ ಪದಾರ್ಥಗಳ ಜೊತೆಗೆ ಮಿಶ್ರಣ ಮಾಡಿಕೊಂಡು ಸೇವಿಸಬಹುದು. ಇದನ್ನು ನಿಯಮಿತವಾಗಿ ಬಳಸುವುದು ಒಳ್ಳೆಯದು.

೮.ಸೀಬೆಕಾಯಿ
ಚಿಕ್ಕ ವಯಸ್ಸಿನಲ್ಲಿ ಶಾಲೆಯಿಂದ ಮರಳುವಾಗ ಸೀಬೆಕಾಯಿಗೆ ಉಪ್ಪು ಕಾರ ಹಾಕಿ ತಿನ್ನುತ್ತಾ ಮನೆಗೆ ಹೋಗುವ ಕ್ಷಣ ನನಗೆ ಈಗಲೂ ನೆನಪಿದೆ, ಸೀಬೆಕಾಯಿ ಈಗಿನ ಮಕ್ಕಳಿಗೆ ಅಷ್ಟು ಪರಿಚಿತವಲ್ಲ, ಅದರ ಆರೋಗ್ಯದ ಗುಣ ಅಪಾರ, ಇದು ವಿಟಮಿನ್ C ಮತ್ತು ಹಲವು ಖನಿಜಾಂಶಗಳ ಕೇಂದ್ರವಾಗಿದೆ, ಇದರ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಚಳಿಗಾಲದಲ್ಲಿ ಇದನ್ನು ಮಿತವಾಗಿ ಸೇವಿಸುವುದು ಒಳ್ಳೆಯದು.

ಇದರ ಜೊತೆಗೆ ಇತರ ಆಹಾರ ಪದಾರ್ಥಗಳು ಚಳಿಗಾಲದಲ್ಲಿ ಆರೋಗ್ಯಕ್ಕೆ ಒಳ್ಳೆಯದು ಎಂದು ನಿಮಗೆ ತಿಳಿದಿದ್ದರೆ, ಕಮೆಂಟ್ ಮೂಲಕ ಹಂಚಿಕೊಳ್ಳಿ, ಮತ್ತು ಇತರರೊಂದಿಗೆ ಈ ಲೇಖನವನ್ನು ಹಂಚಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಿ.

Comments are closed.