ಯಾವುದೇ ಕೂಲ್ ಡ್ರಿಂಕ್ಸ್ ಬಾಟಲ್ ತಂದು ಅದರಲ್ಲಿನ ಡ್ರಿಂಕ್ ಕುಡಿದ ಬಳಿಕ ಬಹಳಷ್ಟು ಮಂದಿ ಏನು ಮಾಡುತ್ತಾರೆಂದರೆ…ಖಾಲಿ ಆದ ಆ ಕೂಲ್ ಡ್ರಿಂಕ್ ಬಾಟಲನ್ನು ಬಿಸಾಕಲ್ಲ. ಮತ್ತೆ ಬಳಸುತ್ತಾರೆ. ಹೆಚ್ಚಾಗಿ ಅಂತಹ ಖಾಲಿ ಕೂಲ್ ಡ್ರಿಂಕ್ ಬಾಟಲ್‌ಗಳನ್ನು ಅನೇಕ ಮಂದಿ ನೀರನ್ನು ಕುಡಿಯಲು ಬಳಸುತ್ತಾರೆ. ಆದರೆ ಆ ರೀತಿ ಬಳಸುವುದು ಶ್ರೇಯಸ್ಕರ ಅಲ್ಲ. ದೀರ್ಘಕಾಲ ಅಂತಹ ಬಾಟಲ್ ಬಳಸಿದರೆ ಆರೋಗ್ಯಕ್ಕೆ ತುಂಬಾ ಹಾನಿಯಾಗುತ್ತದೆ ಎಂದು ಹಲವು ವಿಜ್ಞಾನಿಗಳ ತಾಜಾ ಸಂಶೋಧನೆಯಲ್ಲಿ ಗೊತ್ತಾಗಿದೆ. ಆ ರೀತಿಯ ಬಾಟಲ್ಸ್‌ನಿಂದ ಯಾವ ರೀತಿಯ ಹಾನಿಯಾಗುತ್ತದೋ ಈಗ ತಿಳಿದುಕೊಳ್ಳೋಣ.
ಕುಡಿಯುವ ನೀರನ್ನು ಮಾರುವ ಮಿನರಲ್ ವಾಟರ್ ಬಾಟಲ್ಸ್ ಅಥವಾ ಕೂಲ್ ಡ್ರಿಂಕ್ ಬಾಟಲಿಗಳನ್ನು ಪಾಲಿ ಎಥಿಲೀನ್ ಟೆರೆಫ್ತಾಲೇಟ್ (ಪೆಟ್-PET) ಎಂಬ ಕೆಮಿಕಲ್‌ನಿಂದ ತಯಾರಿಸುತ್ತಾರೆ. ಹಾಗಾಗಿ ಈ ಬಾಟಲ್ಸ್ ಒಮ್ಮೆಗಿಂತಲೂ ಹೆಚ್ಚು ಸಲ ಬಳಸಬಾರದು. ಹೊರಗೆ ನಾವು ವಾಟಲ್ ಬಾಟಲ್ ಅಥವಾ ಕೂಲ್ ಡ್ರಿಂಕ್ ಬಾಟಲ್ ಕೊಂಡರೆ ಅದರಲ್ಲಿನ ದ್ರವಗಳು ಕುಡಿದ ಬಳಕ ಬಾಟಲ್ಸ್ ಬಿಸಾಡಬೇಕು. ಅಷ್ಟೇ ಹೊರತು ಮರು ಬಳಸಬಾರದು. ಆ ರೀತಿ ಬಳಸಿದರೆ ಆ ಬಾಟಲ್ಸ್ ಬಿಸಿಲಿನಲ್ಲಿರುವಾಗ ಅವುಗಳಿಂದ ಅಪಾಯಕಾರಿ ರಾಸಾಯನಿಕಗಳು ಬಾಟಲ್‌ನಲ್ಲಿರುವ ದ್ರವದೊಂದಿಗೆ ಬೆರೆಯುತ್ತವೆ. ಆ ದ್ರವ ಕುಡಿದಾಗ ಅಪಾಯಕರವಾದ, ಜೀವಕ್ಕೆ ಹಾನಿಯುಂಟು ಮಾಡುವ ರೋಗಗಳು ಬರುತ್ತವೆ.
ಆ ರೀತಿಯ ಪ್ಲಾಸ್ಟಿಕ್ ಬಾಟಲ್ಸ್ ಬಳಸುವುದರಿಂದ ಕ್ಯಾನ್ಸರ್, ಡಯಾಬಿಟೀಸ್ ನಂತಹವು ಬರುವ ಸಾಧ್ಯತೆಗಳಿವುತ್ತವೆ. ಸ್ಥೂಲಕಾಯ ಸಮಸ್ಯೆ ಸಹ ಬರುತ್ತದೆ. ಮಹಿಳೆಯರಲ್ಲಿ ಹಾರ್ಮೋನ್ ಸಮಸ್ಯೆಗಳು ಬರುತ್ತವೆ. ಇದರಿಂದ ಅವರಿಗೆ ಪೀರಿಯಡ್ಸ್ ಸರಿಯಾಗಿ ಆಗಲ್ಲ. ಸಂತಾನ ಬೇಕು ಎಂದುಕೊಳ್ಳುವವರಿಗೆ ತೊಂದರೆಯಾಗುತ್ತದೆ. ಬ್ರೆಸ್ಟ್ ಕ್ಯಾನ್ಸರ್ ಬರುವ ಸಾಧ್ಯತೆಗಳೂ ಇವೆ ಎಂದು ಡಾಕ್ಟರ್ ಮೆರಿಲಿನ್ ಗ್ಲೆನ್‌ವಿಲ್ಲೆ ಎಂಬ ವೈದ್ಯರು ಹೇಳಿದ್ದಾರೆ. ಅಷ್ಟೇ ಅಲ್ಲದೆ ಹೆಚ್ಚಿನ ಕಾಲ ಆ ರೀತಿಯ ಪ್ಲಾಸ್ಟಿಕ್ ಬಾಟಲ್ಸ್ ಬಳಸಿದರೆ ಅದರಲ್ಲಿ ಅಪಾಯಕಾರಿ ಈ.ಕೋಲಿ ಬ್ಯಾಕ್ಟೀರಿಯಾ ಹೆಚ್ಚುತ್ತದೆ, ಅದರಿಂದ ಡಯೇರಿಯಾ, ವಾಂತಿ, ಭೇದಿ, ಜ್ವರದಂತಹ ಅನಾರೋಗ್ಯ ಸಮಸ್ಯೆಗಳು ಬರುತ್ತವೆ. ಆದಕಾರಣ ನೀವು ಸಹ ಈ ರೀತಿಯ ಮಿನರಲ್ ವಾಟಲ್, ಕೂಲ್ ಡ್ರಿಂಕ್ ಬಾಟಲಿಗಳನ್ನು ಬಳಸುತ್ತಿದ್ದರೆ ಕೂಡಲೆ ಅವುಗಳನ್ನು ನಿಲ್ಲಿಸಿ. ಇಲ್ಲದಿದ್ದರೆ ಗೊತ್ತಲ್ಲವೇ, ಏನೆಲ್ಲಾ ಅನಾರೋಗ್ಯ ಉಂಟಾಗುತ್ತದೆಂದು
Comments are closed.