ಆರೋಗ್ಯ

ತಾಯಿಯ ಎದೆಹಾಲಿನ ಉತ್ಪತ್ತಿಯಲ್ಲಿ ಕೊರತೆ ಮಗುವಿನ ಜೀವಕ್ಕೆ ಮಾರಕವೇ

Pinterest LinkedIn Tumblr

ಕೆಲವೊಂದು ಪೋಷಕರಿಗೆ ಎದೆಹಾಲು ನೀಡುವುದು ಎಷ್ಟೊಂದು ಕಷ್ಟಕರವಾಗಿರುತ್ತದೆ ಎಂಬುದನ್ನ ನಾವೇನು ಹೊಸದಾಗಿ ಹೇಳಬೇಕಿಲ್ಲ. ನೀವು ಅಂತರ್ಜಾಲದಲ್ಲೇ ಎದೆಹಾಲುಣಿಸುವಿಕೆಯ ತೊಂದರೆಗಳ ಬಗ್ಗೆ ಹುಡುಕಿದರೆ ಸಾವಿರಾರು ಪುಟಗಳಷ್ಟು ಮಾಹಿತಿ ದೊರೆಯುತ್ತದೆ. ಅದು ಮಗುವು ಸರಿಯಾಗಿ ಕಚ್ಚಿಕೊಳ್ಳುತ್ತಿಲ್ಲ ಅನ್ನುವುದರಿಂದ ಹಿಡಿದು ನೋವಾದ ಮೊಲೆತೊಟ್ಟುಗಳವರೆಗೆ ಎಲ್ಲವನ್ನೂ ನಿಮ್ಮ ಮುಂದೆ ತೆರೆದಿಡುತ್ತದೆ. ಹೀಗೆಲ್ಲಾ ಇದ್ದು ಕೂಡ, ಇಲ್ಲಿ ಒಂದು ಮಗುವಿನ ಜೀವಕ್ಕೆ ಕುತ್ತು ತಂದಿತ್ತು ಇಂತಹ ಒಂದು ತೊಂದರೆ. ಇನ್ನು ಸ್ವಲ್ಪ ತಡ ಮಾಡಿದ್ದರೆ, ಮಗುವಿನ ಪ್ರಾಣಪಕ್ಷಿ ಹಾರಿ ಹೋಗುತ್ತಿತ್ತು.

ಮಧ್ಯ ಪ್ರದೇಶದ ರಾಜಧಾನಿಯಾದ ಭೂಪಾಲಿನಲ್ಲಿ ಒಬ್ಬಳು ತಾಯಿ, ಆಕೆಯ ಹೆಸರು ಕೀರ್ತನ. ತನ್ನ ನವಜಾತ ಮಗುವಿನೊಂದಿಗೆ ಆಟವಾಡುತ್ತಾ, ಅದರ ಮುದ್ದಾದ ಮುಖವನ್ನು ಆರಾಧಿಸಿಕೊಂಡು ನೋಡುತ್ತಾ, ಸಂತೋಷದಿಂದ ಬದುಕು ಸಾಗಿಸುತ್ತಿದ್ದಳು. ಅದೊಂದು ದಿನ ಆಕೆ ಮಗುವಿನ ಮೈಬಣ್ಣ ಬದಲಾಗಿದ್ದನ್ನು ಗಮನಿಸಿದಳು. ಕೀರ್ತನಾಳ ಮಗುವಲ್ಲಿ ಮೊದಲ ಬಾರಿಯ ತಪಾಸಣೆಯಲ್ಲಿ ಯಾವುದೇ ತೊಂದರೆ ಕಾಣಿಸಿರಲಿಲ್ಲ. ಆದರೆ ಆ ಮಗುವಿನ ಚರ್ಮದ ಮೇಲೆ ಹಳದಿ ಟಿಂಟ್ ಬೆಳೆಯತೊಡಗಿತ್ತು.

ಇದರಿಂದ ಗಾಬರಿಗೊಂಡ ಕೀರ್ತನ ತನ್ನ ಮಗುವನ್ನ ಹಿಡಿದುಕೊಂಡು ಆಸ್ಪತ್ರೆಗೆ ಓಡಿದಳು. ಅಲ್ಲಿ ಮಗುವಿನ ಪರಿಸ್ಥಿತಿ ಕಂಡ ವೈದ್ಯರು ಕೂಡಲೇ ಆ ಮಗುವನ್ನ ನಿರ್ಜಲೀಕರಣ (ಡಿಹೈಡ್ರೇಶನ್) ಮತ್ತು ಬಹುಕಾಲದ ಹಸಿವಿನ ಕಾರಣಕ್ಕೆ ತೀವ್ರ ನಿಗಾ ಘಟಕ (ಐ.ಸಿ.ಯು)ಗೆ ಅಡ್ಮಿಟ್ ಮಾಡಿಕೊಂಡರು. ಆನಂತರ ವೈದ್ಯರು ಕೀರ್ತನಗೆ ಬಂದು ತಿಳಿಸಿದ ವಿಷಯವು ಆಕೆಯನ್ನ ಮಾನಸಿಕವಾಗಿ ಕುಗ್ಗಿಸಿಬಿಟ್ಟಿತು. ಅದು ಏನೆಂದರೆ ಕೀರ್ತನ ಉತ್ಪತ್ತಿ ಮಾಡುತ್ತಿದ್ದದ್ದು ಕೇವಲ 30 ಮಿಲಿಲೀಟರ್ ಹಾಲು ಅಷ್ಟೇ !

ತೀವ್ರ ನಿಗಾ ಘಟಕದಲ್ಲಿ ಕೆಲವು ದಿನಗಳನ್ನ ಕಳೆದ ಆಕೆಯ ಮಗು, ಕೊನೆಗೂ ಗುಣಮುಖವಾಯಿತು. ಇಲ್ಲಿ ನಿಜವಾಗಿಯೂ ಉಂಟಾಗಿದ್ದ ತೊಂದರೆ ಅಂದರೆ ಅದು ಎದೆಹಾಲಿನ ಉತ್ಪತ್ತಿಯಲ್ಲಿ ಕೊರತೆ. ಆದರೆ ಅದು ಮಾರಕವಾಗುವಂತೆ ಆಗಿದ್ದು, ಆ ತೊಂದರೆಯು ಪೋಷಕರ ಗಮನ ಬರಲು ಸಾಧ್ಯವಾಗದೆ ಇರುವುದು.

ಬಹಳಷ್ಟು ಪೋಷಕರು ಇದೊಂದು ವಿರಳ ಸಮಸ್ಯೆ ಎಂದು ಭಾವಿಸಿ, ತಮಗೆ ಇದು ಎದುರಾಗುವುದಿಲ್ಲ ಬಿಡಿ ಎಂದು ಅಸಡ್ಡೆ ತೋರಿ ಬಿಡುವವರು. ಆದರೆ ವಾಸ್ತವದಲ್ಲಿ ಇದೊಂದು ತುಂಬಾ ಸಾಮಾನ್ಯವಾದ ತೊಂದರೆಯಾಗಿದ್ದು, ಬಹಳಷ್ಟು ಪ್ರಮಾಣದಲ್ಲಿ ಕಾಣಿಸಿ ಕೊಳ್ಳುವಂತಹ ತೊಂದರೆ. ಎದೆಹಾಲಿನ ಕೊರತೆಗೆ ಕಾರಣಗಳು – ಹಿಂದೆ ಒಳಗಾಗಿದ್ದ ಸ್ತನ ಸರ್ಜರಿಗಳು, ಸಸ್ತನಿ ಸ್ನಾಯುಗಳ ಕೊರತೆ, ಥೈರಾಯಿಡ್ ಅಥವಾ ಇತರೆ ಹಾರ್ಮೋನ್ ತೊಂದರೆಗಳು – ಇವುಗಳೊಂದಿಗೆ ಇನ್ನೂ ಅನೇಕ ಕಾರಣಗಳಿವೆ.

ಕೇವಲ ಸ್ತನದ ಗಾತ್ರವಾಗಲಿ ಅಥವಾ ನಿರ್ದಿಷ್ಟ ಸಮಯದಲ್ಲಿ ಹಾಲು ಕೊಡುವುದರ ಮೂಲಕ ಹಾಲಿನ ಪ್ರಮಾಣ ಎಷ್ಟಿದೆ ಎಂದು ಕಂಡು ಹಿಡಿಯಲು ಸಾಧ್ಯವಿಲ್ಲ. ಹೀಗಾಗಿ ನೀವು ಮಗುವಿನ ಪ್ರತಿಯೊಂದು ವಿಷಯವನ್ನ ಸರಿಯಾಗಿ ಗಮನಿಸುತ್ತಲೇ ಇರಬೇಕು. ಮಗುವು ವಿಸರ್ಜಿಸುವ ಮಲದಿಂದ ಹಿಡಿದು, ಅದು ಹಾಲು ಕುಡಿಯುವಾಗ ಹೇಗೆ ಚೀಪುತ್ತಿದೆ, ಹೇಗೆ ಕುಡಿತಿದೆ ಎನ್ನುವವರೆಗೆ. ಹಾಲಿನ ಕೊರತೆ ಉಂಟಾಗಿದೆ ಎಂದು ಸುಲಭವಾಗಿ ಕಂಡು ಹಿಡಿಯುವುದು ನಿಮ್ಮ ಮಗುವಿನ ತೂಕದ ಬಗ್ಗೆ ಸರಿಯಾಗಿ ಲೆಕ್ಕವಿಡುವುದು. ಒಂದು ವೇಳೆ ನಿಮ್ಮ ಮಗುವು ಹುಟ್ಟಿದ ನಾಲ್ಕೈದು ದಿನಗಳ ನಂತರವೂ ತೂಕ ಹೆಚ್ಚಿಸಿಕೊಳ್ಳದಿದ್ದರೆ, ನೀವು ಕೂಡಲೇ ಮಕ್ಕಳ ತಜ್ನರನ್ನ ಭೇಟಿ ಮಾಡಬೇಕು.

Comments are closed.