ಆರೋಗ್ಯ

ಯಾವ ತರಹದ ನಿದ್ರಾಭಂಗಿಯಿಂದ ಬೆನ್ನುನೋವು ಶಮನಕ್ಕೆ ಸಹಕಾರಿ ಬಲ್ಲಿರಾ?

Pinterest LinkedIn Tumblr

ತಾಯಿ ಆಗುವುದು ಸುಲಭದ ಮಾತಲ್ಲ. ಅದರಲ್ಲೂ, ನೀವೇನಾದರೂ ಹೊರಗಡೆ ಕೆಳಸಕ್ಕೆ ಕೂಡ ಹೋಗುತ್ತೀರಾ ಎಂದರೆ, ನೀವು ಮನೆಯಲ್ಲೂ ಮೈ ಬಿದ್ದು ಹೋಗುವಂತೆ ಕೆಲಸ ಮಾಡಬೇಕು ಮತ್ತು ಹೊರಗಡೆಯೂ ದುಡಿಯಬೇಕು. ಇಷ್ಟೇ ಸಾಲದು ಎಂದು ನಿಮಗೆ ಪಿರಿಯಡ್ಸ್ ಸಮಯದಲ್ಲಿ ಮತ್ತು ಗರ್ಭಧಾರಣೆಯ ಸಮಯದಲ್ಲಿ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಕಛೇರಿಯಲ್ಲಿ ಬಹಳ ಹೊತ್ತು ಕುರ್ಚಿ ಮೇಲೆ ಕೂತು ಕೆಲಸ ಮಾಡುವ ಹೆಂಗಸರಿಗೆ ಮತ್ತು ಅಧಿಕ ತೂಕ ಹೊಂದಿರುವ ಹೆಂಗಸರಿಗೆ ಬೆನ್ನು ನೋವು ಕಾಣಿಸಿಕೊಳ್ಳುವುದು ಹೆಚ್ಚು.

ಎಲ್ಲಾ ಅಂದುಕೊಂಡಂತೆ ಇದ್ದರೆ, ನಮ್ಮ ಮೇಲಿನ ಒತ್ತಡವನ್ನ ಇಳಿಸಲು ನಾವು ಪ್ರತಿದಿನ ಸರಿಯಾಗಿ ಕಣ್ತುಂಬ ನಿದ್ದೆ ಮಾಡಿದರೆ ಸಾಕು, ಆದರೆ ಬೆನ್ನು ನೋವು ಇಟ್ಟುಕೊಂಡು ಸರಿಯಾಗಿ ನಿದ್ದೆ ಮಾಡುವುದಾದರೂ ಹೇಗೆ? ಖಂಡಿತವಾಗಿಯೂ ಆಗುವುದಿಲ್ಲ. ಹೀಗೆ ಸರಿಯಾಗಿ ನಿದ್ದೆ ಮಾಡದೆ ಇದ್ದರೆ, ಸ್ಥೂಲಕಾಯತೆ, ಹೃದ್ರೋಗಗಳು ಮತ್ತು ಖಿನ್ನತೆ ಉಂಟಾಗುವ ಸಾಧ್ಯತೆಗಳು ಹೆಚ್ಚುತ್ತವೆ.

ನೀವು ಕೂಡ ಈ ಬೆನ್ನು ನೋವಿನ ತೊಂದರೆಯನ್ನ ಅನುಭವಿಸುತ್ತಿದ್ದರೆ, ನೀವು ಸುಖವಾಗಿ ನಿದ್ರೆಗೆ ಜಾರಲು ಸಹಾಯ ಮಾಡುವ ಕೆಲವು ಭಂಗಿಗಳು ಯಾವು ಎಂಬುದನ್ನು ಇಲ್ಲಿ ತಿಳಿಸಿದ್ದೇವೆ ನೋಡಿ.

೧. ಒಂದು ಬದಿಗೆ ಮುಖ ಮಾಡಿ ಮಲಗುವುದು
ಒಂದು ವೇಳೆ ನಿಮಗೆ ಬೆನ್ನು ಕೆಳಗೆ ಮಾಡಿ ಮಲಗಲು ಕಷ್ಟವಾದರೆ, ನೀವು ಮಲಗುವ ಭಂಗಿಯನ್ನ ಬದಲಿಸಿಕೊಳ್ಳಿ. ಇದು ನಿಮ್ಮ ಬೆನ್ನಿನ ಮೇಲೆ ಹೇರಿರುವ ಸ್ವಲ್ಪ ಒತ್ತಡವನ್ನ ಕಡಿಮೆ ಮಾಡುತ್ತದೆ.
ಮೊದಲಿಗೆ ನಾಜೂಕಾಗಿ ನಿಮ್ಮ ಬೆನ್ನಿನ ಮೇಲೆ ಮಲಗಿ. ನಂತರ ಮೆಲ್ಲನೆ ನಿಮ್ಮ ಒಂದು ಬದಿಗೆ ತಿರುಗಿ.
ಈಗ ನಿಮ್ಮ ಕಾಲುಗಳನ್ನ ಎದೆಗೆ ಹತ್ತಿರವಾಗುವಂತೆ ಸ್ವಲ್ಪ ಮೇಲೆತ್ತಿ ಮತ್ತು ನಿಮ್ಮ ಎರಡು ಮೊಣಕಾಲುಗಳ ನಡುವೆ ಒಂದು ತಲೆದಿಂಬು ಇಟ್ಟುಕೊಳ್ಳಿ.
ತಲೆದಿಂಬು ನಿಮ್ಮ ಸೊಂಟ, ಶ್ರೋಣಿ ಮತ್ತು ಬೆನ್ನಿನ ಮೂಳೆಯನ್ನ ಸರಿಯಾಗಿ ಸಾಲುಗೂಡಿಸತ್ತದೆ.
ಆದರೆ ಪ್ರತಿದಿನ ಒಂದೇ ಕಡೆ ತಿರುಗಿಕೊಂಡು ಮಲಗಿಕೊಳ್ಳಬೇಡಿ. ಹಾಗೆ ಮಾಡಿದರೆ ಸ್ನಾಯು ಅಸಮಾನತೆ ಉಂಟಾಗುತ್ತದೆ.

೨. ನಿಮ್ಮ ಹೊಟ್ಟೆಯ ಮೇಲೆ ಮಲಗುವುದು
ಹೊಟ್ಟೆ ಕೆಳಗಿ ಮಾಡಿ ಮಲಗಿ
ನಿಮ್ಮ ಪಕ್ಕೆಯ ಕೆಳಗೆ ತಲೆದಿಂಬು ಇಟ್ಟುಕೊಳ್ಳಿ.
ಇದು ನಿಮ್ಮ ಬೆನ್ನು ಮೇಲಿನ ಒತ್ತಡವನ್ನ ಕಡಿಮೆ ಮಾಡುತ್ತದೆ.
ನಿಮಗೆ ಬೇಕಿದ್ದರೆ ತಲೆಯ ಕೆಳಗೆ ದಿಂಬು ಇಟ್ಟುಕೊಳ್ಳಿ, ಇಲ್ಲವಾದಲ್ಲಿ ಬೇಡ.
ನಿಮಗೆ ಬೇರೆ ಯಾವುದೇ ಭಂಗಿಯಲ್ಲಿ ನಿದ್ರಿಸಲು ಸಾಧ್ಯವಾಗಲಿಲ್ಲ ಎಂದರೆ ಈ ಭಂಗಿಯನ್ನ ಪ್ರಯತ್ನಿಸಿ.

೩. ಬೆನ್ನ ಮೇಲೆ ಮಲಗುವುದು
ನಿಮ್ಮ ಬೆನ್ನು ಕೆಳಗೆ ಮಾಡಿ ಮಲಗುವುದು, ನಿಮ್ಮ ಬೆನ್ನು ನೋವನ್ನು ಕಡಿಮೆ ಮಾಡಿಕೊಳ್ಳಲು ಅತ್ಯುತ್ತಮ ದಾರಿ. ನಿಮ್ಮ ತೂಕ ಹಂಚಿಕೆ ಸಮನಾಗಿ ಆಗುತ್ತದೆ ಮತ್ತು ನಿಮ್ಮ ಬೆನ್ನಿನ ಮೂಳೆಯು ಅಚ್ಚುಕಟ್ಟಾಗಿ ಸಾಲುಗೂಡಿರುತ್ತದೆ.
ನಿಮ್ಮ ಬೆನ್ನಿನ ಮೇಲೆ ಸಪಾಟಾಗಿ ಮಲಗಿ.
ನಿಮ್ಮ ಮೊಣಕಾಲುಗಳ ಕೆಳಗಡೆ ದಿಂಬನ್ನು ಇಟ್ಟುಕೊಳ್ಳಿ.

ಈ ಮಲಗುವ ಭಂಗಿಗಳೊಂದಿಗೆ, ನೀವು ಬೆನ್ನು ನೋವಿನೊಂದಿಗೆ ಸುಖವಾಗಿ ನಿದ್ರಿಸಲು ಕೆಲವೊಂದು ಸಲಹೆಗಳನ್ನ ಕೂಡ ನಾವು ನೀಡುತ್ತೇವೆ, ಓದಿ.

೧. ಮಲಗುವ ಭಂಗಿ
ಕೆಲವೊಂದು ಮಲಗುವ ಭಂಗಿಗಳು ನಿಮ್ಮ ಬೆನ್ನು ನೋವು ಕಡಿಮೆ ಮಾಡುತ್ತವೆ. ಹೀಗಾಗಿ ನೀವು ನಿಮಗೆ ಯಾವ ಭಂಗಿ ನೋವು ಕಡಿಮೆ ಮಾಡುತ್ತದೆ ಮತ್ತು ಆರಾಮಾಗಿ ನಿದ್ರಿಸಲು ಸಹಾಯ ಮಾಡುತ್ತವೆ ಎಂಬುದನ್ನ ನೋಡಿಕೊಳ್ಳಿ.

೨. ಹಾಸಿಗೆ
ಸರಿಯಾದ ಹಾಸಿಗೆ ಮೇಲೆ ಮಲಗದಿದ್ದರೆ, ನಿಮ್ಮ ಬೆನ್ನು ನೋವು ಮತ್ತಷ್ಟು ಜಾಸ್ತಿ ಆಗುತ್ತದೆ. ಹೀಗಾಗಿ, ನಿಮಗೆ ಹಿತಕರವೆನಿಸುವ ಹಾಸಿಗೆಯನ್ನ ನೀವು ಆಯ್ದುಕೊಳ್ಳಿ. ಸಾಮಾನ್ಯವಾಗಿ, ವೈದ್ಯರು ಸ್ವಲ್ಪ ಮೆತ್ತಗಿರುವ ಮತ್ತು ಬಿಗಿಯಾಗಿರುವ ಹಾಸಿಗೆಯನ್ನ ಶಿಫಾರಸ್ಸು ಮಾಡುತ್ತಾರೆ.

೩. ತಲೆದಿಂಬು
ತಲೆದಿಂಬು ನಮ್ಮ ನಮ್ಮ ಬೆನ್ನಿನ ಮೂಳೆಯ ಸರಿಯಾದ ಅಲೈನ್ಮೆಂಟ್ ಗೆ ತುಂಬಾನೇ ಮುಖ್ಯವಾದದ್ದು. ಹೀಗಾಗಿ ಸೂಕ್ತವಾದ ತಲೆದಿಂಬು ಬಳಸಿ.
ನೀವು ನಿಮ್ಮ ಬೆನ್ನ ಮೇಲೆ ಮಲಗುತ್ತಿದ್ದಿರಾ ಎಂದಾದಲ್ಲಿ, ಫೋಮ್ ಇಂದ ಮಾಡಿರುವ ದಿಂಬನ್ನು ಬಳಸಿ.
ನೀವು ನಿಮ್ಮ ಹೊಟ್ಟೆಯ ಮೇಲೆ ಮಲಗುತ್ತಿದ್ದಿರಾ ಎಂದರೆ ತೆಳ್ಳನೆ ದಿಂಬು ಬಳಸಿ ಅಥವಾ ಬಳಸಲೇ ಬೇಡಿ.
ನೀವು ನಿಮ್ಮ ಬದಿಗೆ ಮುಖ ಮಾಡಿ ಮಲಗುತ್ತೀರಾ ಎಂದರೆ ಸ್ವಲ್ಪ ಗಟ್ಟಿಯಾದ ದಿಂಬನ್ನು ಬಳಸಿ.

೪. ಯೋಗ
ಅಧ್ಯಯನಗಳು ಯೋಗ ಬೆನ್ನು ನೋವು ಕಡಿಮೆ ಮಾಡುತ್ತದೆ ಎಂಬುದನ್ನು ತಿಳಿಸಿವೆ. ಆದರೆ ತಪ್ಪಾದ ವ್ಯಾಯಾಮಗಳನ್ನ ಮಾಡಿದರೆ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. ಹೀಗಾಗಿ ನಿಮ್ಮ ವೈದ್ಯರನ್ನ ಭೇಟಿ ಮಾಡಿ ನಿಮ್ಮ ಬೆನ್ನು ನೋವು ಕಡಿಮೆ ಮಾಡಿಕೊಳ್ಳಲು ಸೂಕ್ತವಾದ ವ್ಯಾಯಾಮಗಳು ಯಾವೆಂದು ತಿಳಿದುಕೊಳ್ಳಿ.

೫. ಸಂಗೀತ
ಸಂಗೀತವು ಯಾವಾಗಲೂ ನೋವನ್ನ ಕಡಿಮೆ ಮಾಡುತ್ತದೆ. ನೀವು ಮಲಗುವ ಮುನ್ನ ತಿಳಿಯಾದ ಸಂಗೀತವನ್ನ ಆಲಿಸಿ. ಈ ಸಂಗೀತವು ನೀವು ನಿಮ್ಮ ನೋವನ್ನು ಮರೆಯುವಂತೆ ಮಾಡಿ ಹಾಯಾಗಿ ನಿದ್ದೆಗೆ ಜಾರುವಂತೆ ಮಾಡುತ್ತದೆ.

೬. ದೈಹಿಕ ಚಟುವಟಿಕೆಗಳು
ಕೆಲವೊಂದು ದೈಹಿಕ ಚಟುವಟಿಕೆಗಳು ಅಥವಾ ದಿಢೀರ್ ಚಲನವಲನಗಳು ಬೆನ್ನು ನೋವು ಉಂಟು ಮಾಡಬಹುದು. ಆರಾಮಾಗಿ ನಿಮ್ಮ ಎರಡೂ ಕೈಗಳ ಸಹಾಯ ಪಡೆದುಕೊಂಡು ಮೆಲ್ಲನೆ ಮಂಚದಿಂದ ಏಳಿ.

Comments are closed.