ಆರೋಗ್ಯ

ಪ್ರಜ್ಞೆ ತಪ್ಪಿ ಬಿದ್ದ ವ್ಯಕ್ತಿ ಕಂಡರೆ ಏನು ಮಾಡಬೇಕು?

Pinterest LinkedIn Tumblr

ಮಿದುಳಿಗೆ ಸಡನ್ ಆಗಿ ರಕ್ತ ಸಂಚಲನ ನಿಂತುಹೋದಾಗ ಪ್ರಜ್ಞೆ ತಪ್ಪುವುದು ನಡೆಯುತ್ತದೆ. ಉದಾಹರಣೆಗೆ… ಅಚಾನಕ್ ಆಗಿ ಯಾವುದಾದರೂ ಕೇಳಬಾರದ ಸುದ್ದಿ ಕೇಳಿದಾಗ, ಬಹಳ ಹೊತ್ತು ಎತ್ತಲೂ ಕದಲದೆ ನಿಂತಿದ್ದಾಗ, ತಲೆಗೆ ಯಾವುದಾದರೂ ವಸ್ತು ಜೋರಾಗಿ ತಗುಲಿದಾಗ ಈ ರೀತಿ ನಡೆಯುತ್ತದೆ. ಪ್ರಜ್ಞೆ ತಪ್ಪಿ ಬೀಳುವುದು ಎನ್ನುವುದು ಬಹಳಷ್ಟು ಸಲ ತಾತ್ಕಾಲಿಕವಾಗಿ ನಡೆಯುತ್ತದೆ. ಕೆಲವು ನಿಮಿಷಗಳಲ್ಲಿ ಆ ವ್ಯಕ್ತಿ ಮಾಮೂಲಿ ಸ್ಥಿತಿಗೆ ಬರುತ್ತಾನೆ. ಆದರೆ ಕೆಲವು ಸಂದರ್ಭಗಳಲ್ಲಿ ಪ್ರಾಣ ಸಹ ಹೋಗುವ ಪರಿಸ್ಥಿತಿ ಸಹ ಬರುತ್ತದೆ.

ಪ್ರಜ್ಞೆ ತಪ್ಪಿ ಬಿದ್ದರೆ ಏನು ಮಾಡಬೇಕು?

ಪ್ರಜ್ಞೆ ತಪ್ಪಿ ಬಿದ್ದುಹೋದ ವ್ಯಕ್ತಿಯನ್ನು ಅಂಗಾತ ಮಲಗಿಸಿ ಆತನ ಕಾಲುಗನ್ನು 8 ರಿಂದ 12 ಇಂಚು ಎತ್ತರದಲ್ಲಿ ಇರುವಂತೆ
ಯಾವುದರ ಮೇಲಾದರೂ ಇಡಬೇಕು. (ತಲೆಗೆ ಗಾಯವಾಗದೆ ಇದ್ದಾಗ ಮಾತ್ರ)
ಪ್ರಜ್ಞೆ ತಪ್ಪಿದ ವ್ಯಕ್ತಿ ಬಿಗಿಯಾದ ಬಟ್ಟೆಗಳನ್ನು ಧರಿಸಿದ್ದರೆ, ಅವರನ್ನು ಸಡಿಲ ಮಾಡಬೇಕು. (ಬಟನ್ಸ್, ಬೆಲ್ಟ್)
ಮೆತ್ತಗಿನ ಒದ್ದೆ ಬಟ್ಟೆಯನ್ನು ಹಣೆ ಮೇಲೆ ಇಡಬೇಕು.

ವೈದ್ಯರನ್ನು ಭೇಟಿಯಾಗಬೇಕಾದ ಸಂದರ್ಭಗಳು:
ವ್ಯಕ್ತಿಗೆ 40 ವರ್ಷಗಳಿಗಿಂತ ಹೆಚ್ಚು ವಯಸ್ಸಾಗಿದ್ದರೆ…. ಪದೇ ಪದೇ ಪ್ರಜ್ಞೆ ಕಳೆದುಕೊಳ್ಳುತ್ತಿದ್ದರೆ…
4 ಅಥವಾ 5 ನಿಮಿಷಗಳ ಕಾಲ ಪ್ರಜ್ಞೆ ಕಳೆದುಕೊಂಡಿದ್ದರೆ…
ಕುಳಿತಿದ್ದಾಗ ಅಥವಾ ಮಲಗಿದ್ದಾಗ ಪ್ರಜ್ಞೆ ಕಳೆದುಕೊಂಡರೂ, ಈ 3 ಸಂದರ್ಭಗಳಲ್ಲಿ ಕೂಡಲೆ ವೈದ್ಯರನ್ನು ಭೇಟಿಯಾಗಬೇಕು.

Comments are closed.