ಆರೋಗ್ಯ

ಬೆಹರೈನ್‌ನಿಂದ ಬಂದಿದ್ದ ಸುರತ್ಕಲ್‌ನ ಮಹಿಳೆ ಹಾಗೂ ವಿಮಾನ ಸಿಬ್ಬಂದಿ ಸಹಿತ ನಾಲ್ವರಲ್ಲಿ ಕೊರೋನಾ ಪತ್ತೆ.

Pinterest LinkedIn Tumblr

ಮಂಗಳೂರು,ಜೂನ್. 02: ಬೆಹರೈನ್ ನಿಂದ ಫೆಬ್ರವರಿ ತಿಂಗಳಲ್ಲಿ ಮರಳಿದ್ದ ಸುರತ್ಕಲ್ ನಿವಾಸಿ 24ರ ಹರೆಯದ ಮಹಿಳೆ, ಮೇ 20ರಂದು ದುಬೈಯಿಂದ ಸಂಕಷ್ಟಕ್ಕೆ ಸಿಲುಕಿದ್ದವರನ್ನು ಕರೆತಂದಿದ್ದ ಏರ್ ಇಂಡಿಯಾ ವಿಮಾನದ ಸಿಬ್ಬಂದಿ ಸಹಿತ ನಾಲ್ವರಲ್ಲಿ ಸೋಮವಾರ ಕೊರೋನಾ ಸೋಂಕು ಪತ್ತೆಯಾಗಿದೆ.

ಬೆಳ್ತಂಗಡಿ ತಾಲೂಕಿನ ಕಲ್ಲೇರಿ ನಿವಾಸಿ 45ರ ಹರೆಯದ ಮಹಿಳೆಗೆ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು ಗಂಟಲ ದ್ರವ ಪರೀಕ್ಷೆಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಇನ್ನು ಸುರತ್ಕಲ್ ನಿವಾಸಿ ಮಹಿಳೆ ಕಳೆದ ಫೆ. ತಿಂಗಳಲ್ಲಿ ಬೆಹರೈನ್ ನಿಂದ ಬಂದಿದ್ದು ವಾಪಾಸ್ ಬೆಹರೈನ್ ತೆರಳುವ ಮುನ್ನ ಗಂಟಲ ದ್ರವ ಪರೀಕ್ಷೆ ನಡೆಸಿದ್ದು ಅದರಲ್ಲಿ ಸೋಂಕು ದೃಢಪಟ್ಟಿದೆ. ಇವರ ಸಂಪರ್ಕದಲ್ಲಿ ನೂರಾರು ಮಂದಿ ಇದ್ದು ಅವರ ಟ್ರಾವೆಲ್ ಹಿಸ್ಟರಿ ಕಲೆ ಹಾಕಲಾಗುತ್ತಿದೆ.

50 ವರ್ಷದ ವ್ಯಕ್ತಿ ಗುಜರಾತ್ ನಿಂದ ಬಂದಿದ್ದರೆ, 27 ವರ್ಷದ ವ್ಯಕ್ತಿ ವಿಮಾನದ ಸಿಬ್ಬಂದಿಯಾಗಿದ್ದು ಮರಳಿ ಕರ್ತವ್ಯಕ್ಕೆ ಹಾಜರಾಗುವ ಮುನ್ನ ಪರೀಕ್ಷೆ ನಡೆಸಿದ್ದು ಸೋಂಕು ದೃಢಪಟ್ಟಿದೆ. ಎಲ್ಲರಿಗೂ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

Comments are closed.