ಮುಖ ಸುಂದರವಾಗಿ ಕಾಣಿಸಬೇಕೆಂದು ಬಹಳಷ್ಟು ಮಂದಿ ಅದಕ್ಕೆ ಅನೇಕ ರೀತಿಯ ಕ್ರೀಮುಗಳನ್ನು ಹಚ್ಚುತ್ತಿರುತ್ತಾರೆ. ಕೆಲವರು ಪೌಡರು, ಫೇಸ್‍ಪ್ಯಾಕ್ ಹಾಕುತ್ತಿರುತ್ತಾರೆ. ಇನ್ನೂ ಕೆಲವರು ಬ್ಯೂಟಿ ಪಾರ್ಲರ್‌ಗೆ ಹೋಗಿ ಫೇಷಿಯಲ್ ಮಾಡಿಸಿಕೊಳ್ಳುವ ಕೆಲಸ ಮಾಡುತ್ತಿರುತ್ತಾರೆ. ಆದರೆ ನಿಮಗೆ ಗೊತ್ತಾ..? ಮುಖ ಅಂದವಾಗಿ, ಕಾಂತಿಯುತವಾಗಿ ಬದಲಾಗಬೇಕೆಂದರೆ ಅದಕ್ಕೆ ಈ ಕೆಲಸಗಳೆಲ್ಲಾ ಮಾಡಬೇಕಾದ ಅಗತ್ಯವಿಲ್ಲ. ಹಾಗಿದ್ದರೆ ಇನ್ನೇನು ಮಾಡಬೇಕು..? ಅದನ್ನೇ ಈಗ ಹೇಳಲಿದ್ದೇವೆ. ಏನೂ ಇಲ್ಲ. ಕೆಳಗೆ ತಿಳಿಸಿದ ಕೆಲವು ವಿಧದ ಆಯಿಲ್ಸ್, ಲಿಕ್ವಿಡ್‌ಗಳನ್ನು ನಿಮ್ಮ ಹೊಕ್ಕುಳಲ್ಲಿ ಹಾಕಿ ನೋಡಿ. ಅದರಿಂದ ಮುಖದ ಕಾಂತಿ ಹೇಗೆ ಬದಲಾಗುತ್ತದೆ ಎಂದು. ಮುಖಕ್ಕೆ ಸಂಬಂಧಿಸಿದ ಕೆಲವು ನಾಡಿಗಳು ಹೊಕ್ಕಳಿಗೆ ಕನೆಕ್ಟ್ ಆಗಿರುತ್ತವೆ. ಹಾಗಾಗಿ ಈ ಟ್ರೀಟ್‍ಮೆಂಟ್ ಪಕ್ಕಾ ವರ್ಕ್‌ಔಟ್ ಆಗುತ್ತದೆ. ಹಾಗಿದ್ದರೆ ಆ ಆಯಿಲ್ಸ್, ಲಿಕ್ವಿಡ್ಸ್ ಏನು ಅಂತ ತಿಳಿದುಕೊಳ್ಳೋಣವೇ..!
1. ಬಾದಾಮಿ ಎಣ್ಣೆ
ನಿತ್ಯ ಮೂರು ಸಲ, ಅಂದರೆ ಬೆಳಗ್ಗೆ, ಮಧ್ಯಾಹ್ನ, ಸಂಜೆ ಹೊಕ್ಕಳಲ್ಲಿ ಒಂದೆರಡು ಹನಿ ಬಾದಾಮಿ ಎಣ್ಣೆ ಹಾಕಿ ಹಾಗೆಯೇ ಸ್ವಲ್ಪ ಸಮಯ ಮೇಲ್ಮುಖವಾಗಿ ಮಲಗಿ. ಈ ರೀತಿ ಮಾಡುತ್ತಿದ್ದರೆ ಮುಖ ಕಾಂತಿಯುತವಾಗಿ ಬದಲಾಗುತ್ತದೆ. ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಕಣ್ಣಿನ ಕೆಳಗಿನ ಕಪ್ಪುಕಲೆಗಳು ನಿವಾರಣೆಯಾಗುತ್ತವೆ.
2. ತುಪ್ಪ
ನಿತ್ಯ ಎರಡು ಸಲ ತುಪ್ಪದ ಹನಿಗಳನ್ನು ಹೊಕ್ಕುಳಲ್ಲಿ ಹಾಕಿ ಸ್ವಲ್ಪ ಸಮಯ ಮೇಲ್ಮುಖವಾಗಿ ಮಲಗಿಕೊಳ್ಳಬೇಕು. ಹೀಗೆ ಮಾಡುವುದರಿಂದ ಚರ್ಮ ಕಾಂತಿಯುತವಾಗಿ, ಅಂದವಾಗಿ ಬದಲಾಗುತ್ತದೆ. ಡ್ರೈ ಸ್ಕಿನ್ ಸಮಸ್ಯೆ ನಿವಾರಣೆಯಾಗುತ್ತದೆ.
3. ಜೇನು
ಜೇನನ್ನೂ ಸಹ ನಿತ್ಯ ಎರಡು ಸಲ ಹೊಕ್ಕುಳಲ್ಲಿ ಹಾಕಿಕೊಂಡರೆ ಅದೇ ರೀತಿ ಮೇಲ್ಮುಖವಾಗಿ 20 ನಿಮಿಷ ಮಲಗಬೇಕು. ಆ ಬಳಿಕ ತೊಳೆದುಕೊಳ್ಳಬೇಕು. ಈ ರೀತಿ ಮಾಡುವುದರಿಂದ ಮೊಡವೆಗಳು ಬರಲ್ಲ. ಮುಖ ಮೃದುವಾಗಿ ಬದಲಾಗುತ್ತದೆ. ಅಂದವಾಗಿ ತಯಾರಾಗುತ್ತದೆ.
4. ಸಾಸಿವೆ ಎಣ್ಣೆ
ಸಾಸಿವೆ ಎಣ್ಣೆಯನ್ನು ನಿತ್ಯ ಹೊಕ್ಕುಳಲ್ಲಿ ಹಾಕಿಕೊಳ್ಳುತ್ತಿದ್ದರೂ ಮುಖ ಅಂದವಾಗಿ ಬದಲಾಗುತ್ತದೆ. ಇದರಿಂದ ಮೃದುವಾಗಿ ಬದಲಾಗುತ್ತದೆ. ಸುಕ್ಕುಗಳು ನಿವಾರಣೆಯಾಗುತ್ತವೆ.
5. ಆಲೀವ್ ಎಣ್ಣೆ
ಚರ್ಮದ ಕಾಂತಿಗೆ, ಕೋಮಲತೆಗಳನ್ನು ಕೊಡುವ ಗುಣ ಆಲೀವ್ ಎಣ್ಣೆಯಲ್ಲಿದೆ. ಇದನ್ನು ನಿತ್ಯ ಹೊಕ್ಕುಳಲ್ಲಿ ಹಾಕಿಕೊಂಡರೆ ಚರ್ಮ ಕಾಂತಿಯುತವಾಗಿ ಬದಲಾಗುತ್ತದೆ. ಮುಖಕ್ಕೆ ಅಂದವನ್ನು ನೀಡುತ್ತದೆ. ಕಪ್ಪು ವಲಯಗಳು, ಮಚ್ಚೆಗಳು ನಿವಾರಣೆಯಾಗುತ್ತದೆ.
Comments are closed.