ಆರೋಗ್ಯ

ಗರ್ಭಿಣಿಯರು ಈ ವಿಷಯಗಳನ್ನು ತಿಳಿದುಕೊಳ್ಳಲೇ ಬೇಕು….

Pinterest LinkedIn Tumblr

ಗರ್ಭಿಣಿ ಎಂದು ಗೊತ್ತದ ತಕ್ಷಣ ಆ ಮಹಿಳೆಗೆ ಮನೆಯವರು ಮತ್ತು ವೈದ್ಯರು ಸಾಕಷ್ಟು ಸಲಹೆ ಸೂಚನೆಗಳನ್ನು ನೀಡುತ್ತಾರೆ. ಗರ್ಭಿಣಿಯರು ಆಹಾರದ ಬಗ್ಗೆ ಎಚ್ಚರಿಕೆವಹಿಸಿಬೇಕು. ಹೆಚ್ಚು ಮಾನಸಿಕ ಒತ್ತಡ ತಂದುಕೊಳ್ಳಬಾರದು ಹಾಗೂ ತಿಂಗಳಿಗೆ ಸರಿಯಾಗಿ ಚೆಕಪ್ ಮಾಡಿಸಬೇಕು ಈ ರೀತಿಯೆಲ್ಲಾ ಮಾರ್ಗದರ್ಶನ ನೀಡುತ್ತಾರೆ. ಮನೆಯವರ ಕೆಲವು ಸಲಹೆಗಳು ಕೇವಲ ನಂಬಿಕೆ ಮತ್ತು ಅರ್ಧ ಸತ್ಯವಾಗಿರುತ್ತದೆ. ವೈದ್ಯರ ಸಲಹೆಗಳಲ್ಲಿ ವೈಜ್ಞಾನಿಕ ಸತ್ಯವಿರುತ್ತದೆ.

ಗರ್ಭಧಾರಣೆಯ ಸಮಯದಲ್ಲಿ ಸಾಕಷ್ಟು ನೀರು ಸೇವಿಸುವುದು ಅಗತ್ಯ. ಪ್ರತಿ ದಿನ ಮೂರರಿಂದ ನಾಲ್ಕು ಲೀಟರ್ ನೀರು ಕುಡಿಯಲೇಬೇಕು.

ನೀವು ಉತ್ತಮವಾದ ಆಹಾರಾಭ್ಯಾಸವನ್ನು ಅಳವಡಿಸಿಕೊಳ್ಳವುದು ಆರೋಗ್ಯದಾಯಕ ಗರ್ಭಧಾರಣೆ ಹಾಗೂ ಶಿಶುವನ್ನು ಹೊಂದಲು ಸಹಾಯಕ.

ಗರ್ಭಧಾರಣೆಯ ಸಮಯದಲ್ಲಿ ಧೂಮಪಾನ ಹಾಗೂ ಮದ್ಯಪಾನವನ್ನು ತ್ಯಜಿಸಬೇಕು. ಧೂಮಪಾನ ಅಥವಾ ಮಧ್ಯಪಾನ ಗರ್ಭಿಣಿಯರಿಗೆ ಅಪಾಯಕಾರಿಯಾಗಿದೆ.

ಗರ್ಭಿಣಿಯರು ಜನನ ಪೂರ್ವ ಮುನ್ನೆಚ್ಚರಿಕೆಗಳನ್ನು ಪಡೆದುಕೊಳ್ಳಬೇಕು. ಗರ್ಭಾವಸ್ಥೆಯ ಸಮಯದಲ್ಲಿ ವೈದ್ಯರನ್ನು ನಿಯಮಿತವಾಗಿ ಭೇಟಿಯಾಗಿ ಸಲಹೆ ಸೂಚನೆ ಪಡೆಯಬೇಕು.

ಗರ್ಭಾವಸ್ಥೆಯ ಸಮಯದಲ್ಲಿ ಅಂಗಾತವಾಗಿ ಮಲಗುವುದು ಹಾನಿಕಾರಕ. ಎಡಮಗ್ಗುಲಿನಲ್ಲಿ ಮಲಗುವುದರಿಂದ ಗರ್ಭದಲ್ಲಿರುವ ಮಗುವಿಗೆ ಹೆಚ್ಚಿನ ಆಮ್ಲಜನಕ ದೊರೆಯುತ್ತದೆ.

ಗರ್ಭಿಣಿಯರು 1ಎಂಜಿ ಫೋಲಿಕ್ ಆಸಿಡ್‌ನ್ನು ತೆಗೆದುಕೊಳ್ಳಲೇಬೇಕು. ಫೋಲಿಕ್ ಆಸಿಡ್ ಮಗುವಿನ ಮೆದುಳಲ್ಲಿ ಹಾಗೂ ಸ್ಫೈನಲ್ ಕಾರ್ಡ್ ನಲ್ಲಿ ಉದ್ಭವಿಸುವ ತೊಂದರೆ ನಿವಾರಿಸಲು ನೆರವಾಗುತ್ತದೆ.

Comments are closed.