ಆರೋಗ್ಯ

ರಕ್ತದೊತ್ತಡ, ಇರುಳು ಕುರುಡುತನ ನಿವಾರಣೆಗೆ ಈ ಹಣ್ಣು ಅತ್ಯುತ್ತಮ.

Pinterest LinkedIn Tumblr

ಹಲಸಿಲು ಹಣ್ಣು ನೋಡಲು ಎಷ್ಟು ಒರಟೊ ತಿನ್ನಲು ಅಷ್ಟೇ ರುಚಿ. ಹಲಸಿನ ಹೆಸರು ಕೇಳಿದರೆ ಸಾಕು ಬಾಯಿಯಲ್ಲಿ ನೀರು ಬರುವುದು ಖಂಡಿತ. ಈ ಹಲಸಿನ ಹಣ್ಣನ್ನ ತಿನ್ನುವುದರ ಬಗ್ಗೆ ಕೆಲವರಲ್ಲಿ ಭಿನ್ನಾಭಿಪ್ರಾಯಗಳಿವೆ. ಈ ಹಣ್ಣನ್ನ ತಿಂದರೆ ಕಾಯಿಲೆಗಳು ಬರುತ್ತವೆ. ಸಂದಿವಾತವಾಗುತ್ತದೆ ಎನ್ನುತ್ತಾರೆ. ಇಂತಹ ಯಾವುದೇ ಭಿನ್ನಾಭಿಪ್ರಾಯಗಳಿದ್ದರು ಈ ಲೇಖನವನ್ನ ಓದಿದರೆ ಭಿನ್ನಾಭಿಪ್ರಾಯಗಳು ದೂರವಾಗುವಾಗ ಬಹುದು.

ಹಲಸಿನ ಹಣ್ಣು ತಿಂದರೆ ಕಾಯಿಲೆ ಬರುತ್ತದೆ ಎಂದು ಹಲವಾರು ತಿಳಿದಿದ್ದಾರೆ. ಆದರೆ ಇದನ್ನು ತಿಂದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಹಲಸಿನ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಉತ್ತಮ ಪೋಷಕಾಂಶಗಳಿದ್ದು ಶೀತ, ಸೋಂಕು ಇವುಗಳನ್ನು ತಪ್ಪಿಸಲು ಸಹಕಾರಿಯಾಗಿದೆ. ಇದರಲ್ಲಿ ಆಂಟಿಆಕ್ಸಿಡೆಂಟ್ ಪ್ರಮಾಣ ಅಧಿಕವಾಗಿದೆ.

ರಕ್ತದೊತ್ತಡವನ್ನ ಕಡಿಮೆ ಮಾಡುತ್ತದೆ : ಒಂದು ಹಲಸಿನ ಹಣ್ಣಿನಲ್ಲಿ ಬಾಳೆಹಣ್ಣಿನಲ್ಲಿರುವಷ್ಟು ಪೊಟಾಷ್ಯಿಯಂ ಅಂಶವಿರುತ್ತದೆ. ಪೊಟಾಷ್ಯಿಯಂ ದೇಹದಲ್ಲಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವಲ್ಲಿ ಸಹಕಾರಿಯಾಗಿದೆ.

ಇರುಳು ಕುರುಡು ನಿವಾರಣೆ : ಇದರಲ್ಲಿ ಕ್ಯಾರೆಟ್ ನಲ್ಲಿರುವ ಕಾಲು ಭಾಗದಷ್ಟು ವಿಟಮಿನ್ ಎ ಅಂಶವಿರುವುದರಿಂದ ಈ ಹಣ್ಣು ದೃಷ್ಟಿ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ವಿಟಮಿನ್ ಎ ಕೊರತೆ ಉಂಟಾದರೆ ಇರುಳು ಕುರುಡುತನ ಉಂಟಾಗುವುದು.

ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ : ಇದರಲ್ಲಿರುವ ವಿಟಮಿನ್ ಮತ್ತು ಖನಿಜಾಂಶಗಳು ದೇಹದಲ್ಲಿ ರಕ್ತ ಸರಾಗವಾಗಿ ಹರಿಯಲು ಸಹಕಾರಿಯಾಗಿದೆ. ಮೂಳೆಗಳನ್ನು ಬಲಪಡಿಸಿ ಶರೀರದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಯನ್ನು ತಡೆಗಟ್ಟುತ್ತದೆ.

ದೇಹದಲ್ಲಿನ ಸಕ್ಕರೆ ಅಂಶ ಕಡಿಮೆ ಮಾಡುತ್ತದೆ : ದೇಹದಲ್ಲಿ ಖನಿಜಾಂಶಗಳ ಕೊರತೆ ಉಂಟಾದರೆ ದೇಹದಲ್ಲಿ ಸಕ್ಕರೆ ಪ್ರಮಾಣ ಅಧಿಕವಾಗುತ್ತದೆ. ಹಲಸಿನ ಹಣ್ಣಿನಲ್ಲಿ ಖನಿಜಾಂಶಗಳು ಅಧಿಕವಾಗಿ ಇರುವುದರಿಂದ ದೇಹದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ.

ಮೂಳೆಗಳಿಗೆ ಶಕ್ತಿ ನೀಡುತ್ತದೆ : ಈ ಹಣ್ಣಿನಲ್ಲಿ ಅಧಿಕ ಮ್ಯಾಗ್ನಿಷಿಯಂ ಮತ್ತು ಕ್ಯಾಲ್ಸಿಯಂ ಅಂಶವಿರುವುದರಿಂದ ಮೂಳೆಗಳನ್ನು ಬಲಪಡಿಸಲು ಸಹಕಾರಿಯಾಗಿದೆ. ಮ್ಯಾಗ್ನಿಷಿಯಂ, ಕ್ಯಾಲ್ಸಿಯಂ, ಪೊಟಾಷ್ಯಿಯಂ ಅಧಿಕವಿರುವ ಆಹಾರ ತಿಂದರೆ ಮೂಳೆಗಳು ಗಟ್ಟಿಯಾಗುವುದು.

ಥೈರಾಯ್ಡ್ ಗ್ರಂಥಿಗೆ ಉತ್ತಮ : ಹಲಸಿನ ಹಣ್ಣಿನಲ್ಲಿರುವ ಖನಿಜಂಶಗಳು (ಮಿಕ್ರೋಮಿನೆರಲ್) ಥೈರಾಯ್ಡ್ ಗ್ರಂಥಿಯ ಆರೋಗ್ಯವನ್ನು ಕಾಪಾಡುತ್ತದೆ. ದೇಹದಲ್ಲಿ ಹಾರ್ಮೋನ್ ಗಳ ಉತ್ಪತ್ತಿಯನ್ನು ಸರಿ ಪ್ರಮಾಣದಲ್ಲಿ ಇಡಲು ಥೈರಾಯ್ಡ್ ಗ್ರಂಥಿ ಮುಖ್ಯ ಪಾತ್ರವಹಿಸುತ್ತದೆ.

ರಕ್ತ ಹೀನತೆಯನ್ನು ತಡೆಗಟ್ಟುತ್ತದೆ : ಇದರಲ್ಲಿ ಕಬ್ಬಿಣದಂಶ ಕೂಡ ಇರುವುದರಿಂದ ರಕ್ತ ಹೀನತೆ ಸಮಸ್ಯೆ ನಿವಾರಣೆಗೆ ಇದನ್ನು ತಿನ್ನುವುದು ಒಳ್ಳೆಯದು.

Comments are closed.