ಆರೋಗ್ಯ

23 ಮಂದಿ ಕುಂದಾಪುರದವರ ಸಹಿತ ಇಂದು ಉಡುಪಿ ಜಿಲ್ಲೆಯಲ್ಲಿ 29 ಕೊರೋನಾ ಪಾಸಿಟಿವ್ ದೃಢ

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಗುರುವಾರ ಮತ್ತೆ ಕೋರೊನಾ ಆರ್ಭಟ ಮುಂದುವರೆದಿದ್ದು ಸಂಜೆ ಮತ್ತೆ 2 ಪ್ರಕರಣಗಳು ಹೊಸದಾಗಿ ಪತ್ತೆಯಾಗಿದ್ದು ಒಟ್ಟು ಒಂದೇ ದಿನ ಜಿಲ್ಲೆಯಲ್ಲಿ 29ಪಾಸಿಟಿವ್ ಪ್ರಕರಣಗಳು ದೃಢವಾಗಿದೆ. ಬೆಳಿಗ್ಗೆನ ಬುಲೆಟಿನ್ ಪ್ರಕಾರ 27 ಮಂದಿಗೆ ಪಾಸಿಟಿವ್ ಇತ್ತು.

ಕುಂದಾಪುರದ 23 ಮಂದಿ, ಕಾರ್ಕಳದ 5 ಮಂದಿ ಹಾಗೂ ಉಡುಪಿಯ ಒಬ್ಬರಲ್ಲಿ‌ ಕೊರೋನಾ ಸೋಂಕಿರುವುದು ಇಂದು ದೃಢವಾಗಿದೆ. ಇವರಲ್ಲಿ 20 ಮಂದಿ ಪುರುಷರು, 8 ಮಂದಿ ಮಹಿಳೆಯರು ಹಾಗೂ 6 ವರ್ಷದ ಹೆಣ್ಣು ಮಗುವಿನಲ್ಲಿ ಸೋಂಕಿದೆ.

ಸದ್ಯ ಉಡುಪಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 149 ಕ್ಕೇರಿದೆ.

Comments are closed.