ಆರೋಗ್ಯ

ಆರೋಗ್ಯಕರ ಹಲ್ಲು ಬೇಕೇ .? ಹಾಗದರೆ ಬ್ರೆಷ್ ಮಾಡುವ ರೀತಿ ನೀತಿ ತಿಳಿದುಕೊಳ್ಳಿ

Pinterest LinkedIn Tumblr

ಹೌದು ತುಂಬಾ ಸಮಯ ಹಲ್ಲನ್ನು ಬ್ರೆಷ್ ಮಾಡುವುದು ಒಳ್ಳೆಯದಲ್ಲ ಯಾಕೆ ಅಂತ ತಜ್ಞರು ಇಲ್ಲಿ ತಿಳಿಸಿದ್ದಾರೆ ನೋಡಿ.ಅತಿ ಹೆಚ್ಚು ಸಮಯ ಹಲ್ಲುಜ್ಜುವುದು ಹಾಗೂ ಕಾರ್ಬೊನೇಟ್ ಅಂಶಗಳನ್ನು ಹೊಂದಿರುವ ತಂಪು ಪಾನೀಯಗಳ ಬಳಕೆಯನ್ನು ತ್ಯಜಿಸುವುದು ಹಲ್ಲುಗಳ ಆರೋಗ್ಯಕ್ಕೆ ಒಳ್ಳೆಯದೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ನಾವು ಹೆಚ್ಚು ಸಮಯ ಹಲ್ಲುಜ್ಜುವುದು ಸೂಕ್ತವಲ್ಲ. ಅಮೆರಿಕನ್ ಡೆಂಟಲ್ ಅಸೋಸಿಯೇಷನ್ ಶಿಫಾರಸ್ಸಿನ ಪ್ರಕಾರ 2-3 ನಿಮಿಷಗಳ ಕಾಲ ಹಲ್ಲುಜ್ಜುವುದು ಸೂಕ್ತವಾಗಿದೆ.ಅದಕ್ಕಿಂತ ಹೆಚ್ಚು ಸಮಯ ಹಲ್ಲುಜ್ಜುವುದರಿಂದ ಸಂವೇದನೆ ಉಂಟಾಗಬಹುದು ಮತ್ತು ದಂತದ ಮೂಳೆ ಸವೆತಕ್ಕೆ ಒಳಗಾಗುತ್ತವೆ ಎಂದು ತಜ್ಞರು ಹೇಳಿದ್ದಾರೆ.

ಚಳಿಗಾಲದಲ್ಲಿ ಹೆಚ್ಚು ಹಸಿವಾಗುವುದು ಸಹಜ, ಆಗ ಕಾರ್ಬೊನೇಟ್ ಅಂಶಗಳನ್ನು ಹೊಂದಿರುವ ತಂಪು ಕಾರಕ ಪಾನೀಯಗಳ ಬದಲಿಗೆ ಬಿಸಿ ಪಾನೀಯಗಳನ್ನು ಸೇವಿಸುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.

ಮುಂದುವರೆದು ಸೈಡರ್ ಅಥವಾ ಹೆಚ್ಚು ಮಸಾಲೆ ಇರುವ ಪದಾರ್ಥಗಳನ್ನು ಸೇವಿಸುವ ಅಭ್ಯಾಸವಿದ್ದರೆ ಅವು ಹಲ್ಲುಗಳಿಗೆ ಹಾನಿ ಉಂಟುಮಾಡಬಲ್ಲದು, ಈಗಾಗಲೇ ಇವುಗಳಿಂದ ಸಮಸ್ಯೆ ಎದುರಿಸುತ್ತಿದ್ದರೆ ಬೆಚ್ಚಗಿನ ಉಪ್ಪು ನೀರಿನಲ್ಲಿ ಹಲ್ಲು ಮುಕ್ಕಳಿಸುವುದರಿಂದ ಹಲ್ಲಿಗೆ ಉಂಟಾದ ಹಾನಿ ಹಾಗು ನೋವುಗಳನ್ನು ತಡೆಯಬಹುದಾಗಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಚಳಿಗಾಲದಲ್ಲಿ ಸಕ್ಕರೆಯನ್ನು ಕಡಿಮೆ ಉಪಯೋಗಿಸುವುದು ಸಹ ಹಲ್ಲುಗಳ ರಕ್ಷಣೆಗೆ ಉತ್ತಮ ಕ್ರಮವಾಗಿದೆ ಎಂದು ತಿಳಿಸಿದ್ದಾರೆ.

Comments are closed.