ಆರೋಗ್ಯ

ಮನುಷ್ಯನಿಗೆ ಆತಂಕ, ಖಿನ್ನತೆ, ಮಾನಸಿಕ ಒತ್ತಡಗಳು ಧೂಮಪಾನದಷ್ಟೇ..ಆರೋಗ್ಯಕ್ಕೆ ಹಾನಿಕಾರಕ

Pinterest LinkedIn Tumblr

ವಿಪರೀತ ಆಲೋಚನೆಗಳು… ಚಿಂತೆ.. ಕಸಿವಿಸಿ… ನೈಜ, ಕಾಲ್ಪನಿಕ ಘಟನೆಗಳನ್ನು ಆಧರಿಸಿ ಭವಿಷ್ಯದ ಬಗ್ಗೆ ಗಾಬರಿ. ಖಿನ್ನತೆ.. ಇವೆಲ್ಲವುಗಳು ಒಂದು ಬಾರಿಯಾದರೂ ಎಲ್ಲರಲ್ಲೂ ಕಾಡುವಂಥವು. ಖಿನ್ನತೆ ಹಾಗೂ ಆತಂಕ ಸಂದರ್ಭಕ್ಕೆ ತಕ್ಕಂತೆ ಇರದೇ, ಅತಿಯಾದರೆ ಅದು ನಮ್ಮ ದೈನಂದಿನ ಜೀವನದ ಚಟುವಟಿಕೆಗೆ ಅಡ್ಡಿಯಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಆತಂಕ, ಖಿನ್ನತೆ ಅತಿ ಹೆಚ್ಚಾಗಿ ಕಂಡು ಬರುತ್ತಿದೆ. ಇದು ಸ್ಮೋಕಿಂಗ್​​ನಷ್ಟೇ ಡೇಂಜರ್‌, ಆರೋಗ್ಯದ ಮೇಲೆ ಆತಂಕ, ಖಿನ್ನತೆ ಇವೆರೆಡೂ ಅತಿ ಹೆಚ್ಚು ಪರಿಣಾಮ ಬೀರುತ್ತವೆ. ಇತ್ತೀಚೆಗೆ ನಡೆಸಿದ ಸಂಶೋಧನೆಯ ಪ್ರಕಾರ, ಆತಂಕ, ಖಿನ್ನತೆ ಸಮಸ್ಯೆ ಎದುರಿಸುವ ಹಲವರಲ್ಲಿ ಹಾರ್ಟ್ ಅಟ್ಯಾಕ್, ಸ್ಟ್ರೋಕ್ಸ್ , ಅತಿಯಾದ ಸ್ಥೂಲಕಾಯ ಕಂಡು ಬರುತ್ತಿದೆ.

ಧೂಮಪಾನದಷ್ಟೇ.. ಆತಂಕ, ಖಿನ್ನತೆ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು ಎಂದು ತಿಳಿದು ಬಂದಿದೆ.

ಅತಿ ಹೆಚ್ಚಾಗಿ ಆತಂಕ, ಖಿನ್ನತೆ ಎದುರಿಸುವ ಜನರಲ್ಲಿ ಶೇ.65 ರಷ್ಟು ಹೃದಯ ಸಂಬಂಧಿತ ಕಾಯಿಲೆ ಸಮಸ್ಯೆಗಳಿದ್ರೆ. ಶೇ. 64ರಷ್ಟು ಸ್ಟ್ರೋಕ್‌ ಸಮಸ್ಯೆ ಕಾಡಬಹುದು. ಶೇ 50ರಷ್ಟು ರಕ್ತದೋತ್ತಡ ಕಾಣಿಸಿಕೊಳ್ಳಬಹುದು. ಶೇ. 87ರಷ್ಟು ಸಂಧಿವಾತದಂತಹ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು.

ಆರೋಗ್ಯದ ಮೇಲೆ ಧೂಮಪಾನ ಎಷ್ಟು ದುಷ್ಪರಿಣಾಮ ಬೀರುತ್ತದೆಯೋ, ಖಿನ್ನತೆ, ಆತಂಕಗಳು ಆರೋಗ್ಯದ ಮೇಲೆ ಇಂಪ್ಯಾಕ್ಟ್ ಬೀರುವ ಸಾಧ್ಯತೆ ಹೆಚ್ಚು ಎಂದು ಲೇಖಕ ಆಂಡ್ರಿಯಾ ನೈಲ್ಸ್‌ ಅಭಿಪ್ರಾಯಪಟ್ಟಿದ್ದಾರೆ. ಜರ್ನಲ್‌ ಹೆಲ್ತ್ ಸೈಕಾಲಜಿಯಲ್ಲಿ ಈ ಅಧ್ಯಯನ ಪ್ರಕಟವಾಗಿದ್ದು, ತಲೆನೋವು, ಹೊಟ್ಟೆ ಸಂಬಂಧಿತ ಸಮಸ್ಯೆ. ಬೆನ್ನು ನೋವು, ಉಸಿರಾಟದ ತೊಂದರೆ ಮೊದಲಾದ ಲಕ್ಷಣಗಳು ಹೆಚ್ಚಿನ ಒತ್ತಡ ಹಾಗೂ ಖಿನ್ನತೆಯನ್ನು ಉಲ್ಬಣಗೊಳಿಸುತ್ತವೆ ಎನ್ನಲಾಗಿದೆ.

Comments are closed.