ಉಡುಪಿ: ಉಡುಪಿಯಲ್ಲಿ ಶುಕ್ರವಾರದಂದು ಕೋವಿಡ್-19 ಸೋಂಕಿನ ಮೂರು ಪ್ರಕರಣಗಳು ದೃಢವಾಗಿದೆ.
ಈ ಮೂವರೂ ಮಹಾರಾಷ್ಟ್ರದಿಂದ ಬಂದವರಾಗಿದ್ದು, 31 ಮತ್ತು 55 ವರ್ಷದ ಇಬ್ಬರು ಗಂಡಸರು ಮತ್ತು 48 ವರ್ಷದ ಓರ್ವ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಸುಮಾರು ಒಂದು ತಿಂಗಳ ಕಾಲ ಯಾವುದೇ ಕೋವಿಡ್19 ಪಾಸಿಟಿವ್ ಪ್ರಕರಣವಿಲ್ಲದೆ ನಿರಾಳವಾಗಿದ್ದ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸೋಂಕಿನ ಪ್ರಕರಣಗಳು ನಿತ್ಯ ದಾಖಲಾಗುತ್ತಿದೆ. ಮಹಾರಾಷ್ಟ್ರದಿಂದ ಬರುತ್ತಿರುವ ಪ್ರಯಾಣಿಕರಲ್ಲಿ ಹೆಚ್ಚಾಗಿ ಸೋಂಕು ಕಾಣಿಸಿಕೊಳ್ಳುತ್ತಿದೆ.
ಗುರುವಾರ ಒಂದೇ ದಿನ 26 ಪ್ರಕರಣಗಳು ಉಡುಪಿಯಲ್ಲಿ ದಾಖಲಾಗಿದ್ದು ಅದರಲ್ಲಿ ಬಹುತೇಕ ಮಹಾರಾಷ್ಟ್ರದಿಂದ ಬಂದವರು. ಅದರಲ್ಲೂ ಇವರಲ್ಲಿ16 ಸೋಂಕಿತರು ಹತ್ತು ವರ್ಷಕ್ಕಿಂತ ಕೆಳಗಿನ ಮಕ್ಕಳಿರುವುದು ಆತಂಕಕ್ಕೀಡು ಮಾಡಿದೆ.
Comments are closed.