ಕ್ಲೆನ್ಸಿಂಗ್: ಸಾಸಿವೆ ಎಣ್ಣೆಯಿಂದ ವಾರಕ್ಕೆ ಎರಡು ಬಾರಿ ಮಸಾಜ್ ಮಾಡಿದರೆ ನಿರ್ಜೀವ ತ್ವಚೆಯನ್ನು ಹೋಗಲಾಡಿಸಬಹುದು. ಈ ಎಣ್ಣೆಯ ಜೊತೆ ಬೇರೆ ವಸ್ತುಗಳನ್ನು ಮಿಶ್ರಣ ಮಾಡಬೇಕಾದ ಅವಶ್ಯಕತೆಯಿಲ್ಲ. ಬರೀ ಈ ಎಣ್ಣೆಯನ್ನು ಬಳಸಿ ಮೈಗೆ ಮಸಾಜ್ ಮಾಡಿದರೆ ನಿಮ್ಮ ತ್ವಚೆ ಹೊಳಪನ್ನು ಪಡೆಯುತ್ತದೆ. ಕೆಮ್ಮು,ಶೀತವಿದ್ದರೆ ಸ್ವಲ್ಪ ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ ಮೈಗೆ ಹಚ್ಚಿದರೆ ಶೀತ ಕಡಿಮೆಯಾಗುವುದು ಮತ್ತು ಮೈಕೈ ನೋವು ಕೂಡ ಕಡಿಮೆಯಾಗುವುದು.
ಕೂದಲಿನ ಬೆಳವಣಿಗೆ ಸಹಕಾರಿಯಾಗಿದೆ: ಪ್ರತಿದಿನ ಸಾಸಿವೆ ಎಣ್ಣೆಯಿಂದ ತಲೆಗೆ ಮಸಾಜ್ ಮಾಡಿದರೆ ಕೂದಲಿನ ಬುಡ ಬಲವಾಗುತ್ತದೆ ಮತ್ತು ಕೂದಲು ಸೊಂಪಾಗಿ ಬೆಳೆಯುತ್ತದೆ. ಈ ರೀತಿ ಮಾಡುತ್ತಿದ್ದರೆ ಅಕಾಲಿಕ ನೆರೆ ಕೂದಲಿನ ಸಮಸ್ಯೆ ಉಂಟಾಗುವುದಿಲ್ಲ. ಅಲ್ಲದೆ ತುಂಬಾ ಒತ್ತಡದಿಂದಾಗಿ ಸುಸ್ತು ಮತ್ತು ತಲೆನೋವು ಕಾಣಿಸಿಕೊಂಡರೆ ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ ಇದರಿಂದ ತಲೆಗೆ ಮಸಾಜ್ ಮಾಡಿದರೆ ಮಾನಸಿಕ ಒತ್ತಡ ಕಡಿಮೆಯಾಗುವುದು.
ಮಾಯಿಶ್ಚರೈಸರ್: ಪ್ರತಿ ದಿನ ಸಾಯಾಂಕಾಲ ಮುಖ ತೊಳೆದ ಬಳಿಕ 2-3 ಹನಿ ಸಾಸಿವೆ ಎಣ್ಣೆಯನ್ನು ಕೈಗೆ ಹಾಕಿ ಮುಖಕ್ಕೆ ಮಾಯಿಶ್ಚರೈಸರ್ ಮಾಡಿ 10 ನಿಮಿಷ ಬಿಡಬೇಕು. ನಂತರ ತಣ್ಣೀರಿನಿಂದ ಮುಖ ತೊಳೆಯಬೇಕು. ಈ ರೀತಿ ಮಾಡಿದರೆ ನಯವಾದ ತ್ವಚೆಯನ್ನು ಪಡೆಯಬಹುದು.
ಫೇಸ್ ಮಾಸ್ಕ್: ವಾರಕ್ಕೆ ಒಮ್ಮೆ ಫೇಸ್ ಮಾಸ್ಕ್ ಮಾಡುವುದು ಒಳ್ಳೆಯದು. ಈ ರೀತಿ ಫೇಸ್ ಮಾಸ್ಕ್ ಅನ್ನು ಸಾಸಿವೆ ಎಣ್ಣೆಯಿಂದ ಕೂಡ ಮಾಡಬಹುದು. ಇದರಿಂದ ಫೇಸ್ ಮಾಸ್ಕ್ ಮಾಡುವುದಾದರೆ 2 ಚಮಚ ಸಾಸಿವೆ ಎಣ್ಣೆ, ಸ್ವಲ್ಪ ಕಡಲೆ ಹಿಟ್ಟು, 2 ಚಮಚ ಮೊಸರು ಮತ್ತು 1 ಚಮಚ ನಿಂಬೆ ರಸ ಮಿಶ್ರ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷದ ಬಳಿಕ ಮುಖ ತೊಳೆದರೆ ಮುಖದಲ್ಲಿ ಕಪ್ಪು ಕಲೆಗಳು, ಕಣ್ಣಿನ ಸುತ್ತ ಕಪ್ಪು ವರ್ತುಲ ಮುಂತಾದ ಸಮಸ್ಯೆಗಳು ಕಂಡು ಬರುವುದಿಲ್ಲ.
Comments are closed.