ಆರೋಗ್ಯ

ಉಡುಪಿ ಜಿಲ್ಲೆಯಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ, ತಪ್ಪಿದ್ದಲ್ಲಿ ದಂಡ: ಉಡುಪಿ ಡಿಸಿ ಜಿ. ಜಗದೀಶ್ ಎಚ್ಚರಿಕೆ

Pinterest LinkedIn Tumblr

ಉಡುಪಿ: ಜಿಲ್ಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಭಾನುವಾರ ಆದೇಶ ಹೊರಡಿಸಿದ್ದಾರೆ. ಇದಕ್ಕೆ ತಪ್ಪಿದ್ದಲ್ಲಿ ಡಂಡವನ್ನು ವಿಧಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ವಿನಾಯಿತಿ ನಡುವೆಯೂ ನಿರ್ಬಂಧಕಾಜ್ಞೆ ಜಾರಿಯಲ್ಲಿದೆ….
ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು ಕೋವಿಡ್ -19 (ಕೊರೊನ ವೈರಾಣು ಕಾಯಿಲೆ 2019)ಯ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಉಲ್ಲೇಖ(1) ಮತ್ತು (2) ಸರ್ಕಾರದ ಆದೇಶದಂತೆ ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಸರ್ಕಾರವು ಲಾಕ್ ಡೌನ್ ಘೋಷಿಸಿದ್ದು, ಅದರಂತೆ ನಿರ್ಬಂಧಕಾಜ್ಞೆ ಜಾರಿಯಲ್ಲಿದ್ದು ಈ ಸಂದರ್ಭದಲ್ಲಿ ಯಾವುದೇ ನಾಗರೀಕರ ಓಡಾಟವನ್ನು ನಿರ್ಬಂಧಿಸಲಾಗಿರುತ್ತದೆ ಉಲ್ಲೇಖ(3)ರ ಸರ್ಕಾರಿ ಆದೇಶದಂತೆ ಕೆಲವೊಂದು ವಿನಾಯತಿಗಳನ್ನು ನೀಡಲಾಗಿರುತ್ತದೆ. ಅದರಂತೆ ಸಾರ್ವಜನಿಕರಿಗೆ ಅವಶ್ಯಕ ವಸ್ತುಗಳನ್ನು ಖರೀದಿಸುವ ಬಗ್ಗೆ ಸಂಚರಿಸಲು ಬೆಳಿಗ್ಗೆ 7.00 ರಿಂದ ಸಂಜೆ 7.00 ಗಂಟೆಯ ವರೆಗೆ ಅವಕಾಶ ಕಲ್ಪಿಸಲಾಗಿದೆ ಈ ಅವಧಿಯಲ್ಲಿ ಅಂಗಡಿಗಳಲ್ಲಿ ಖರೀದಿಗೆ ತೆರಳುವ, ಮತ್ತಿತರ ಕಾರಣಗಳಿಗಾಗಿ ಸಂಚರಿಸುವ ಸಾರ್ವಜನಿಕರು ಕೋವಿಡ್ -19 (ಕೊರೊನ ವೈರಾಣು ಕಾಯಿಲೆ 2019)ಯ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಆದೇಶದಂತೆ ನಿಗದಿಪಡಿಸಿರುವ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿರುತ್ತದೆ.

ಸಾರ್ವಜನಿಕವಾಗಿ ಹೀಗೆ ಇರಬೇಕು….
ಕೋವಿಡ್ -19 (ಕೊರೊನ ವೈರಾಣು ಕಾಯಿಲೆ 2019)ಯ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಆದೇಶಗಳನ್ನು ಕಟ್ಟು ನಿಟ್ಟಾಗಿ ಅನುಷ್ಟಾನಗೊಳಿಸುವುದು ಅತೀ ಅವಶ್ಯಕವಾಗಿರುತ್ತದೆ, ಈ ಹಿನ್ನಲೆಯಲ್ಲಿ ಅಂಗಡಿಗಳಲ್ಲಿ ಖರೀದಿಗೆ, ಕಛೇರಿಗಳ ಕೆಲಸಕ್ಕೆ ತೆರಳುವ, ಮತ್ತಿತರ ಕಾರಣಗಳಿಗಾಗಿ ಸಂಚರಿಸುವ ಸಾರ್ವಜನಿಕರು ಕೋವಿಡ್ -19 ಕೋನ ವೈರಾಣು ( ಕಾಯಿಲೆ 2019)ಯ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಆದೇಶದಂತ ನಿಗದಿಪಡಿಸಿರುವ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕಾಗಿರುತ್ತದೆ. ಆದುದರಿಂದ ಸಾರ್ವಜನಿಕರು, ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಈ ಕೆಳಗೆ ತಿಳಿಸಿರುವ ಮುಂಜಾಗೃತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸ ತಕ್ಕದ್ದು ತಪ್ಪಿದಲ್ಲಿ ಇದಕ್ಕೆ Disaster Management Act 2005 ಮತ್ತು “Epidermic Disease “ ರೆಗ್ಯುಲೇಷನ್ ಆ್ಯಕ್ಸ್ ನಂತ ನಿಯಮಾನುಸಾರ ಸೂಕ್ತ ಕ್ರಮಕೈಗೊಳ್ಳಲಾಗುವುದು.

  • ಮುಖ ಗವಸು (ಮಾಸ್) ಅಥವಾ Face cover ಗಳನ್ನು ಧರಿಸುವುದು.
  • ಸಾರ್ವಜನಿಕ ಸ್ಥಳಗಳಲ್ಲಿ ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ/ ಅಂಗಡಿಗಳಲ್ಲಿ ಖರೀದಿಮಾಡುವ ಸಮಯದಲ್ಲಿ
  • ವಾಹನ ಗಳಲ್ಲಿ ಸಂಚರಿಸುವ ಸಂಧರ್ಭಗಳಲ್ಲಿ ಮತ್ತು ಇತರ ಕಡೆಗಳಲ್ಲಿ ಸಾಮಾಜಿಕ ಅಂತರ ಪಾಲಿಸುವುದು,

ನಿಯಮ ಉಲ್ಲಂಘಿಸಿದರೆ ದಂಡ…
ಕೋವಿಡ್ -19 ಗೆ ಸಂಬಂಧಿಸಿದಂತೆ ಮೇಲ್ಕಂಡ ನಿಯಮಗಳನ್ನು ಪಾಲನೆ ಮಾಡದೇ ಇರುವ ಬಗ್ಗೆ ದಂಡ ವಿಧಿಸಲು ಉಲ್ಲೇಖ(4)ರ ಅಧಿಸೂಚನೆಯಂತ ಪೋಲಿಸ್ ಸಬ್ ಇನ್ಸ್ ಫೆಕ್ಷರ್, ಮಹಾನಗರ ಪಾಲಿಕೆಗಳ ಆರೋಗ್ಯ ನಿರೀಕ್ಷಕರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಮತ್ತು ಸರಕಾರದಿಂದ ನಿಯೋಜಿತರಾದ ಇತರ ಅಧಿಕಾರಿಗಳಿಗೆ ಅಧಿಕಾರ ಪ್ರತ್ಯಾಯೋಜಿಸಲಾಗಿದೆ ಎಂದಿದ್ದಾರೆ. ಮೇಲ್ಕಂಡ ನಿಯಮಗಳನ್ನು ಪಾಲನೆ ಮಾಡದಿದ್ದಲ್ಲಿ ಮಹಾನಗರಪಾಲಿಕೆಗಳ ವ್ಯಾಪ್ತಿಯಲ್ಲಿ ರೂ 200.00 ಮತ್ತು ಇತರ ಕಡೆಗಳಲ್ಲಿ ರೂ 100.00 ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿರುತ್ತದೆ.

ಆದುದರಿಂದ ಸಾರ್ವಜನಿಕರು ಮೇಲ್ಕಂಡ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಹಾಗೂ ಪಾಲನೆ ಮಾಡದಿದ್ದಲ್ಲಿ ಅಂತಹವರಿಗೆ ಈ ಮೇಲೆ ಕಾಣಿಸಲಾದಂತ ದಂಡ ವಿಧಿಸಲು ಉಲ್ಲೇಖ (4) ರ ಅಧಿಸೂಚನೆಯಲ್ಲಿ ಅಧಿಕಾರ ಪ್ರತ್ಯಾಯೋಜನೆ ಮಾಡಲಾಗಿರುವಂತ ಪೋಲಿಸ್ ಸಬ್ ಇನ್ಸ್ ಪೆಕ್ಟರ್ ಹಾಗೂ ಮೇಲ್ಪಟ್ಟ ಪೋಲಿಸ್ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಅವರೊಂದಿಗೆ ನಗರಸಭೆಗೆ ಸಂಬಂಧಿಸಿದಂತೆ ಪೌರಾಯುಕ್ತರು ನಗರಸಭೆ ಹಾಗೂ ನಗರಸಭೆ ಆರೋಗ್ಯ ನಿರೀಕ್ಷಕರು , ಉಪವಿಭಾಗಾಧಿಕಾರಿ ಕುಂದಾಪುರ , ಎಲ್ಲಾ ತಾಲೂಕಿನ ತಹಶೀಲ್ದಾರರು , ಮುಖ್ಯಾಧಿಕಾರಿಗಳು ಪುರಸಭೆ ಮತ್ತು ಪಟ್ಟಣ ಪಂಚಾಯತ್ ಹಾಗೂ ಅವರ ಆರೋಗ್ಯ ನಿರೀಕ್ಷಕರು ಇವರಿಗೆ ಅಧಿಕಾರವನ್ನು ಪ್ರತ್ಯಾಯೋಜಿಸಿದೆ. ಅವರು ಮೇಲ್ಕಂಡ ನಿಯಮಗಳ ಉಲ್ಲಂಘನೆ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ಆದೇಶಿಸಲಾಗಿದೆ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

Comments are closed.