ಆರೋಗ್ಯ

ಪ್ರಾತಃಕಾಲದ ಬ್ರಾಹ್ಮಿಂ ಮೂಹೂರ್ತ ಬಿಟ್ಟು ಬೇರೆ ಸಮಯ ಏಕೆ ತುಳಸಿಯನ್ನು ಮುಟ್ಟಬಾರದು….?

Pinterest LinkedIn Tumblr

ಸೂರ್ಯೋದಯದ ಅನಂತರ ಹೊತ್ತೇರುತ್ತ ಹೋದಂತೆ ವಾತಾವರಣದಲ್ಲೂ ಮಾನವನಲ್ಲೂ ರಜತಮಗಳು ಹೆಚ್ಚುತ್ತ ಹೋಗುತ್ತದೆ. ಅದುದರಿಂದ ತುಳಸಿಯನ್ನು ಮುಟ್ಟಲು ಪ್ರಾತಃಕಾಲದ ಬ್ರಾಹ್ಮಿ ಮುಹೂರ್ತವು ಅತ್ಯಂತ ಸಾತ್ವಿಕವಾಗಿದ್ದು ಆಧ್ಯಾತ್ಮಿಕ ಸಾಧನೆಗೆ ಶ್ರೇಷ್ಠವಾದ ಸಮಯವಾಗಿದೆ.

ಮಧ್ಯಾಹ್ನದ ನಂತರವೂ ರಾತ್ರಿಯ ಸಮಯದಲ್ಲೂ ಅವುಗಳ ಪ್ರಮಾಣವು ಬಹಳ ಹೆಚ್ಚಿರುತ್ತದೆ. ತುಳಸಿಯು ಅತ್ಯಂತ ಸಾತ್ವಿಕವಾಗಿರುವುದರಿಂದ ಮಧ್ಯಾಹ್ನದ ನಂತರ ಇಂತಹ ರಜತಮ ವಾತಾವರಣದಲ್ಲಿ ರಜತಮೋಗುಣಿಯಾದ ಮಾನವನು ಅದನ್ನು ಸ್ಪರ್ಶಿಸಿದಲ್ಲಿ ಅದು ಬಾಡಿ ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದುದರಿಂದ ಮಧ್ಯಾಹ್ನದ ಬಳಿಕ ತುಳಸಿಯನ್ನು ಮುಟ್ಟಬಾರದು. ಅಮಾವಾಸ್ಯೆ, ಹುರ್ಣಿಮಿ, ಸಂಕ್ರಮಣ ಕಾಲದಲ್ಲಿಯೂ ತುಳಸಿಯನ್ನು ಮುಟ್ಟಬಾರದು.

ಸೂತಕದ ಅವಧಿಯಲ್ಲಿ ಕುಟುಂಬದ ಸದಸ್ಯರಲ್ಲಿ ರಜತಮಗಳ ಪ್ರಮಾಣವು ಹೆಚ್ಚಿರುವುದರಿಂದ ಅಂತಹವರೂ ಆ ಅವಧಿಯಲ್ಲಿ ತುಳಸಿಯನ್ನು ಸ್ಪರ್ಶಿಸಬಾರದು. ಅಂತೆಯೇ ರಜಸ್ವಲೆಯಾದ ಸ್ತ್ರೀಯರ ದೇಹದಿಂದಲೂ ತೊಂದರೆದಾಯಕ ಲಹರಿಗಳ ಪ್ರಕ್ಷೇಪಣೆಯಾಗುವುದರಿಂದ ಅವರೂ ತುಳಸಿಯನ್ನು ಮುಟ್ಟಿದಾಗ ಅದು ಬಾಡಿ ಹೋಗಿರುವ ನಿದರ್ಶನಗಳಿವೆ. ಅಂತೆಯೇ ರೇಶ್ಮೆ ಬೆಳೆಗಾರರ ಮನೆಯಲ್ಲೂ ಅನಿವಾರ್ಯ ಸಂದರ್ಭದಲ್ಲಿ ರಜಸ್ವಲಾ ಸ್ತ್ರೀಯು ಆಹಾರಕ್ಕಾಗಿ ರೇಶ್ಮೆ ಹುಳುಗಳಿಗೆ ಹಿಪ್ಪು ನೇರಳೆ ಸೊಪ್ಪನ್ನು ಕತ್ತರಿಸಿ ಹಾಕಿ ಹುಳುಗಳನ್ನು ಸ್ಪರ್ಶಿಸಿದಾಗಲೂ ಹುಳುಗಳು ಸತ್ತು ಹೋದ ಪ್ರಸಂಗವೂ ಇದೆ.

ಆದುದರಿಂದ ತಮೋಗುಣಿ ಮಾನವನ ಸ್ಪರ್ಶವು ತುಳಸಿಯಂತಹ ಸಾತ್ವಿಕ ಜೀವಗಳಿಗೆ ಅದೆಷ್ಟು ಮಾರಕವೆಂಬುದು ತಿಳಿದುಬರುತ್ತದೆ. ತುಳಸಿ ದಳಗಳನ್ನು ಕೈಗಳ ಉಗುರುಗಳಿಂದ ಚಿವುಟಿ ತೆಗೆಯುವುದೂ ನಿಷಿದ್ಧವೇ ಆಗಿದೆ.

Comments are closed.