ಕರಾವಳಿ

ಗೃಹ ರಕ್ಷಕ ಕಮಾಂಡರ್ ಗಳಿಗೆ ಶಾಸಕ ಕಾಮತ್ ನೇತೃತ್ವದಲ್ಲಿ ಕಿಟ್ ವಿತರಣೆ

Pinterest LinkedIn Tumblr

ಮಂಗಳೂರು : ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ ಕಾರ್ಯಪ್ರವೃತ್ತರಾಗಿರುವ ಗೃಹರಕ್ಷಕ ಕಮಾಂಡರ್ ಗಳಿಗೆ ಶಾಸಕ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ಗೃಹರಕ್ಷಕ ದಳದ ಕಮಾಂಡೆಂಟ್ ಡಾಕ್ಟರ್ ಮುರಳಿ ಮೋಹನ ಅವರ ಮೂಲಕ ಉಚಿತ ಕಿಟ್ ವಿತರಿಸಲಾಯಿತು.

ಇದೇ ಸಂಧರ್ಭದಲ್ಲಿ ಭಾರತೀಯ ಹೋಮಿಯೋಪತಿಕ್ ಡಾಕ್ಟರ್ ಸಂಘದಿಂದ ಭಾರತ ಸರಕಾರ ಆಯುಷ್ ಇಲಾಖೆಯಿಂದ ಅನುಮೋದಿಸಲ್ಪಟ್ಟ ಔಷಧಿಗಳನ್ನು ಕೂಡ ಉಚಿತವಾಗಿ ನೀಡಲಾಯಿತು.

ಮಂಗಳೂರು ಮಹಾನಗರ ಪಾಲಿಕೆ ಮೇಯರ್ ದಿವಾಕರ್, ಬಿಜೆಪಿ ದಕ್ಷಿಣದ ಅಧ್ಯಕ್ಷರಾಗಿರುವ ವಿಜಯ ಕುಮಾರ್ ಶೆಟ್ಟಿ ಮೂಲಕ ಈ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಮಂಗಳೂರು ಬಿಜೆಪಿ ದಕ್ಷಿಣ ಪ್ರಧಾನ ಕಾರ್ಯದರ್ಶಿ ರೂಪ ಡಿ ಬಂಗೇರ ಹಾಗೂ ಸುರೇಂದ್ರ ಜೆ, ಮನಪಾ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ,ಬಿಜೆಪಿ ಮುಖಂಡರಾದ ಭಾಸ್ಕರಚಂದ್ರ ಶೆಟ್ಟಿ,ರಮೇಶ್ ಕಂಡೆಟ್ಟು ಗೃಹರಕ್ಷಕ ಉಪ ಕಮಾಂಡರ್ ಶ್ರೀ ರಮೇಶ್, ಗೃಹರಕ್ಷಕ ಘಟಕಾಧಿಕಾರಿ ಮಾರ್ಕ್ ಶೆರಾ, ಡಾಕ್ಟರ್ ಗಳಾದ ಪ್ರವೀಣ್ ಕುಮಾರ್ ರೈ , ಡಾ ಅವಿನಾಶ್ ವಿ ಎಸ್, ಡಾ ಪ್ರವೀಣ್ ರಾಜ್ ಆಳ್ವ, ಡಾ ಪ್ರಸನ್ನ ಕುಮಾರ್, ಡಾ ರಾಮಕೃಷ್ಣ ರಾವ್ ಹಾಗೂ ಇತರರು ಉಪಸ್ಥಿರಿದ್ದರು.

Comments are closed.