ಉಡುಪಿ: ಕೋವಿಡ್-19 ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಲಾಕ್ ಡೌನ್ ಆದೇಶದ ದಿನದಿಂದ ಅಂದರೆ ಸುಮಾರು 40 ದಿನಗಳಿಂದ ಮದ್ಯದಂಗಡಿಗಳು ಬಂದ್ ಇದ್ದು ನಾಳೆ (ಮೇ.4) ರಿಂದ ಮದ್ಯದಂಗಡಿಗಳನ್ನು ತೆರೆಯಲು ಶರತ್ತುಬದ್ಧ ಸಮ್ಮತಿ ನೀಡಿ ಸರಕಾರ ಆದೇಶಿಸಿದೆ.

ಅದರಂತೆಯೇ ಉಡುಪಿ ಜಿಲ್ಲೆಯಲ್ಲೂ ಕೂಡ ನಾಳೆ ಮದ್ಯದಂಗಡಿಗಳು ತೆರೆದಿರುತ್ತದೆ. ಅಬಕಾರಿ ಇಲಾಖೆಯಡಿ ಬರುವ ಸಿಎಲ್-2 ಅಂದರೆ ಎಂ.ಆರ್.ಪಿ ಹಾಗೂ ವೈನ್ ಶಾಪ್ ಹಾಗೂ ಸಿಎಲ್-11(ಸಿ) ಅಂದರೆ ಎಂ.ಎಸ್.ಐ.ಎಲ್. ಮದ್ಯ ಮಳಿಗೆ ತೆರೆಯಲು ಅವಕಾಶವಿದೆ. ಅಲ್ಲದೆ ಕೆ.ಎಸ್.ಬಿ.ಸಿ.ಎಲ್ ಡಿಪೋ ಕಾರ್ಯ ನಿರ್ವಹಿಸಲು ಆದೇಶಿಸಲಾಗಿದ್ದು ಇದನ್ನು ಹೊರತು ಪಡಿಸಿ ಬೇರ್ಯಾವುದೇ ಸನ್ನದ್ಧು (ಮದ್ಯ ಮಾರಾಟ ಮಳಿಗೆ) ತೆರೆಯುವಂತಿಲ್ಲ. ಮಾಸ್ಕ್ ಕಡ್ಡಾಯ ಹಾಗೂ ಸಾಮಾಜಿಕ ಅಂತರ ಪಾಲನೆ ಆಗಲೇಬೇಕು. ಕೇವಲ ಪಾರ್ಸೆಲ್ ಮಾತ್ರ ನೀಡಲಾಗುತ್ತೆ.
(ಸಾಂದರ್ಭಿಕ ಚಿತ್ರ)
ಸಿದ್ದಗೊಂಡಿದೆ ಎಣ್ಣೆ ಅಂಗಡಿಗಳು..
ನಾಳೆಯಿಂದ ವೈನ್ ಶಾಪ್, ಎಂಎಸ್ಐಎಲ್ ತೆರೆಯುವ ಹಿನ್ನೆಲೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಆದೇಶವಿರುವ ಹಿನ್ನೆಲೆ ಇಂದು ಉಡುಪಿ ಜಿಲ್ಲೆಯಲ್ಲಿ ತೆರೆಯಲು ಅವಕಾಶವಿರುವ ಸನ್ನದ್ದು ಮಳಿಗೆಗಳ ಎದುರುಗಡೆ ಬಹುತೇಕ ಕಡೆಗಳಲ್ಲಿ ಸನ್ನದ್ದುದಾರರು ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಪಾಲನೆಯಲ್ಲಿ ಸರ್ಕಲ್ ನಿರ್ಮಾಣವೂ ಸೇರಿದಂತೆ ವಿವಿಧ ರೀತಿಯಲ್ಲಿ ಸೋಶಿಯಲ್ ಡಿಸ್ಟೆನ್ಸ್ ಕಾಯ್ದುಕೊಳ್ಳಲು ಪೂರಕವಾಗಿ ವ್ಯವಸ್ತೆ ಮಾಡಿದ ಕೆಲವು ಫೋಟೋ ಜಾಲತಾಣದಲ್ಲಿ ವೈರಲ್ ಆಗಿದೆ.
ಆದರೆ ಸನ್ನದ್ದು ಮಳಿಗೆಗೆ ಬರುವ ಮದ್ಯಪ್ರಿಯ ಆದೇಶಗಳ ಪಾಲನೆಯಲ್ಲಿ ಎಷ್ಟು ಸ್ಪಂದಿಸುತ್ತಾನೋ ಎನ್ನುವುದು ನಾಳೆಯೇ ತಿಳಿಯಬೇಕಿದೆ.
(ವರದಿ- ಯೋಗೀಶ್ ಕುಂಭಾಸಿ)
Comments are closed.