ಆರೋಗ್ಯ

ಸ್ಟ್ರೆಚ್ ಮಾರ್ಕ್‌ಗಳು ಮೂಡಲು ಮೂಲ ಕಾರಣ ಬಲ್ಲಿರಾ?

Pinterest LinkedIn Tumblr

ಸ್ಟ್ರೆಚ್ ಮಾರ್ಕ್‌ಗಳು ನಿಮ್ಮ ತ್ವಚೆಯ ಕಳೆಗುಂದಿಸುತ್ತಿವೆಯೇ? ಹೌದಾದಲ್ಲಿ, ಇದನ್ನು ಅನುಭವಿಸುತ್ತಿರುವವರು ನೀವೊಬ್ಬರೇ ಅಲ್ಲ. ಈ ಸ್ಟ್ರೆಚ್ ಮಾರ್ಕ್ ಸಮಸ್ಯೆಯು ಹೆಂಗಸರು ಹಾಗು ಗಂಡಸರು ಇಬ್ಬರಿಗೂ ಕಾಡುವಂತದ್ದು. ಇವುಗಳು ಅನೇಕ ಕಾರಣಗಳಿಂದ ಹುಟ್ಟಿ ಕೊಳ್ಳುತ್ತವೆ. ಪ್ರಾಯ ಹಾಗೂ ಗರ್ಭಧಾರಣೆ ಇವುಗಳಿಗೆ ಕಾರಣವಾಗಿದ್ದರು, ಇವೆರೆಡೆ ಕಾರಣಗಳಿಗೆ ಸೀಮಿತವಲ್ಲ. “ಆದರೆ ಸ್ಟ್ರೆಚ್ ಮಾರ್ಕ್ ಗಳನ್ನು ಹೋಗಲಾಡಿಸಲು ತುಂಬಾ ಪ್ರಯತ್ನಿಸುತ್ತಿದ್ದರು, ಅವುಗಳು ಏಕೆ ಹೋಗುತ್ತಿಲ್ಲಂದರೆ ಸ್ಟ್ರೆಚ್ ಮಾರ್ಕ್‌ಗಳು ಮೇಲೆ ಹಲವು ವಿಷಯಗಳು ಪರಿಣಾಮ ಬೀರುತ್ತವೆ. ಇವುಗಳು ನೀವು ಪ್ರತಿದಿನ ಮಾಡುವಂತ, ನೀವು ಅವುಗಳ ಮೇಲೆ ಗಮನ ಹರಿಸದಂತ ಚಟುವಟಿಕೆಗಳು ಕೂಡ ಆಗಿರುತ್ತವೆ. ಅವುಗಳೆಂದರೆ :

1. ನೀರು:
ನೀರು ಬದುಕಲಿಕ್ಕೆ ಬೇಕೇ ಬೇಕು. ನಿಮ್ಮ ತ್ವಚೆಯು ತೇವಾಂಶದಿಂದ ಕೂಡಿರಲು ಕೂಡ ನೀರು ಬೇಕೇ ಬೇಕು. ಆದರೆ ನಮ್ಮಲ್ಲಿ ದಿನಪೂರ ಕಮ್ಮಿ ನೀರು ಸೇವನೆ ಮಾಡುವ ಅಭ್ಯಾಸ ಇರುತ್ತದೆ. ಬಹುತೇಕ ಬಾರಿ ನಾವು ಪ್ರತಿದಿನ ಸೇವಿಸಬೇಕಾದ ಪ್ರಮಾಣ (೨ ಲೀಟರ್) ಗಿಂತ ಕಮ್ಮಿ ನೀರನ್ನು ಸೇವಿಸುತ್ತೇವೆ. ಕಮ್ಮಿ ನೀರಿನ ಸೇವನೆ ಎಂದರೆ, ನಿಮ್ಮ ತ್ವಚೆಯು ಕಮ್ಮಿ ತೇವಾಂಶ ಹೊಂದುವುದು ಎಂದು ಹಾಗೂ ಕಾಲಜನ್(ಕಾಲಜನ್) ಉತ್ಪನ್ನದಲ್ಲೂ ಇಳಿಕೆಯಾಗುವುದು ಎಂದು. ನಮ್ಮ ದೇಹದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುವ ಪ್ರೋಟೀನ್ ಅಂದರೆ ಅದು ಕಾಲಜನ್. ಇದು ನಿಮ್ಮ ತ್ವಚೆಗೆ ಪುನಶ್ಚೈತನ್ಯ ಶಕ್ತಿ(elasticity) ನೀಡುವುದಲ್ಲದೆ ನಿಮ್ಮ ತ್ವಚೆಯನ್ನು ಗಟ್ಟಿ ಮಾಡುತ್ತದೆ. ಅಲ್ಲದೆ, ತ್ವಚೆಯ ಮೇಲಿನ ಸತ್ತು ಹೋದ ಕಣಗಳನ್ನು ಹೊರಹಾಕುವಲ್ಲಿ ಸಹಾಯ ಮಾಡುತ್ತದೆ. ನಿಮ್ಮ ತ್ವಚೆಯ ಪುನಶ್ಚೈತನ್ಯ ಶಕ್ತಿ ಹಾಗೂ ಬಲ ಹೆಚ್ಚಾದಷ್ಟು ಸ್ಟ್ರೆಚ್ ಮಾರ್ಕ್ ಗಳು ಉಂಟಾಗುವ ಸಾಧ್ಯತೆಗಳು ಕಡಿಮೆ ಆಗುತ್ತವೆ. ಹಾಗಾಗಿ ಯಾವಾಗಲು ನಿಮ್ಮ ದೇಹ ನೀರಿನಿಂದ ತುಂಬಿಕೊಂಡಿರುವಂತೆ ನೋಡಿಕೊಳ್ಳಿ

2. ತೂಕದಲ್ಲಿ ಇಳಿಕೆ
ಈ ಪ್ರಕರಣವು ಹೇರಿಗೆಯಾದ ನಂತರ ಹೆಂಗಸರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವುದು. ಇದು ಏಕೆ ಆಗುತ್ತದೆ ಅಂದರೆ ಗರ್ಭಧಾರಣೆ ವೇಳೆ ಏರಿದ್ದ ತೂಕದ ಬಗ್ಗೆ ತುಂಬಾ ಚಿಂತಿಸಿ ಅದನ್ನು ಕಮ್ಮಿ ಸಮಯದಲ್ಲೇ ಎಷ್ಟು ಸಾಧ್ಯವೋ ಅಷ್ಟು ಇಳಿಸಲು ಪ್ರಯತ್ನಿಸುವುದು. ಇದರ ಅರ್ಥ ತೂಕ ಇಳಿಸಿಕೊಳ್ಳುವುದಕ್ಕೆ ಬೇಕಿದ್ದಕಿಂತ ಹೆಚ್ಚು ವ್ಯಾಯಾಮ ಮಾಡುವುದು. ಆದರೆ, ಶರವೇಗದಲ್ಲಿ ತೂಕ ಇಳಿಕೆ ಆಗುವುದು ಕೂಡ ಸ್ಟ್ರೆಚ್ ಮಾರ್ಕ್ ಗಳನ್ನ ಹುಟ್ಟುಹಾಕುತ್ತದೆ. ಏಕೆಂದರೆ ನೀವು ಕಮ್ಮಿ ಸಮಯದಲ್ಲಿ ಹೀಗೆ ಮಾಡಿದಾಗ ನೀವು ನಿಮ್ಮ ದೇಹಕ್ಕೆ ಸುಧಾರಿಸಿಕೊಳ್ಳಲು ಹಾಗು ಮತ್ತೆ ಬಿಗಿಯಾಗುವುದಕ್ಕೆ ಸಮಯ ಕೊಡದೆ ಇರುವುದು. ಇದಲ್ಲದೇ, ಇದು ಕಾಲಜನ್ ಉತ್ಪನ್ನವನ್ನು ಸ್ಥಗಿತಗೊಳಿಸುವಂತ ಹಾರ್ಮೋನ್ ಉತ್ಪತ್ತಿಯಾಗುವಂತೆ ಮಾಡುತ್ತದೆ. ಹೀಗಾದಾಗ, ನೀವು ಮತ್ತಷ್ಟು ಸ್ಟ್ರೆಚ್ ಮಾರ್ಕ್ ಗಳಿಗೆ ತುತ್ತಾಗುವ ಸಾಧ್ಯತೆಗಳೇ ಹೆಚ್ಚು.

3.ತೂಕದಲ್ಲಿ ಏರಿಕೆ
ಬಹಳಷ್ಟು ಜನರು ತಮ್ಮ ಸ್ನಾಯುಗಳನ್ನು ಬೆಳೆಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಇದು ಸ್ವಲ್ಪವೇ ಸಮಯದಲ್ಲಿ ಬಹಳ ತೂಕ ಹೆಚ್ಚುವಂತೆ ಮಾಡುತ್ತದೆ. ಶರವೇಗದ ತೂಕದಲ್ಲಿನ ಏರಿಕೆ ಗರ್ಭಧಾರಣೆ ಸಮಯದಲ್ಲೂ ಆಗುತ್ತದೆ. ನಿಮ್ಮ ತ್ವಚೆಯು ಹಿಗ್ಗುವುದರಿಂದ, ನಿಮಗೆ ಸ್ಟ್ರೆಚ್ ಮಾರ್ಕ್ ಗಳು ಉಂಟಾಗುವ ಸಾಧ್ಯತೆ ಇರುತ್ತದೆ ಅಲ್ಲದೆ ಇದರಿಂದ ಕಾಲಜನ್, ರಕ್ತ ನಾಳಗಳು ಹಾಗು ಎಲಾಸ್ಟಿಕ್ ನಾರುಗಳಿಗೆ ಹಾನಿ ಉಂಟಾಗಬಹುದು. ಇದು ನಿಮ್ಮ ರಕ್ತ ನಾಳಗಳಲ್ಲಿ ಹಾಗು ಎಲಾಸ್ಟಿಕ್ ಫೈಬರ್ಗಳಲ್ಲಿ ಉರಿತ ಉಂಟಾಗುವ ಕಾರಣ, ನಿಮ್ಮ ತ್ವಚೆ ಮೇಲೆ ಕೆಂಪು ರಾಷೆಸ್ ಥರ ಕಲೆಗಳಾಗಬಹುದು. ತ್ವಚೆಯ ಈ ಹಿಗ್ಗುವಿಕೆಗೆ ಒಗ್ಗಿಕೊಳ್ಳಲು ಆಗದ ಕಾರಣ ಸ್ಟ್ರೆಚ್ ಮಾರ್ಕ್ ಗಳು ಮೂಡುತ್ತವೆ.

4. ಪವಾಡ ಮಾಡುವ ಕ್ರೀಂಗಳು
ನಾವು ಸ್ಟ್ರೆಚ್ ಮಾರ್ಕ್ ಗಳನ್ನ ನಿವಾರಿಸಿಕೊಳ್ಳದಂತೆ ಮಾಡಲು ಅಡ್ಡಗಾಲು ಹಾಕುವುದು ಮಾರುಕಟ್ಟೆಯಲ್ಲಿ ಸ್ಟ್ರೆಚ್ ಮಾರ್ಕ್ ಗಳನ್ನ ನಿವಾರಿಸುತ್ತೇವೆ ಎಂದು ಹೇಳಿಕೊಂಡು ಬರುವ ಹಲವಾರು ಕ್ರೀಂಗಳು. ಸ್ಟ್ರೆಚ್ ಮಾರ್ಕ್ ಗಳನ್ನ ನಿವಾರಿಸುವುದರಲ್ಲಿ ಸಹಾಯ ಮಾಡುವ ಕೆಲವೇ ಕೆಲವು ವಸ್ತುಗಳಲ್ಲಿ ಒಂದು ಎಂದರೆ ಅದು ಟ್ರೆಟಿನಾಯಿನ್ (Tretinoin). ಈ ಗುರುತುಗಳನ್ನ ಅಳಿಸಿ ಹಾಕುತ್ತೇವೆ ಎಂದು ಹೇಳಿಕೊಳ್ಳುವ ಬಹುತೇಕ ಕ್ರೀಂ ಗಳು ನಿಮಗೆ ಸ್ವಲ್ಪ ಮಟ್ಟಿಗೆ ಅಷ್ಟೇ ಸಹಾಯ ಮಾಡಬಲ್ಲವು.

5. ಕೆರೆದುಕೊಳ್ಳುವುದು
ಬಹಳಷ್ಟು ಸಲ ನಿಮ್ಮ ಸ್ಟ್ರೆಚ್ ಮಾರ್ಕ್ ಗಳ ಸುತ್ತಲಿನ ಚರ್ಮವು ನವೆಯಾಗುತ್ತಿರುತ್ತದೆ, ಹೀಗಾಗಿ ಅದನ್ನು ಕೆರೆದುಕೊಳ್ಳುವುದು ನಿಮಗೆ ಸಮಾಧಾನ ನೀಡಬಹುದು. ನವೆಯು ನಿಮ್ಮ ಚರ್ಮ ಹಿಗ್ಗಿದರ ಕಾರಣದಿಂದ ಉಂಟಾಗಬಹುದು. ಆದರೆ, ಕೆರೆದುಕೊಳ್ಳುವುದು ಮತ್ತಷ್ಟು ಸ್ಟ್ರೆಚ್ ಮಾರ್ಕ್ ಗಳು ಆಗುವ ಸಾಧ್ಯತೆಗಳನ್ನ ಹೆಚ್ಚಿಸುತ್ತದೆ. ಇದಕ್ಕೆ ಇರುವ ಪರಿಹಾರ ಎಂದರೆ ಲೋಷನ್ ಅಥವಾ ಆರ್ದ್ರಕಾರಿ(moisturizer) ಅಣ್ಣ ಲೇಪಿಸಿ ತ್ವಚೆಯು ತೇವಾಂಶದಿಂದ ಕೊಡಿರುವಂತೆ ಕಾಪಾಡಿಕೊಳ್ಳುವುದು.

6. ಕಾಯುವುದು
ಸ್ಟ್ರೆಚ್ ಮಾರ್ಕ್ ಗಳು ಹೊಸದಿರುವಷ್ಟು ನಿವಾರಿಸುವುದು ಸುಲಭ. ಅವು ತೆಳ್ಳನೆ ಬಿಳಿ ಗೆರೆಗಳಾಗಿ ಮಾರ್ಪಾಡಾದ ಮೇಲೆ ನಿವಾರಿಸುವುದಕ್ಕಿಂತ, ಅವುಗಳು ಕೆಂಪಗೆ ಹಾಗು ತಾಜಾವಾಗಿ ಇದ್ದಾಗಲೇ ನಿವಾರಿಸುವುದು ಸುಲಭ. ಅವುಗಳು ಇನ್ನು ಹೊಸದಿದ್ದಾಗ ಅವುಗಳನ್ನ ಲೇಸರ್ ಚಿಕಿತ್ಸೆ ಮೂಲಕ ನಿವಾರಿಸಬಹುದು. ಆದರೆ, ಹಳೆಯ ಗುರುತುಗಳಿಗೆ ಈ ಚಿಕಿತ್ಸೆ ಅಷ್ಟು ಫಲಕಾರಿ ಅಲ್ಲ.

7. ಸ್ನಾನ
ಇದು ನಾವು ಪ್ರತಿದಿನ ಇಷ್ಟಪಟ್ಟು ಮಾಡುವಂತದ್ದು. ಅದು ಕೇವಲ ಮೈಸ್ನಾನ ಆಗಿರಬಹುದು ಅಥವ ಬಿಸಿನೀರಿನ ಶವರ್ ಆಗಿರಬಹುದು. ಆದರೆ, ನಿಮ್ಮನ್ನು ಬೇಜಾರು ಪಡಿಸಿದರೆ ಕ್ಷಮಿಸಿ, ಆದರೆ ಇದು ನಿಮ್ಮ ಸ್ಟ್ರೆಚ್ ಮಾರ್ಕ್ ಗಳ ಪರಿಸ್ತಿತಿಯನ್ನು ಮತ್ತಷ್ಟು ಹದಗೆಡಿಸುತ್ತದೆ. ಬಿಸಿ ನೀರು ತ್ವಚೆಯಿಂದ ತೇವಾಂಶವನ್ನು ಹೀರುತ್ತದೆ. ಇದೆ ಕಾರಣಕ್ಕೆ ತಣ್ಣೀರಿನ ಸ್ನಾನ ತುಂಬಾನೇ ಉಪಕಾರಿ. ಮೊದಲನೆಯದಾಗಿ ತಣ್ಣೀರು ನಿಮ್ಮ ತ್ವಚೆಯಿಂದ ತೇವಾಂಶ ಹೀರುವುದಿಲ್ಲ ಹಾಗು ಎರಡನೆಯದಾಗಿ ತಣ್ಣೀರು ನಿಮ್ಮ ತ್ವಚೆಯನ್ನು ಬಿಗಿಯಾಗುವಂತೆ ಮಾಡುತ್ತದೆ. ಇವೆರೆಡು ನಿಮ್ಮ ತ್ವಚೆಯು ಹಿಗ್ಗದಂತೆ ಕಾಪಾಡುತ್ತದೆ.

ನೀವು ನೆನಪಿದಬೇಕಾದದ್ದು ಏನೆಂದರೆ ಬಹಳಷ್ಟು ಬಾರಿ ಸ್ಟ್ರೆಚ್ ಮಾರ್ಕ್‌ಗಳು ತೊಲಗುವುದಿಲ್ಲ. ನೀವು ನಿಮ್ಮ ದೇಹದ ಕಾಳಜಿ ವಹಿಸಬೇಕೆಂಬುದಷ್ಟೇ ಸತ್ಯ. ಇದರ ಅರ್ಥ ಚೆನ್ನಾಗಿ ನೀರು ಕುಡಿಯುವುದು, ನಿಮ್ಮ ತ್ವಚೆಯ ಕಾಳಜಿ ವಹಿಸುವುದು ಹಾಗೂ ನಿಯಮಿತವಾಗಿ ಬೇಕಾದಷ್ಟೇ ವ್ಯಾಯಾಮ ಮಾಡುವುದು ಇದೇ ಇದಕ್ಕೆ ಪರಿಹಾರ.

Comments are closed.