ಚರ್ಮದ ರಕ್ಷಣೆಗೆಂದು ಕೇವಲ ಫೆಸ್ ಪ್ಯಾಕ್ ಗಳು, ವಿವಿಧ ಬಗೆಯ ಕ್ರೀಮ್ ಗಳನ್ನು ಉಪಯೋಗಿಸಿದರೆ ಸಾಲದು. ಆರೋಗ್ಯಕರವಾದ ಆಹಾರವನ್ನು ಸೇವಿಸುವುದೂ ಬಹಳ ಮುಖ್ಯ. ಕೆಳಗೆ ತಿಳಿಸಲಾದ ಪದಾರ್ಥಗಳನ್ನು ತಿನ್ನುವುದರಿಂದ ಮೊಡವೆಗಳು ಬರದಂತೆ ತಡೆಯಬಹುದು. ಇಷ್ಟಕ್ಕೂ ಆ ಪದಾರ್ಥಗಳು ಯಾವುವೆಂದು ತಿಳಿದುಕೊಂಡು, ದಿನವೂ ಸೇವಿಸಿದಲ್ಲಿ ಮುಖದ ಮೇಲೆ ಮೊಡವೆಗಳು ಬರದೆ, ಮುಖ ಗೌರವವರ್ಣ ಪಡೆಯುತ್ತದೆ.
ಬಸಳೆ ಸೊಪ್ಪು:
ಚರ್ಮದೊಳಗೆ ಅಡಗಿ ಕುಳಿತಿರುವ ಬ್ಯಾಕ್ಟೀರಿಯಾ ಹಾಗು ಇತರೆ ಕ್ರಿಮಿಗಳು ಹೊರಗೆ ಬರುವುದರಿಂದ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ರಕ್ತದಲ್ಲಿನ ಬ್ಯಾಕ್ಟೀರಿಯಾ ಹಾಗೂ ಕ್ರಿಮಿಗಳನ್ನು ನಾಶ ಪಡಿಸುವ ಕ್ಲೋರೋಫಿಲ್ ಅಂಶ ಬಸಳೆ ಸೊಪ್ಪಿನಲ್ಲಿದೆ. ವಿಟಮಿನ್ -ಎ ಸಹ ಅಧಿಕ ಪ್ರಮಾಣದಲ್ಲಿರುತ್ತದೆ. ಇದು ಮೊಡವೆಗಳ ವಿರುದ್ಧ ಹೋರಾಡುತ್ತದೆ.
ಅರಶಿನ :
ಚರ್ಮದ ಉರಿಯನ್ನು ಕಡಿಮೆಗೊಳಿಸುತ್ತದೆ ಹಾಗೂ ಕಾಂತಿಯನ್ನು ಹೆಚ್ಚಿಸುತ್ತದೆ. ಸಹಜವಾಗಿಯೆ ಆಂಟಿಬಯಾಟಿಕ್ ಗುಳವುಳ್ಳ ಅರಶಿನವನ್ನು ಯಾವುದೊ ಒಂದು ವಿಧದಲ್ಲಿ ಪ್ರತೀ ದಿನ ಅರ್ಥ ಚಮಚ ಉಪಯೋಗಿಸುತ್ತಿದ್ದರೆ, ರಕ್ತದಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ.
ಕ್ಯಾರೆಟ್ :
ಇದರಲ್ಲಿ ವಿಟಮಿನ್-ಎ, ಬೀಟಾ ಕೆರೋಟಿನ್ ರೂಪದಲ್ಲಿ ಹೇರಳ ವಾಗಿರುತ್ತದೆ. ಇದು ಮೊಡವೆಗಳು ಬರಲು ಕಾರಣವಾದ ಕ್ರಿಮಿಗಳನ್ನು ನಾಶಗೊಳಿಸುತ್ತವೆ. ಪ್ರತೀದಿನ ಕನಿಷ್ಟ ಒಂದು ಕ್ಯಾರೆಟ್ ಸೇವಿಸಿದಲ್ಲಿ ಮೊಡವೆಗಳು ಬರದಂತೆ ನೋಡಿಕೊಳ್ಳ ಬಹುದು.
ಮೀನು :
ಒಮೇಗ-3 ಪ್ಯಾಟೀ ಆಸಿಡ್ ಗಳು ಹೇರಳವಾಗಿರುತ್ತವೆ. ಇವು ಹರದಯ, ಚರ್ಮ ಮೊದಲಾದವುಗಳನ್ನು ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ. ಮೀನುಗಳಿಂದ ಲಭಿಸುವ ಪ್ರೊಟೀನ್ ಚರ್ಮದಲ್ಲಿರುವ ಬ್ಯಾಕ್ಟೀರಿಯಗಳೊಂದಿಗೆ ಹೋರಾಡಿ, ಒಣ ಚರ್ಮ ಬರದಂತೆ ತಡೆಯುತ್ತದೆ.
Comments are closed.