ಊಟವಾದ ನಂತರ ಸ್ವಲ್ಪ ಸೋಂಪು ತಿನ್ನುವುದು ಅನಾದಿಕಾಲದಿಂದಲೂ ಬಂದ ಪದ್ಧತಿ. ಈ ಜಂಕ್ ಫುಡ್ ಯುಗದಲ್ಲಿ ಹಳೆಯ ಪದ್ಧತಿ ಯನ್ನು ನಾವು ಮರೆತಿದ್ದೇವೆ. ಹಾಗೂ ಇಂತಹ ಆಹಾರಗಳಿಂದ ನಾವು ಅನೇಕ ಸಮಸ್ಯೆಗಳಿಗೆ ಈಡಾಗುತ್ತಿದ್ದೇವೆ. ಊಟಮಾಡಿದ ನಂತರ ಸೋಂಪನ್ನು ಚೆನ್ನಾಗಿ ಅಗಿದು ನುಂಗುವುದರಿಂದ ಅನೇಕ ಪ್ರಯೋಜನಗಳುಂಟಾಗುತ್ತವೆ. ಮುಖ್ಯವಾಗಿ, ವಾತ ,ಪಿತ್ತ ದೋಷಗಳಿಂದ ಉಂಟಾಗುವ ರೋಗಗಳು ಗುಣವಾಗುತ್ತವೆ. ಸೊಂಪು ಬೀಜಗಳನ್ನು ಆಹಾರ ಪದಾರ್ಥಗಳ ತಯಾರಿಯಲ್ಲೂ , ಸುವಾಸನೆಗಾಗಿ ಉಪಯೋಗಿಸುತ್ತಾರೆ.ಮೌತ್ ಫ್ರೆಶನೆರ್,ಐಸ್ ಕ್ರೀಂ ಹಾಗೂ ಪೇಸ್ಟ್ ಗಳಲ್ಲೂ ಉಪಯೋಗಿಸುತ್ತಾರೆ.
ಈ ನಿಟ್ಟಿನಲ್ಲಿ ಸೋಂಪು ತಿನ್ನುವುದರಿಂದ ನಮಗಾಗುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ.
1.ಅಧಿಕ ರಕ್ತದೊತ್ತಡವನ್ನು ಹತೋಟಿಯಲ್ಲಿ ಇಡುತ್ತದೆ. :
ಸೋಂಪು ಬೀಜಗಳನ್ನು ಅಗಿಯುವುದರಿಂದ ಲಾಲಾ ಜಾಲದೊಂದಿಗೆ ನೈಟ್ರೇಟ್ ದೇಹಕ್ಕೆ ಸೇರುತ್ತದೆ. ಇದರಿಂದ ರಕ್ತದೊತ್ತಡ ಹತೋಟಿಯಲ್ಲಿ ಇರುತ್ತದೆ.
2. ಮೂತ್ರ ವಿಸರ್ಜನೆ ಸರಿಯಾಗಿ ಆಗಿ,
ದೇಹದಲ್ಲಿನ ಕಲ್ಮಷಗಳನ್ನು ಹೊರಗೆ ಹಾಕುತ್ತದೆ. ಇದರಿಂದಾಗಿ ಮೂತ್ರ ನಾಳಗಳ ಸೋಂಕು ತಪ್ಪುತ್ತದೆ.
3.ರಕ್ತ ಹೀನತೆ…
ಐರನ್, ಕಾಪರ್ ಮುಂತಾದ ಪೋಷಕ ಪದಾರ್ಥಗಳಿರುವುದರಿಂದ, ಸೋಂಪ್ ಸೇವನೆ ರಕ್ತ ವನ್ನು ವೃದ್ಧಿಗೊಳಿಸಿ, ರಕ್ತ ಹೀನತೆಯನ್ನು ನಿವಾರಿಸುತ್ತದೆ. ಕೆಂಪು ರಕ್ತ ಕಣಗಳ ಉತ್ಪತ್ತಿ ಹೆಚ್ಚುತ್ತದೆ. ಗರ್ಭಿಣೀ ಸ್ತ್ರೀಯರಿಗೆ ಬಹಳಷ್ಟು ಉಪಕಾರಿ.
4.ಅಧಿಕ ಭಾರ…
ನಾರಿನಂಶ ಅಧಿಕವಾಗಿದ್ದು ಇದರ ಸೇವನಯಿಂದ ದೇಹದ ಅಧಿಕ ಭಾರ ಕಡಿಮೆಯಾಗುತ್ತದೆ. ವಾತ ದೋಷವನ್ನು ನಿವಾರಿಸುವ ಗುಣವಿರುವುದರಿಂದ ಸೋಪನ್ನು ತಿನ್ನುವುದರಿಂದ ದೇಹದ ಅಧಿಕ ಭಾರ ಸಮಸ್ಯೆ ತೊಲಗುತ್ತದೆ. ಊಟವಾದನಂತರ, ಸೋಂಪನ್ನು ತಿಂದರೆ, ನೀರೆಲ್ಲಾ ಹೊರಗೆ ಹೋಗಿ ದೇಹದ ತೂಕ ಕಡಿಮೆಯಾಗುತ್ತದೆ.
5.ಜೀರ್ಣಾಶಯ ಸಮಸ್ಯೆಗಳಿಗೆ…
ಅಜೀರ್ಣ, ಗ್ಯಾಸ್, ಅಸಿಡಿಟಿ, ಮಲಬದ್ಧತೆ ಮೊದಲಾದ ಸಮಸ್ಯೆಗಳು ಅನೇಕರನ್ನು ಕಾಡುತ್ತಿವೆ. ಆದುದರಿಂದ ಈ ಸಮಸ್ಯೆಗಳಿಂದ ನರಳುತ್ತಿರುವವರು ಊಟವಾದ ನಂತರ ಒಂದು ಚಮಚ ಸೋಂಪ್ ತಿಂದರೆ, ಜೀರ್ಣಾಶಯ ಸಮಸ್ಯೆಗಳು ನಿವಾರಣೆಯಾಗುತ್ತವೆ. ತಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ.
6.ಹೃದಯ ಸಮಸ್ಯೆಗಳಿಗೆ…
ಪೊಟಾಷಿಯಂ ಹೆಚ್ಚಾಗಿರುವುದರಿಂದ ಸೊಂಪ್ ಸೇವನೆ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಹೃದಯ ಸಂಬಂಧಿ ಖಾಯಿಲೆಗಳು ಬರದಂತೆ ತಡೆಯುತ್ತದೆ. ರಕ್ತ ನಾಳಗಳು ಹಿಗ್ಗುತ್ತವೆ. ಇದರಿಂದಾಗಿ ರಕ್ತನಾಳಗಳಲ್ಲಿ ಕೊಬ್ಬು ಶೇಖರಣೆ ಕಡಿಮೆಯಾಗುತ್ತದೆ.
7.ಕ್ಯಾನ್ಸರ್…
ಸೋಂಪಿನಲ್ಲಿ ಮ್ಯಾಂಗನೀಸ್, ಜಿಂಕ್ ,ಕಾಪರ್ ಐರನ್, ಕ್ಯಾಲ್ಷಿಯಂ,ಪೊಟಾಷಿಯಮ್, ಸೆಲೆನಿಯಮ್ ಮೊದಲಾದ ಖನಿಜ, ಲವಣ ಗಳಿವೆ. ಇವುಗಳು ಹಲವು ರೀತಿಯ ಕ್ಯಾನ್ಸರ್ ಬರದಂತೆ ತಡೆಗಟ್ಟುತ್ತವೆ. ಶರಿರದಲ್ಲಿರುವ ಫ್ರೀ ರ್ಯಾಡಿಕಲ್ಸ್ ಗಳನಷ್ಟವನ್ನು ತಡೆಯುತ್ತವೆ.
8. ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಸೋಂಪು ಬೀಜಗಳಲ್ಲಿ ವಿಟಮಿನ್ ಸಿ ಅಧಿಕವಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಚರ್ಮಕಣಗಳನ್ನು ರಿಪೇರಿ ಮಾಡುತ್ತದೆ.
9.ಋತು ಸಮಸ್ಯೆಗಳಿಗೆ…
ಋತು ಸ್ರಾವದ ಸಮಯದಲ್ಲಿ ಮಹಿಳೆಯರಿಗೆ ಹೊಟ್ಟೆ ನೋವಿರುತ್ತದೆ. ಸೋಂಪ್ ತಿನ್ನುವುದರಿಂದ ನೋವು ಕಡಿಮೆಯಾಗುತ್ತದೆ ಹಾಗೂ ಋತು ಸಂಬಂಧೀ ಸಮಸ್ಯೆಗಳು ದೂರವಾಗುತ್ತವೆ.
10.ಕಣ್ಣಿನ ಆರೋಗ್ಯ ಉತ್ತಮಗೊಳ್ಳುತ್ತದೆ.
ಇದರಲ್ಲಿರುವ ಅಮೈನೋ ಆಸಿಡ್ ಹಾಗೂ ವಿಟಮಿನ್ ಸಿ ಕಣ್ಣುಗಳನ್ನು ಕಾಪಾಡುತ್ತವೆ. .ಕಣ್ಣುಗಳು ಉರಿಯದಂತೆ ಮಾಡುತ್ತವೆ.
11. ಉಸಿರಿನ ಸಮಸ್ಯೆಗಳು ದೂರವಾಗುತ್ತವೆ.
ಕೆಮ್ಮು, ಧಮ್ಮು ಮೊದಲಾದ ಉಸಿರಿನ ಸಮಸ್ಯೆಗಳನ್ನು ದೂರಮಾಡುತ್ತದೆ. ಮೂಗು ಮತ್ತು ಗಂಟಲಿನಲ್ಲಿ ಸೇರಿಕೊಂಡಿರುವ ಕಫವನ್ನು ಕರಗಿಸುತ್ತದೆ.
12.ಲಿವರ್ ಬಲಿಷ್ಟವಾಗುತ್ತದೆ.
ಸೋಂಪು ಬೀಜಗಳಲ್ಲಿ ಸೆಲೆನಿಯಂ ಅಧಿಕವಾಗಿರುವುದರಿಂದ ಲಿವರ್ ಕೆಲಸವನ್ನು ಸುಗಮಗೊಳಿಸುತ್ತದೆ. ಹಾನಿಕಾರಕ ಪದಾರ್ಥಗಳನ್ನು ಹೊರದಬ್ಬುತ್ತವೆ. ಸೋಂಕು ತಗಲದಂತೆ ನೋಡಿಕೊಳ್ಳುತ್ತದೆ.
Comments are closed.