ಆರೋಗ್ಯ

ಮಟ್ಟುಗುಳ್ಳ ಬೆಳೆಗೆ ಉಡುಪಿಯಲ್ಲಿ ಹಾಪ್ ಕಾಮ್ಸ್ ಮೂಲಕ ಮಾರುಕಟ್ಟೆ ವ್ಯವಸ್ಥೆ

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಟ್ಟು , ಉಳಿಯಾರಗೋಳಿ ಹಾಗೂ ಕೋಟೆಗ್ರಾಮಗಳಲ್ಲಿ ಬೆಳೆಯುವ ಮಟ್ಟುಗುಳ್ಳ ಬದನೆಯು ಭೌಗೋಳಿಕ ಮಾನ್ಯತೆ ಪಡೆದಿರುವ ಬೆಳೆಯಾಗಿರುತ್ತದೆ.

ಇದರ ವಿಶೇಷ ರುಚಿಯಿಂದ ದೇಶ ವಿದೇಶಗಳಲ್ಲಿ ಖ್ಯಾತಿ ಪಡೆದಿದ್ದು ಉಡುಪಿ, ಮತ್ತು ಮಂಗಳೂರು ಜಿಲ್ಲೆಗಳ ಮಾರುಕಟ್ಟೆಯಲ್ಲಿ ತುಂಬಾ ಬೇಡಿಕೆ ಇರುತ್ತದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು 89 ಮಟ್ಟುಗುಳ್ಳ ಬದನೆ ಬೆಳೆಗಾರರು 128 ಎಕರೆ ವಿಸ್ತೀರ್ಣದಲ್ಲಿ ಮಟ್ಟುಗುಳ್ಳ ಬದನೆಯನ್ನು ಪ್ರತಿವರ್ಷ ಬೆಳೆಯುತ್ತಿದ್ದು ಈ ವರ್ಷ ಕೋವಿಡ್-19 ಸಂಬಂದ ಲಾಕ್ ಡೌನ್ ಇದ್ದುದರಿಂದ ಮಟ್ಟುಗುಳ್ಳ ಬದನೆಗೆ ಮಾರುಕಟ್ಟೆ ವ್ಯವಸ್ಥೆಗೆ ತೊಂದರೆಯಾಗುತ್ತಿದ್ದು ಉಡುಪಿ ಜಿಲ್ಲಾ ತೋಟಗಾರಿಕೆ ಇಲಾಖೆ ರವರು ವಾದಿರಾಜ ಮಟ್ಟುಗುಳ್ಳ ಬೆಳೆಗಾರರ ಸಂಘದವರೊಂದಿಗೆ ಚರ್ಚಿಸಿ, ಉಡುಪಿ ಮತ್ತು ಮಂಗಳೂರು ಜಿಲ್ಲೆ ತೋಟಗಾರಿಕೆ ಇಲಾಖೆಯ ಹಾಪ್ ಕಾಮ್ಸ್ ವತಿಯಿಂದ ಖರೀದಿಸಿ ಸಾರ್ವಜನಿಕರಿಗೆ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗಿರುತ್ತದೆ.

ಹಾಗೂ ಸರಕು ಸರಬರಾಜು ಮಾಡಲು ಇಲಾಖೆಯಿಂದ ಪಾಸ್ ವಿತರಣೆ ಮಾಡಲಾಗಿದ್ದು ಲಾಕ್ ಡೌನ್ ಹಿನ್ನೆಲೆಯಲ್ಲಿ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಬೆಳೆ ನಷ್ಟವಾಗಿರುವುದಿಲ್ಲವೆಂದು ಉಡುಪಿ ತೋಟಗಾರಿಕೆ ಇಲಾಖೆ ಹಾಗೂ ಮಟ್ಟುಗುಳ್ಳ ಬೆಳೆಗಾರರ ಸಂಘ ತಿಳಿಸಿದೆ. ಹಾಗೂ ಅನಾನಸ್, ಕಲ್ಲಂಗಡಿ ಮತ್ತು ಇತರೇ ತೋಟಗಾರಿಕೆ ಬೆಳೆಗಳ ಮಾರುಕಟ್ಟೆ ವ್ಯವಸ್ಥೆಯ ಹೆಚ್ಚಿನ ಮಾಹಿತಿಗಾಗಿ ಉಡುಪಿ ತಾಲೂಕು ತೋಟಗಾರಿಕೆ ಇಲಾಖೆ, ದೊಡ್ಡಣಗುಡ್ಡೆ, ಉಡುಪಿ ಇಲ್ಲಿ ಸಂಪರ್ಕಿಸಬಹುದಾಗಿರುತ್ತದೆ ಎಂದು ತೋಟಗಾರಿಕೆ ಇಲಾಖೆ ಪ್ರಕಟಣೆ ತಿಳಿಸಿದೆ.

Comments are closed.