ಆರೋಗ್ಯ

ದೇಹಕ್ಕೆ ಬೇಕಾಗಿರುವ ಅಯೋಡಿನ್‌ಯುಕ್ತ ಆಹಾರ ಪದಾರ್ಥಗಳ ಪಟ್ಟಿ

Pinterest LinkedIn Tumblr

ನಮ್ಮ ದೇಹಕ್ಕೆ ಬೇಕಾದ ಮುಖ್ಯವಾದ ಪೋಷಕಾಂಶಗಳಲ್ಲಿ ಅಯೋಡಿನ್ ಸಹ ಒಂದು. ಇದು ಮಿನರಲ್ಸ್ ಪಟ್ಟಿಗೆ ಸೇರುತ್ತದೆ. ಥೈರಾಯಿಡ್ ಹಾರ್ಮೋನ್‌ಗೆ ಅತ್ಯಂತ ಅವಶ್ಯಕವಾದ ಪೋಷಕ ಪದಾರ್ಥ ಇದು. ಇದರಿಂದ ಥೈರಾಯಿಡ್ ಗ್ರಂಥಿ ಸರಿಯಾಗಿ ಕೆಲಸ ಮಾಡುತ್ತದೆ. ಇನ್ನು ಗರ್ಭಿಣಿಯರಿಗೆ ಅಯೋಡಿನ್ ತುಂಬಾ ಹೆಚ್ಚಿನ ಪ್ರಮಾಣದಲ್ಲಿ ಬೇಕಾಗಿರುತ್ತದೆ. ಅಯೋಡಿನ್ ಸೂಕ್ತ ರೀತಿಯಲ್ಲಿ ಸಿಗದಿದ್ದರೆ ಥೈರಾಯಿಡ್ ಗ್ರಂಥಿ ಊತಕ್ಕೆ ಒಳಗಾಗುತ್ತದೆ. ಇದರಿಂದ ಥೈರಾಯಿಡ್ ಸಮಸ್ಯೆಗಳು ಬರುತ್ತವೆ. ಸುಸ್ತು, ನಿಶ್ಯಕ್ತಿ, ತೂಕ ಹೆಚ್ಚಾಗುವುದು ಅಥವಾ ಕಡಿಮೆಯಾಗುವಂತಹ ಲಕ್ಷಣಗಳು ಕಾಣಿಸುತ್ತವೆ. ಇದರ ಜೊತೆಗೆ ಸ್ನಾಯುಗಳ ನೋವು, ಬಾಯಿ ಯಾವಾಗಲೂ ಒಣಗಿದಂತೆ ಇರುವುದು ಇನ್ನಿತರೆ ಸಮಸ್ಯೆಗಳು ಸಹ ಬರುತ್ತವೆ. ಆದಕಾರಣ ಅಯೋಡಿನ್ ಇರುವ ಆಹಾರವನ್ನು ನಾವು ನಿತ್ಯ ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಹಾಗಿದ್ದರೆ ಅಯೋಡಿನ್ ಯಾವ್ಯಾವ ಆಹಾರ ಪದಾರ್ಥಗಳಲ್ಲಿ ಇರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

1. ಹಾಲು, ಹಾಲಿನ ಉತ್ಪನ್ನಗಳು
ಹಾಲು, ಅದಕ್ಕೆ ಸಂಬಂಧಿಸಿದ ಉತ್ಪನ್ನಗಳಲ್ಲಿ ಅಯೋಡಿನ್ ಸಮೃದ್ಧವಾಗಿ ಇರುತ್ತದೆ. ಒಂದು ಕಪ್ ಹಾಲು ಕುಡಿದರೆ ನಮಗೆ ನಿತ್ಯ ಬೇಕಾದ ಅಯೋಡಿನ್ ಶೇ. 59ರಿಂದ 112ರಷ್ಟು ಸಿಗುತ್ತದೆ. ಅದೇ ರೀತಿ ಪನ್ನೀರ್, ಮೊಸರು ಇನ್ನಿತರೆ ಹಾಲಿನ ಉತ್ಪನ್ನಗಳಲ್ಲೂ ಅಯೋಡಿನ್ ಪುಷ್ಕಳವಾಗಿ ಇರುತ್ತದೆ. ಇವನ್ನು ನಿತ್ಯ ತೆಗೆದುಕೊಂಡರೆ ಅಯೋಡಿನ್ ಲೋಪವನ್ನು ತಡೆಯಬಹುದು.

2. ಅಯೋಡೈಸ್ಡ್ ಉಪ್ಪು
ನಾವು ತಿನ್ನುವ ಉಪ್ಪು ಅಯೋಡೈಸ್ಡ್ ಉಪ್ಪು ಆಗಿರಬೇಕು. ಸಾಮಾನ್ಯ ಉಪ್ಪು ತಿಂದರೆ ಯಾವುದೇ ಪ್ರಯೋಜನ ಇರಲ್ಲ. ಅಯೋಡೈಸ್ಡ್ ಉಪ್ಪು ಆದರೆ ನಮ್ಮ ದೇಹಕ್ಕೆ ಅಯೋಡಿನ್ ಸಿಗುತ್ತದೆ. ಆದರೆ ಈ ಉಪ್ಪನ್ನು ಸೂಕ್ತ ಪ್ರಮಾಣದಲ್ಲಿ ಮಾತ್ರ ತೆಗೆದುಕೊಳ್ಳಬೇಕು. ಅಧಿಕವಾಗಿ ತೆಗೆದುಕೊಳ್ಳಬಾರದು.

3. ಸೀಗಡಿ
ಸೀಗಡಿ (ಹಸಿ ಅಥವಾ ಒಣಗಿಸಿದ್ದು) ನಮಗೆ ಸಂಪೂರ್ಣ ಪೋಷಕಗಳನ್ನು ನೀಡುತ್ತದೆ. ಇವುಗಳಲ್ಲಿ ಪ್ರೋಟೀನ್‌ಗಳು ಸಮೃದ್ಧವಾಗಿ ಇರುತ್ತವೆ. ಕ್ಯಾಲರಿಗಳು ಸಹ ಕಡಿಮೆ ಇರುತ್ತದೆ. ಇನ್ನು ಅಯೋಡಿನ್ ಇವುಗಳಲ್ಲಿ ಪುಷ್ಕಳವಾಗಿ ಇರುತ್ತದೆ. ವಿಟಮಿನ್ ಬಿ12, ಪಾಸ್ಪರಸ್ ಸೀಗಡಿಯಲ್ಲಿ ಯಥೇಚ್ಛವಾಗಿ ಇರುತ್ತದೆ. ಈ ಹಿನ್ನೆಲೆಯಲ್ಲಿ ಸೀಗಡಿಯನ್ನು ನಿತ್ಯ ತಿಂದರೆ ಈ ವಿಟಮಿನ್‌ಗಳಿಂದ ಬರುವ ಲೋಪಗಳಿಂದ ಹೊರಬೀಳಬಹುದು.

4. ಸಮುದ್ರದ ಮೀನು
ಸಮುದ್ರದ ಮೀನುಗಳಲ್ಲಿ ಅಯೋಡಿನ್ ಹೇರಳವಾಗಿ ಇರುತ್ತದೆ. ಇದರ ಜತೆಗೆ ನಮ್ಮ ದೇಹಕ್ಕೆ ಬೇಕಾದರೆ ಒಮೆಗಾ 3 ಫ್ಯಾಟಿ ಆಸಿಡ್ಸ್ ಸಹ ಈ ಮೀನುಗಳಲ್ಲಿ ಸಮೃದ್ಧವಾಗಿ ಇರುತ್ತದೆ. ಇವು ನಮ್ಮ ದೇಹಕ್ಕೆ ಒಳ್ಳೆಯ ಪೋಷಣೆಯನ್ನು ನೀಡುತ್ತವೆ.

5. ಮೊಟ್ಟೆ
ನಿತ್ಯ ಒಂದು ಬೇಯಿಸಿದ ಮೊಟ್ಟಿಯನ್ನು ತಿಂದರೂ ಸಾಕು. ಅದರಿಂದ ನಮ್ಮ ದೇಹಕ್ಕೆ ಬೇಕಾದ ಅಯೋಡಿನ್ ಸಿಗುತ್ತದೆ. ಇದರ ಜತೆಗೆ ಪ್ರೋಟೀನ್‍ಗಳು, ಫ್ಯಾಟ್, ವಿಟಮಿನ್, ಇತರೆ ಮಿನರಲ್ಸ್ ಸಹ ಮೊಟ್ಟೆ ಮೂಲಕ ನಮಗೆ ಲಭಿಸುತ್ತದೆ. ಆದರೆ ಕೋಳಿ ಮೊಟ್ಟೆಯಲ್ಲಿ ಹಳದಿ ಭಾಗವನ್ನು ತಿಂದರಷ್ಟೇ ಈ ಪೋಷಕಗಳು ನಮಗೆ ಸಿಗುತ್ತವೆ.

6. ಇತರೆ ಆಹಾರಗಳು
ಬಾಳೆಹಣ್ಣು, ಕ್ಯಾರೆಟ್‍ಗಳು, ಸ್ಟ್ರಾಬೆರಿ, ತೃಣಧಾನ್ಯಗಳು ಇನ್ನಿತರೆ ಆಹಾರಗಳಲ್ಲೂ ಅಯೋಡಿನ್ ಸಮೃದ್ಧಿಯಾಗಿ ಲಭಿಸುತ್ತದೆ. ಇವನ್ನು ನಿತ್ಯ ತೆಗೆದುಕೊಂಡರೆ ಅಯೋಡಿನ್ ಲೋಪವನ್ನು ಸರಿಪಡಿಸಬಹುದು.

Comments are closed.