ಆರೋಗ್ಯ

ಉಡುಪಿ ಗ್ರೀನ್ ಝೋನ್- ಮೇ.3ರವರೆಗೆ ಲಾಕ್ ಡೌನ್ ಇರುತ್ತೆ; ಜನರಿಗೆ ಸಿಕ್ಕ ಅವಕಾಶ ಸದುಪಯೋಗವಾಗಲಿ: ಡಿಸಿ (Video)

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕೊರೋನಾ ಕೊನೆಯ ಪ್ರಕರಣ ದಾಖಲಾಗಿ ತಿಂಗಳಾಗುತ್ತಿದೆ. ಜಿಲ್ಲೆ ಮಟ್ಟಿಗೆ ಗ್ರೀನ್ ಝೋನ್ ಪ್ರದೇಶ ಇದೀಗ ದಾಖಲೆಯಲ್ಲಿ ಆಗುತ್ತಿದೆ. ಆದರೆ ಜಿಲ್ಲೆಯಲ್ಲಿ ಬಹುತೇಕ ಜನರಿಗೆ ಅಗತ್ಯವಿರುವ ಎಲ್ಲಾ ಚಟುವಟಿಕೆಗಳಿಗೂ ಶರತ್ತುಬದ್ಧವಾಗಿ ಈಗಾಗಲೇ ವಿನಾಯತಿ ನೀಡಲಾಗಿದೆ. ಸದ್ಯ ಕೆಲವೊಂದು ವಿನಾಯತಿ ನೀಡಿದ್ದರೂ ಕೂಡ ಮೇ.3 ತನಕ ಲಾಕ್ ಡೌನ್ ಜಾರಿಯಲ್ಲಿರುವ ಕಾರಣ ಸಾಮಾಜಿಕ ಅಂತರ ಪಾಲನೆ,ಅಂಗಡಿಗಳು ನಿಗದಿಯ ಅವಧಿ ವೇಳೆ ಮುಚ್ಚುವ ವ್ಯವಸ್ಥೆ ಆಗಲೇಬೇಕಿದೆ. ಆರ್ಥಿಕವಾಗಿ ಸಬಲರಾಗಿ ಕೊರೋನಾ ವಿರುದ್ಧ ಹೋರಾಡಲು ಸರಕಾರ ಕೊಟ್ಟ ಅವಕಾಶ ಇದಾಗಿದ್ದು ಜನರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.

ಯಾವುದು ಇಲ್ಲ….
ಬಂಗಾರದಂಗಡಿಗಳು, ಮಲ್ಟಿ ಬ್ರಾಂಡ್ ಮತ್ತು ಸಿಂಗಲ್ ಬ್ರಾಂಡ್ ಶಾಪ್ ತೆರೆಯಲ್ಲ. ಬ್ಯೂಟಿ ಪಾರ್ಲರ್, ಸೆಲೂನ್, ಸ್ಫಾ ಗಳು ಓಪನ್ ಆಗಲ್ಲ. ಇವುಗಳನ್ನು ಹೊರತು ಪಡಿಸಿ ಹೋಟೆಲ್ ತೆರೆಯಲು ಅನುಮತಿಯಿಲ್ಲ ಆದರೆ ಪಾರ್ಸೆಲ್ ನೀಡಲು ತೊಂದರೆಯಿಲ್ಲ.

ಯಾವುರು ಇರುತ್ತೆ…?
ಗ್ರೀನ್ ಜೋನ್ ಜಿಲ್ಲೆಗಳಲ್ಲಿ ಕೈಗಾರಿಕಾ ಕೇಂದ್ರ ತೆರೆಯಲು ಅವಕಾಶವಿದ್ದು ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕೈಗಾರಿಕೆ ನಡೆಸಲು ಅನುಮತಿ ನೀಡಲಾಗಿದೆ. ಕಟ್ಟಡ ನಿರ್ಮಾಣ ಕಾರ್ಯಕ್ಕೆ, ಮನೆ ನಿರ್ಮಾಣಕ್ಕೆ, ಕ್ರಶ್ಜಿ, ತೋಟಗಾರಿಕೆ, ಮೀನುಗಾರಿಕೆ ನಡೆಸಲು ಅನುಮತಿ ನೀಡಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಪೂರಕವಾಗಿ ಮರಳು, ಕ್ರಷರ್ ಪ್ರಾರಂಭವಾಗಲು ಕ್ರಮಕೈಗೊಳ್ಳಲಾಗಿದೆ. ಎಲ್ಲಾ ಕಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು., ಮಾಸ್ಕ್, ಸ್ಯಾನಿಟೈಸರ್ ಬಳಸಬೇಕು. ನಿಯಮ ಉಲ್ಲಂಘಿಸಿದರೇ ಸಂಬಂದಪಟ್ತಟ್ಟ ಮಾಲಿಕರ ವಿರುದ್ಧ ಕ್ರಮಕೈಗೊಳ್ಳಲು ಜಿಲ್ಲಾ ಎಸ್ಪಿ ಜೊತೆಗೂ ಮಾತನಾಡಿದ್ದೇನೆ ಎಂದು ಡಿಸಿ ಹೇಳಿದ್ದಾರೆ. ಅಲ್ಲದೇ ಇದೆಲ್ಲದರ ಬಗ್ಗೆ ಮುತುವರ್ಜಿ ವಹಿಸಲು ಎಸಿ ಸಹಿತ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ನೋಡೆಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದರು.

ಲಾಕ್ ಡೌನ್ ಮುಂದುವರಿಯುತ್ತೆ ಎಚ್ಚರ!
ಇವೆಲ್ಲಾ ಚಟುವಟಿಕೆಗಳು ನಡೆದರೂ ಕೂಡ ಜನರು ಇಚ್ಚಾನುಸಾರ ಸುಖಾಸುಮ್ಮನೆ ತಿರುಗಾಡುವಂತಿಲ್ಲ. ಮೇ.೩ ತನಕ ಲಾಕ್ ಡೌನ್ ನಡೆಯಲಿದೆ. ಓಡಾಡುವವರು ತಮ್ಮತಮ್ಮ ಕೆಲಸ ನಿರ್ವಹಣೆ ಸಂಸ್ಥೆಯಿಂದ ಪಾಸ್ ಪಡೆದು ಪೊಲೀಸರಿಗೆ ತೋರಿಸಬೇಕು. ಅಂಗಡಿಗಳು ಬೆಳಿಗ್ಗೆ 7 ರಿಂದ ಬೆಳಿಗ್ಗೆ 11ರವರೆಗೆ ತೆರೆಯಬೇಕು. ಆಟೋ ರಿಕ್ಷಾ ಸೇರಿದಂತೆ ಯಾವುದೇ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಿರಬಾರದು. ಈಗಾಗಲೇ 750ಕ್ಕೂ ಅಧಿಕ ವಾಹನಗಳು ವಶಕ್ಕೆ ಪಡೆಯಲಾಗಿದೆ.

(ವರದಿ-ಯೋಗೀಶ್ ಕುಂಭಾಸಿ)

Comments are closed.