ಆರೋಗ್ಯ

ಭಟ್ಕಳದ ಗರ್ಭಿಣಿ ಕೊರೋನಾ ನೆಗೆಟಿವ್ ಆಗಿ ಊರಿಗೆ: ಉಡುಪಿ ಜಿಲ್ಲೆಗಿಂದು ಶುಭದಿನ- ಡಿಸಿ ಜಿ‌. ಜಗದೀಶ್

Pinterest LinkedIn Tumblr

ಉಡುಪಿ: ಉಡುಪಿಯ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಉತ್ತರಕನ್ನಡ ಭಟ್ಕಳ ಮೂಲದ ಕೊರೋನಾ ಶಂಕಿತ ಗರ್ಭಿಣಿ ಗುಣಮುಖರಾಗಿ ಶುಕ್ರವಾರ ಮಧ್ಯಾಹ್ನ ತೆರಳಿದರು. ಈ ಬಗ್ಗೆ ಉಡುಪಿ ಜಿಲ್ಲಾಧಿಕಾರಿಗಳು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಉತ್ತರಕನ್ನಡ ಜಿಲ್ಲೆಯಲ್ಲಿ ಚಿಕಿತ್ಸೆಗೆ ಅಸಾಧ್ಯವೆಂದು ಉಡುಪಿಗೆ ಕರೆತಂದಿದ್ದ ಗರ್ಭಿಣಿ ಮಹಿಳೆಗೆ ಉತ್ತಮ ಚಿಕಿತ್ಸೆ ಸಿಕ್ಕಿ ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ತಮ್ಮೂರಿಗೆ ತೆರಳಿದ್ದಾರೆ. ಉಡುಪಿ‌ ಜಿಲ್ಲೆಗೆ ಇಂದು ಶುಭ ದಿನದ ಶುಭ ಸುದ್ದಿ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.

(ಸಾಂದರ್ಭಿಕ ಚಿತ್ರ)

ಬೇರೆ ಜಿಲ್ಲೆಯವರಿಗೆ ಚಿಕಿತ್ಸೆ ನೀಡುವ ಬಗ್ಗೆ ಜಿಲ್ಲಾಡಳಿತ ಮತ್ತು ಸಂಬಂದಪಟ್ಟ ಟಿಎಂಎ ಪೈ ಕೋವಿಡ್ ಆಸ್ಪತ್ರೆಯ ನಡುವೆ ಕರಾರು ಇತ್ತು. ಆದರೆ ಮುಖ್ಯಮಂತ್ರಿಗಳು ಮತ್ತು ಸರಕಾರದ ಮುಖ್ಯ ಕಾರ್ಯದರ್ಶಿಗಳ ಸೂಚನೆ ಮೇರೆಗೆ ಈ ಗರ್ಭಿಣಿ ಮಹಿಳೆ ಚಿಕಿತ್ಸೆ ಪ್ರಕರಣವನ್ನು ಚಾಲೆಂಜ್ ಆಗಿ ಸ್ವೀಕರಿಸಿ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಅವರ ಬಳಿ ಮಾತುಕತೆ ನಡೆಸಿ ಚಿಕಿತ್ಸೆ ನೀಡಿದ್ದು ಇಂದು ಅವರನ್ನು ಹಾಗೂ ಮಗುವನ್ನು ಸುರಕ್ಷಿತವಾಗಿಸಿ ಕೊರೋನಾ ನೆಗೆಟಿವ್ ಆಗಿ ಊರಿಗೆ ಕಳುಹಿಸುತ್ತಿರುವುದಕ್ಕೆ ಸಂತಸವಾಗುತ್ತಿದೆ. ಟಿ.ಎಂ.ಎ ಪೈ ಆಡಳಿತ ಮಂಡಳಿಯ ಸಾಧನೆಗೆ ಜಿಲ್ಲಾಡಳಿತದ ಅಭಿನಂದನೆ. ಡಾ. ಶಶಿಕಿರಣ್ ಹಾಗೂ ತಂಡದ ಕಾರ್ಯ ನಿಜಕ್ಕೂ ಪ್ರಶಂಸನೀಯ ಎಂದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.