ಆರೋಗ್ಯ

ಯಾವ ಭಾಗಗಳಲ್ಲಿ ನೋವು ಬಂದರೆ, ಯಾವ ನೋವಿನ ಸಮಸ್ಯೆ ಎಂದು…ಕಂಡು ಹಿಡಿಯುವ ವಿಧಾನ.

Pinterest LinkedIn Tumblr

ನಮ್ಮ ದೇಹ ಎಂದರೇನೆ ಅದೊಂದು ಸಂಕ್ಲಿಷ್ಟವಾದ ನಿರ್ಮಾಣ. ನಮಗೆ ಆಗುವ ಕೆಲವು ಅನಾರೋಗ್ಯ ಸಮಸ್ಯೆಗಳನ್ನು ತಿಳಿದುಕೊಳ್ಳಲು ಒಮ್ಮೊಮ್ಮೆ ವೈದ್ಯರೂ ವಿಫಲರಾಗುತ್ತಿರುತ್ತಾರೆ. ಏನು ಸಮಸ್ಯೆ ಎಂಬುದು ಗೊತ್ತಾಗಲ್ಲ. ಇದರಿಂದ ಚಿಕಿತ್ಸೆ ಸಹ ಅಸಾಧ್ಯವಾಗುತ್ತದೆ. ನಮ್ಮ ದೇಹದಲ್ಲಿ ಒಮ್ಮೊಮ್ಮೆ ಸಮಸ್ಯೆ ಇರುವ ಕಡೆ ಅಲ್ಲದೆ ಬೇರೆ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇದರಿಂದ ಇಂತಹ ಸಂದರ್ಭಗಳಲ್ಲಿ ನಿಜವಾದ ಸಮಸ್ಯೆ ಕಂಡುಹಿಡಿಯುವುದು ತುಂಬಾ ಕಷ್ಟಕರವಾಗುತ್ತದೆ. ಹಾಗಿದ್ದರೆ ನಮ್ಮ ದೇಹದ ಯಾವ ಭಾಗಗಳಲ್ಲಿ ನೋವು ಬಂದರೆ ಆ ನೋವಿನ ಸಮಸ್ಯೆ ಅಥವಾ ಅನಾರೋಗ್ಯ ಏನು ಎಂಬುದನ್ನು ಈಗ ತಿಳಿದುಕೊಳ್ಳೋಣವೇ..?

1. ಹೃದಯ
ಹೃದಯದ ನೋವು ಬಂದರೆ ನಮ್ಮ ದೇಹದ ಎದೆ ಭಾಗಗಲ್ಲಿ ಎಡಗಡೆ ನೋವು ಕಾಣಿಸುತ್ತದೆ ಎಂದು ಎಲ್ಲರಿಗೂ ಗೊತ್ತು. ಆದರೆ ಹೃದಯ ನೋವು ಬಂದಾಗ ಕೆಲವು ಸಲ ಆ ನೋವು ಬೆನ್ನಿನಲ್ಲಿ ಹೃದಯ ಹಿಂದೆ ಬರುವ ಅವಕಾಶ ಇರುತ್ತದೆ.

2. ಲಂಗ್ ಅಂಡ್ ಡಯಾಫ್ರಂ
ಕುತ್ತಿಗೆ, ಭುಜ ಭಾಗಗಳಲ್ಲಿ ನೋವು ಬರುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು. ಇದು ಶ್ವಾಸಕೋಶ ಸಮಸ್ಯೆಗಳಿಂದ ಬರುವ ನೋವು ಆಗಿರುತ್ತದೆ. ಅಥವಾ ಫ್ರೀನಿಕ್ ನರ್ವ್ ಎಂಬ ಒಂದು ನಾಡಿಯಿಂದ ಸಹ ಆಗಿರುತ್ತದೆ.

3. ಲಿವರ್, ಗಾಲ್ ಬ್ಲಾಡರ್
ಕುತ್ತಿಗೆ ಅಥವಾ ಭುಜಗಳಲ್ಲಿ ನೋವು ಇದ್ದರೆ ಲಿವರ್ ಅಥವಾ ಗಾಲ್ ಬ್ಲಾಡರ್ ಸಮಸ್ಯೆ ಆಗಿರುತ್ತದೆ. ಸಾಮಾನ್ಯವಾಗಿ ಕಂಪ್ಯೂಟರ್ ಎದುರು ಹೆಚ್ಚು ಹೊತ್ತು ಕುಳಿತು ಕೆಲಸ ಮಾಡುವುದರಿಂದ ಅಥವಾ ವ್ಯಾಯಾಮ ಮಾಡದೆ ಇರುವುದರಿಂದ ಈ ನೋವು ಕಾಣಿಸುತ್ತದೆ. ಸುದೀರ್ಘಕಾಲ ನೋವು ಇದ್ದರೆ ಮಾತ್ರ ಅನುಮಾನಿಸಬೇಕು. ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯಬೇಕು.

4. ಜೀರ್ಣಕೋಶ, ಕ್ಲೋಮಾ
ಎದೆಭಾಗದ ನಡುವೆ ಉದರಕ್ಕಿಂತಲೂ ಸ್ವಲ್ಪ ಮೇಲೆ ಅಥವಾ ಸರಿಯಾಗಿ ಬೆನ್ನಿನಲ್ಲಿ ಅದೇ ಜಾಗದಲ್ಲಿ ನೋವು ಬರುತ್ತಿದ್ದರೆ ಅದು ಜೀರ್ಣಕೋಶ ಅಥವಾ ಕ್ಲೋಮಾ ಸಮಸ್ಯೆ ಆಗಿರುತ್ತದೆ. ಸುಮಾರು ಶೇ.50ರಷ್ಟು ಮಂದಿಗೆ ಕ್ಲೋಮಾ ಸಮಸ್ಯೆ ಇರುವವರಲ್ಲಿ ಬೆನ್ನಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ರೀತಿ ನೋವು ಬರುತ್ತಿದ್ದರೆ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಬೇಕು.

5. ಸಣ್ಣ ಕರುಳು
ಹೊಕ್ಕುಳಲ್ಲಿ ವಿಪರೀಪ, ಭರಿಸಲಾಗದ ನೋವು ಬರುತ್ತಿದ್ದರೆ ಅದು ಸಣ್ಣ ಕರುಳಿನ ಸಮಸ್ಯೆ ಆಗಿರುತ್ತದೆ. ಒಮ್ಮೆ ಪರೀಕ್ಷಿಸಿಕೊಳ್ಳಿ.

6. ಅಪೆಂಡಿಕ್ಸ್, ದೊಡ್ದ ಕರುಳು
ಹೊಕ್ಕುಳ ಪಕ್ಕದಲ್ಲಿ ಸ್ವಲ್ಪ ಕೆಳಗೆ ಬಲಭಾಗದಲ್ಲಿ ನೋವು ಬಂದರೆ ಅದು ಅಪೆಂಡಿಸೈಟೀಸ್ ನೋವು ಅಥವಾ ದೊಡ್ಡ ಕರುಳು ಸಮಸ್ಯೆ ಆಗಿರುತ್ತದೆ. ಬಹಳಷ್ಟು ಮಂದಿಗಾದರೆ ಅಪೆಂಡಿಸೈಟ್ಸ್ ಸಮಸ್ಯೆ ಬರುತ್ತದೆ. ನೋವು 24 ಗಂಟೆಗಳಿಗಿಂತಲೂ ಹೆಚ್ಚು ಹೊತ್ತು ಇದ್ದರೆ ಕೂಡಲೆ ಆಪರೇಷನ್ ಮಾಡುತ್ತಾರೆ.

7. ಕಿಡ್ನಿ
ಕಿಡ್ನಿಯಲ್ಲಿ ಸಮಸ್ಯೆ ಇದ್ದರೆ ಚಿತ್ರದಲ್ಲಿ ತೋರಿಸಿರುವಂತೆ ನೋವು ಆ ಪ್ರದೇಶದಲ್ಲಿ ಹೆಚ್ಚಾಗಿ ಇರುತ್ತದೆ. ಬೆನ್ನಿನ ಭಾಗದಲ್ಲಿ ಕೆಳಗೆ, ಹೊಟ್ಟೆ, ತೊಡೆ, ಪೆಲ್ವಿಸ್ ಭಾಗದಲ್ಲಿ ನೋವು ಬರುತ್ತದೆ. ನೋವು ಯಾವಾಗಲೋ ಒಮ್ಮೆ ಬಂದರೆ ಏನೂ ಆಗಲ್ಲ, ಆದರೆ ನಿಲ್ಲದೆ ಅದೇ ರೀತಿ ಬರುತ್ತಿದ್ದರೆ ವೈದ್ಯರನ್ನು ಭೇಟಿಯಾಗಬೇಕು.

8. ಮೂತ್ರಕೋಶ
ಮೂತ್ರಕೋಶ ಸಮಸ್ಯೆ, ಸೋಂಕು ಇದ್ದರೆ ತೊಡೆಗಳ ಒಳಗಿನಿಂದ ನೋವು ಬರುತ್ತದೆ. ಅಥವಾ ಚಿತ್ರದಲ್ಲಿ ತೋರಿಸಿದಂತೆ ಮುಂದೆ, ಹಿಂದಿನ ಭಾಗಗಳಲ್ಲಿ ನೋವು ಬರುತ್ತದೆ.

9. ಅಂಡಾಶಯ
ಅಂಡಾಶಯ ಸಮಸ್ಯೆಗಲು ಇರುಅ ಮಹಿಳೆಯಲ್ಲಿ ಹೊಕ್ಕುಳ ಕೆಳಗೆ ಬಲ, ಎಡ ಭಾಗಗಳಲ್ಲಿ ನೋವು ಬರುತ್ತದೆ. ಈ ನೋವು ತೀವ್ರವಾಗಿ ಇರುತ್ತದೆ. ಕತ್ತಿಯಿಂದ ಕೊಯ್ದಂತೆ ಅನ್ನಿಸುತ್ತದೆ. ಆ ರೀತಿ ನೋವು ಬಂದರೆ ಕೂಡಲೆ ವೈದ್ಯರನ್ನು ಭೇಟಿಯಾಗಬೇಕು.

Comments are closed.