ಆರೋಗ್ಯ

ಅನುಮತಿಯಿಲ್ಲದೇ ಪ್ಯಾರಸಿಟಮಾಲ್ ಆಧಾರಿತ ಔಷಧ ಮಾರಾಟ ನಿಷೇಧ

Pinterest LinkedIn Tumblr

ಉಡುಪಿ: ಕರೋನಾ ವೈರಸ್ ರೋಗಗಳು (ಕೋವಿಡ್-19) ಸಾಂಕ್ರಾಮಿಕ ರೋಗವನ್ನು ಹರಡುವುದನ್ನು ನಿಲ್ಲಿಸಲು , ಉಡುಪಿ ಜಿಲ್ಲೆಯ ಎಲ್ಲಾ ಚಿಲ್ಲರೆ ಔಷಧ ವ್ಯಾಪಾರಸ್ಥರು, ಕೆಮ್ಮು, ಶೀತ, ಜ್ವರ, ದಣಿವು, ಉಸಿರಾಟದ ತೊಂದರೆಗಳಂತಹ ರೋಗ ಲಕ್ಷಣಗಳಿಗೆ, ಪ್ಯಾರಸಿಟಮಲ್ ಆಧಾರಿತ ಔಷಧಿಗಳನ್ನು (ಪ್ರಿಸ್ಕ್ರಿಪ್ಟಿವ್ ಮತ್ತು ಒಟಿಸಿ ಎರಡೂ) ವೈದ್ಯರ ಸಲಹಾ ಚೀಟಿಯಿಲ್ಲದೇ ಮಾರಾಟ ಮಾಡದಂತೆ ಸೂಚಿಸಲಾಗಿದೆ. ಮುಂದುವರೆದು ರೋಗಿಯ ಹೆಸರು, ವೈದ್ಯರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಮುಂತಾದ ಎಲ್ಲಾ ದಾಖಲೆಗಳನ್ನು ನಿರ್ವಹಿಸಲು ಸೂಚಿಸಲಾಗಿದೆ.

(ಸಾಂದರ್ಭಿಕ ಚಿತ್ರ)

ಮೇಲಿನ ಸೂಚನೆಗಳನ್ನು ಪಾಲಿಸಿದದ್ದಲ್ಲಿ, ಅಂತಹವರ ವಿರುದ್ದ ಔಷಧ ಮತ್ತು ಕಾಂತಿವರ್ಧಕ ಅಧಿನಿಯಮ 1940 ರಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ವೃತ್ತದ ಸಹಾಯಕ ಔಷಧ ನಿಯಂತ್ರಕ ನಾಗರಾಜ್ ತಿಳಿಸಿದ್ದಾರೆ.

ಕೆಮ್ಮು, ಶೀತ,ಜ್ವರ, ದಣಿವು ಮತ್ತು ಉಸಿರಾಟದ ತೊಂದರೆಗಳಂತಹ ಯಾವುದೇ ಅನುಮನಾಸ್ಪದ ಪ್ರಕರಣಗಳು ಕಂಡುಬಂದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ತಿಳಿಸುವಂತೆ ಅವರು ತಿಳಿಸಿದ್ದಾರೆ.

Comments are closed.