ಆರೋಗ್ಯ

ಗರ್ಭಾವಸ್ಥೆಯಲ್ಲಿ ಯಾವ ಹಣ್ಣಿನ ರಸ (ಜ್ಯೂಸ್) ಸೇವಿಸಿದರೆ ಆರೋಗ್ಯಕ್ಕೆ ಉತ್ತಮ.?

Pinterest LinkedIn Tumblr

ನೀವು ಗರ್ಭಿಣಿಯಾಗಿ ನಿಮಗೆ ಹಾಗು ನಿಮ್ಮ ಮಗುವಿಗೆ ಗರಿಷ್ಠ ಪೌಷ್ಟಿಕಾಂಶವನ್ನು ಪಡೆಯಲು ಬಯಸುತ್ತೀರಾ? ನೀವು ದಿನವೂ ಸೇವಿಸು ವ ಆಹಾರದಲ್ಲಿ ಈ ಹಣ್ಣುಗಳ ರಸವನ್ನು ತಗೆದುಕೊಂಡರೆ ನಿಮ್ಮ ಮತ್ತು ಮಗುವಿನ ಅರೋಗ್ಯ ಚೆನ್ನಾಗಿರುತ್ತದೆ ಹಾಗು ಮಗುವಿನ ಬೆಳವಣಿಗೆ ಗೆ ತುಂಬಾ ಸಹಕಾರಿಯಾಗಿದೆ.

ನಿಮ್ಮ ಗರ್ಭಾವಸ್ಥೆಯಲ್ಲಿ ಆರೋಗ್ಯಪೂರ್ಣ ಆಹಾರವನ್ನು ಕಾಯ್ದುಕೊಳ್ಳಲು ನೀವು ಬಯಸುತ್ತಿದ್ದರೆ, ಹಣ್ಣಿನ ರಸ ಕುಡಿಯುವುದು ಒಳ್ಳೆಯದು. ನೀವು ಈ ಕೆಳಗಿನ ಜ್ಯೂಸ್ ಕುಡಿದರೆ ನಿಮಗೂ ಮತ್ತು ನಿಮ್ಮ ಮಗುವಿಗೂ ತುಂಬ ಆರೋಗ್ಯಕರು.

ಕಿತ್ತಳೆ ಹಣ್ಣಿನ ರಸ
ಕಿತ್ತಳೆ ಹಣ್ಣಿನ ರಸದಲ್ಲಿ ಪೋಷಕಾಂಶಗಳು ಹೇರಳವಾಗಿದೆ. ಶೀತ, ಜ್ವರದಿಂದ ನಿಮ್ಮನ್ನು ರಕ್ಷಿಸುತ್ತದೆ. ವಿಟಮಿನ್ ಸಿ ನಮ್ಮ ದೇಹಕ್ಕೆ ಅತ್ಯಾವಶಕ. ಪೊಟ್ಯಾಸಿಯಂ ದೇಹದ ಇಮ್ಮ್ಯೂನಿಟಿನಿಯನ್ನು ಹೆಚ್ಚಿಸುತ್ತದೆ.

ಕ್ಯಾರಟ್ ಜ್ಯೂಸ್
ನಿಮ್ಮ ಹುಟ್ಟುವ ಮಗುವಿನ ಕಣ್ಣಿನ ದೃಷ್ಟಿ ಹೆಚ್ಚಿಸಲು ಕ್ಯಾರೆಟ್ಗಳು ಉತ್ತಮ ಮಾರ್ಗವಾಗಿದೆ. ಇದು ನಿಮ್ಮ ಪಿತ್ತಜನಕಾಂಗವನ್ನು ಶುದ್ಧೀಕರಿಸುವ ಮತ್ತು ನಿಮ್ಮ ದೇಹದ ವಿಷಕಾರಿ ಅಂಶಗಳನ್ನು ಸಹಾಯ ಮಾಡುತ್ತದೆ. ಕ್ಯಾರೆಟ್ ರಸವು ವಿಟಮಿನ್ಗಳಾದ ಎ ಮತ್ತು ಇ ಗಳ ಸಮೃದ್ಧ ಮೂಲವಾಗಿದೆ, ಇದು ನಿಮ್ಮ ಚರ್ಮವನ್ನು ಆರೋಗ್ಯಕರವಾಗಿ ಮತ್ತು ಪ್ರಕಾಶಮಾನವಾಗಿರಿಸುತ್ತದೆ. ಈ ವಿಟಮಿನ್ಗಳು ನಿಮ್ಮ ಉಗುರುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಕ್ಯಾರೆಟ್ ಜ್ಯೂಸ್ ಸಹ ಉತ್ತಮವಾದ ನೈಸರ್ಗಿಕ ಪದಾರ್ಥವಾಗಿದೆ, ಇದು ಹೆಚ್ಚಾಗಿ ಗರ್ಭಧಾರಣೆಯಲ್ಲಿ ಉಂಟಾಗುವ ವಿಪರೀತ ಕೂದಲ ಉದುರುವಿಕೆ ವಿರುದ್ಧ ಹೋರಾಡಲು ನಿಮಗೆ ಸಹಾಯ ಮಾಡುತ್ತದೆ. ಏರುಪೇರಾಗುವ ಥೈರಾಯ್ಡ್ ಗ್ರಂಥಿ ಕಾರಣದಿಂದಾಗಿ ನೀವು ಹೊಂದಿರುವ ಯಾವುದೇ ಆರೋಗ್ಯ ಸಮಸ್ಯೆಗಳನ್ನೂ ಇದು ತಡೆಯುತ್ತದೆ.

ಬೀಟ್ ರೂಟ್ ಜ್ಯೂಸ್
ಬೀಟ್ ರೂಟ್ ರಸವು ನಿಮ್ಮ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನಿಮ್ಮ ಗರ್ಭಾವಸ್ಥೆಯ ಸಮಯದಲ್ಲಿ ನಿಮ್ಮ ದೇಹಕ್ಕೆ ಹೆಚ್ಚು ಶಕ್ತಿಯ ಅಗತ್ಯವಿರುತ್ತದೆ, ಬೀಟ್ ರೂಟ್ ಜ್ಯೂಸು ಅಗತ್ಯ ಶಕ್ತಿಯನ್ನು ಒದಗಿಸುತ್ತದೆ. ರಕ್ತ ಹೀನತೆಯ ಯಾವುದೇ ಅಡ್ಡ ಪರಿಣಾಮಗಳನ್ನು ಎದುರಿಸಲು ಮತ್ತು ರಕ್ತ ಹೀನತೆಯನ್ನು ತಡೆಯುತ್ತದೆ. ಈ ನಿರ್ದಿಷ್ಟ ತರಕಾರಿ ಅದ್ಭುತ ಫೈಬರ್ಅನ್ನು ಹೊಂದಿದೆ, ಅಂದರೆ ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಅದು ಉತ್ತಮವಾಗಿದೆ. ಈ ರಸವನ್ನು ಸೇವಿಸುವುದರಿಂದ ನಿಮ್ಮ ದೇಹದಿಂದ ವಿಷಕಾರಿ ಅಂಶಗಳನ್ನು ಹೊರಕುತ್ತದೆ.

ಆಪಲ್ ಜ್ಯೂಸ್
ಆಪಲ್ ಜ್ಯೂಸ್ ನಿಮ್ಮ ಗರ್ಭವಾಸ್ಥೆಯ ಸಮಯದಲ್ಲಿ ಮತ್ತು ಗರ್ಭಧಾರಣೆಯ ನಂತರ ಆಪಲ್ ಜ್ಯೂಸು ಕುಡಿಯುವುದರಿಂದ ದೇಹದ ತೂಕ ಸಮತೋಲನದಲ್ಲಿರುತ್ತದೆ, ಗರ್ಭಧಾರಣೆಯ ನಂತರ ದೇಹದ ತೂಕ ಹೆಚ್ಚಾದಂತೆ ನೋಡಿಕೊಳ್ಳುತ್ತದೆ. ಮತ್ತು ಹೊಟ್ಟೆಯಲ್ಲಿನ ಮಗುವಿನ ಮೆದುಳು ಚೆನ್ನಾಗಿ ಬೆಳವಣಿಗೆಯಾಗಲು ಸಹಕಾರಿಯಾಗಿದೆ, ಕಬ್ಬ್ಬಿನಂಶ ಹೆಚ್ಚಾಗಿರುವುದರಿಂದ ಅನಿಮಿಯಾ ವನ್ನು ತಡೆಗಟ್ಟುತ್ತದೆ.

ನಿಂಬೆ ಹಣ್ಣಿನ ಜ್ಯೂಸ್
ನಿಂಬೆ ರಸವು ಪ್ರೋಟೀನ್, ಕಾರ್ಬೋಹೈಡ್ರೇಟ್, ಫೈಬರ್, ಜೀವಸತ್ವಗಳು ಮತ್ತು ಹೆಚ್ಚಿನ ರೀತಿಯ ಆರೋಗ್ಯಕರ ಪೋಷಕಾಂಶಗಳನ್ನು ಹೊಂದಿರುತ್ತದೆ. ಇದು ಖನಿಜಗಳು, ಫೋಲೇಟ್, ಸತು ಮತ್ತು ಕ್ಯಾಲ್ಸಿಯಂಗಳನ್ನು ಒಳಗೊಂಡಿರುತ್ತದೆ ಮತ್ತು ಅದು ನೀವು ಮತ್ತು ನಿಮ್ಮ ಮಗುವಿಗೆ ಒಳ್ಳೆಯದು. ನಿಂಬೆ ರಸವನ್ನು ಕುಡಿಯುವುದು ನೈಸರ್ಗಿಕವಾಗಿ ವಾಕರಿಕೆಗೆ ದೂರವಾಗುತ್ತದೆ.

ಎಳನೀರು
ಗರ್ಭಿಣಿಯಾಗಿದ್ದಾಗ ನೀವು ಕುಡಿಯಬಹುದಾದ ಆರೋಗ್ಯಕರ ಪಾನೀಯಗಳಲ್ಲಿ ತೆಂಗಿನ ನೀರು ಒಂದು. ಇದು ಯಾವುದೇ ನಿರ್ಜಲೀಕರಣದ ಚಿಂತೆಗಳನ್ನ ತಡೆಗಟ್ಟಲು ಸಹಾಯ ಮಾಡುತ್ತದೆ ಮತ್ತು ಬಳಲಿಕೆಯನ್ನು ದೂರಮಾಡುತ್ತದೆ.

ಈ ಮೇಲಿನ ಆಹಾರ ಕ್ರಮವನ್ನು ಅನುಸರಿಸುವ ಮೊದಲು ನಿಮ್ಮ ವೈದ್ಯರನ್ನು ಒಮ್ಮೆ ಕೇಳಿ ಅನುಸರಿಸಿ.

Comments are closed.