ಆರೋಗ್ಯ

ಲಾಕ್ ಡೌನ್ ನಡುವೆಯೇ ಇಸ್ಪೀಟ್ ಜುಗಾರಿ ಆಟ: ಗಂಗೊಳ್ಳಿಯಲ್ಲಿ ಮೂವರು ಅಂದರ್!

Pinterest LinkedIn Tumblr

ಉಡುಪಿ: ಕೋವಿಡ್-19 ಕೊರೋನಾ ವೈರಸ್ ತಡೆಗಟ್ಟುವ ಹಿನ್ನೆಲೆ ಲಾಕ್ ಡೌನ್ ಆದೇಶವಿದ್ದರೂ ಕೂಡ ಅದನ್ನು ಉಲ್ಲಂಘಿಸಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪಿಟ್ ಜುಗಾರಿಯಲ್ಲಿ ನಿರತರಾಗಿದ್ದ ಮೂವರನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ. ಕುಂದಾಪುರ ತಾಲೂಕು ಹಕ್ಲಾಡಿ ಗ್ರಾಮದ ಬಟ್ಟೆಕುದ್ರು ಎಂಬಲ್ಲಿ ಗುರುವಾರ ಸಂಜೆ ನಡೆದಿದೆ.

ತಾಲೂಕಿನ ಹಕ್ಲಾಡಿ ಗ್ರಾಮದ ಬಟ್ಟೆಕುದ್ರು ಎಂಬಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಗಂಗೊಳ್ಳಿ ಠಾಣಾ ಪಿ.ಎಸ್‌.ಐ ಭೀಮಾಶಂಕರ ಸಿನ್ನೂರ ಸಂಗಣ್ಣ ಅವರು ಠಾಣಾ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ್ದು ಆರೋಪಿಗಳಾದ ನಾಗೇಶ ಮೊಗವೀರ, ಗುರುರಾಜ ಮೊಗವೀರ, ಬಾಬು ಮೊಗವೀರ ಎನ್ನುವರನ್ನು ವಶಕ್ಕೆ ಪಡೆದು, ಆಪಾದಿತರು ಕೃತ್ಯಕ್ಕೆ ಉಪಯೋಗಿಸಿದ 460 ರೂ ನಗದು, 52 ಇಸ್ಪೀಟ್ ಎಲೆಗಳು ಹಾಗೂ ಹಳೆಯ ನ್ಯೂಸ್ ಪೇಪರ್-1 ನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಅಲ್ಲದೇ ಕೋವಿಡ್‌-19 ಖಾಯಿಲೆಯು ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಹೊರಡಿಸಿದ ಲಾಕ್‌ಡೌನ್‌ ಆದೇಶವನ್ನು ಉಲ್ಲಂಘಿಸಿ ಸರಕಾರದ ಮುಂಗೃತಾ ಕ್ರಮದ ಸೂಚನೆಗಳನ್ನು ಪಾಲಿಸದೇ ನಿರ್ಲಕ್ಷತನವನ್ನು ತೋರಿಸಿ ಸಾರ್ವಜನಿಕ ಸ್ಥಳದಲ್ಲಿ ಆಪಾದಿತರು ಒಟ್ಟು ಸೇರಿ ಗುಂಪುಗೂಡಿ ಕುಳಿತು ಇಸ್ಪೀಟು ಜುಗಾರಿ ಆಟ ಆಡಿದ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಐ.ಪಿ.ಸಿ ಸೆಕ್ಷನ್ 269 ಜೊತೆಗೆ 34 ಹಾಗೂ ಕೆ.ಪಿ ಆಕ್ಟ್ 87 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Comments are closed.