ಆರೋಗ್ಯ

ಸಮಾಜ ಸೇವಕರು ಹಾಗೂ ಪೊಲೀಸರ ಮಾನವೀಯ ಕಾರ್ಯ: ಗಾಯಾಳು ಮಹಿಳೆಗೆ ಸೂಕ್ತ ಚಿಕಿತ್ಸೆ

Pinterest LinkedIn Tumblr

ಕುಂದಾಪುರ: ಸೋಮವಾರ ಸಂಜೆ ಬಿದ್ದು ಕೈ ಮೂಳೆ ಮುರಿತಕ್ಕೊಳಗಾಗಿದ್ದು ಯಾರಿಗೂ ತಿಳಿಸದೇ ಸುಮ್ಮನಿದ್ದ ಮಹಿಳೆಯ ಪರಿಸ್ಥಿತಿ ಬಗ್ಗೆ ತಿಳಿದ ಪೊಲೀಸರು ಮತ್ತು ಸಮಾಜ ಸೇವಕರು ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ಕೊಡಿಸಿ ಮನೆಗೆ ಕರೆತಂದು ಬಿಟ್ಟಿದ್ದಾರೆ. ಗಂಗೊಳ್ಳಿಯಲ್ಲಿ ದಾಕುಹಿತ್ಲು ಎಂಬಲ್ಲಿ ಈ ಮಾನವೀಯ ಘಟನೆ ನಡೆದಿದೆ.

55 ವರ್ಷ ಪ್ರಾಯದ ಒಂಟಿ ಮಹಿಳೆಯೊಬ್ಬರು ನಿನ್ನೆ ಸಂಜೆ ಬಿದ್ದು ಕೈ ಮೂಳೆ ಮುರಿತಕ್ಕೊಳಗಾಗಿದ್ದ ಬಗ್ಗೆ ಇಂದು ಮಧ್ಯಾಹ್ನ ಅದ್ಯೆಗೋ ಪೊಲೀಸರಿಗೆ ತಿಳಿದಿತ್ತು. ಅವರ ಕರೆಯ ಮೇರೆಗೆ ಸ್ಥಳಕ್ಕೆ ಧಾವಿಸಿ ಮಹಿಳೆಯನ್ನು 24×7 ಆಪತ್ಭಾಂಧವ ಗಂಗೊಳ್ಳಿ ಆಂಬ್ಯುಲೆನ್ಸ್ ಮೂಲಕ ಕುಂದಾಪುರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ಪುನಃ ಮನೆಗೆ ತಂದು ಬಿಡಲಾಗಿದೆ.

ಗಂಗೊಳ್ಳಿ 24*7 ಆಂಬುಲೆನ್ಸ್’ನ ಮೊಹಮ್ಮದ್ ಇಬ್ರಾಹಿಂ ಹಾಗೂ ಮೊಹಮ್ಮದ್ ಅಬ್ರಾರ್ ಜೊತೆಗೆ ಚಿಕಿತ್ಸಾ ವೆಚ್ಚವನ್ನು ಭರಿಸಿದ ಗಂಗೊಳ್ಳಿ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಚಂದ್ರಶೇಖರ್ ಹಾಗೂ ಪ್ರಿನ್ಸ್ ಶಿರೂರು, ಸ್ಥಳದಲ್ಲಿದ್ದ ಸೇವಸಂಕಲ್ಪ ಗಂಗೊಳ್ಳಿ ತಂಡದವರು ಕಾರ್ಯ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.