ಆರೋಗ್ಯ

ಶಾಕ್‌ ಹೊಡೆದ ವ್ಯಕ್ತಿಯನ್ನು ಸಾವಿನಿಂದ ತಪ್ಪಿಸಲು ಪ್ರಥಮ ಚಿಕಿತ್ಸೆ.

Pinterest LinkedIn Tumblr

ವಿದ್ಯುತ್‌ ಬಳಕೆ ಸಂದರ್ಭದಲ್ಲಿ ಬಹಳ ಜಾಗರೂಕರಾಗಿರುವುದು ಅತೀ ಮುಖ್ಯ. ಸ್ವಲ್ಪ ಯಾಮಾರಿದರೂ ಜೀವಕ್ಕೆ ತೊಂದರೆಯಾಗುತ್ತದೆ. ವಿದ್ಯುತ್‌ ಅವಘಡದಿಂದ ಬಹಳಷ್ಟು ಜನರು ಸಾವನ್ನಪ್ಪಿದ್ದಾರೆ, ಸಾವನ್ನಪ್ಪುತ್ತಿದ್ದಾರೆ.

ಎಲೆಕ್ಟ್ರಿಕ್‌ ಶಾಕ್‌ ಹೊಡೆದಾಗ ಏನು ಮಾಡಬೇಕು ಎಂಬುದು ಹೆಚ್ಚಿನ ಜನರಿಗೆ ಗೊತ್ತಿರಿರುವುದಿಲ್ಲ. ಕಣ್ಣ ಮುಂದೆ ಒಂದು ಜೀವ ಹೋಗುತ್ತಿದ್ದರೂ ಅಸಹಾಯಕರಾಗಿ ಕೂರಬೇಕಾಗುತ್ತದೆ.

ಕರಂಟ್‌ ಶಾಕ್‌ ಹೊಡೆದಾಗ ಏನು ಮಾಡಬೇಕು ಅನ್ನೋದು ಇಲ್ಲಿದೆ. ಇದನ್ನು ಪಾಲಿಸಿದರೆ ನಿಮ್ಮ ಜೀವವೂ ಉಳಿಯುವುದು ಬೇರೆಯವರ ಜೀವವನ್ನೂ ಉಳಿಸಬಹುದು.

ಎಲೆಕ್ಟ್ರಿಕ್‌ ಶಾಕ್‌ ಹೊಡೆದ ತಕ್ಷಣ ಸ್ವಿಚ್ ಆಫ್‌ ಮಾಡಿ. ಒಂದು ವೇಳೆ ವ್ಯಕ್ತಿಗೆ ಎಲೆಕ್ಟ್ರಿಕ್‌ ವಯರ್‌ ಮುಖಾಂತರ ಶಾಕ್‌ ಹೊಡೆದಿದ್ದರೆ ಒಂದು ಒಣ ಕಟ್ಟಿಗೆ ಮೂಲಕ ಆ ವಯರ್‌ನ್ನು ಆ ವ್ಯಕ್ತಿಯಿಂದ ದೂರ ಸರಿಸಿ.
ತಕ್ಷಣ ಬೆಚ್ಚನೆಯ ಬೆಡ್‌ಶೀಟ್‌ ಅಥವಾ ಕಂಬಳಿ ಹೊದಿಸಿ.

ಕರಂಟ್‌ ಶಾಕ್‌ ಹೊಡೆದ ವ್ಯಕ್ತಿಗೆ ಫಸ್ಟ್‌ ಎಡ್‌ ನೀಡುವುದು ಅಗತ್ಯ. ಒಂದು ವೇಳೆ ಆ ವ್ಯಕ್ತಿಗೆ ಉಸಿರಾಡಲು ತೊಂದರೆಯಾಗುತ್ತಿದ್ದಲ್ಲಿ ನೀವು ಆ ವ್ಯಕ್ತಿಯ ಬಾಯಿಗೆ ನಿಮ್ಮ ಬಾಯಿಯಿಂದ ಗಾಳಿ ನೀಡಿ. ತಕ್ಷಣ ಬಿಸಿ ಬಿಸಿ ಚಹಾ ಅಥವಾ ಕಾಫಿ ಕುಡಿಸಿ.

ಸಾಸಿವೆ ಎಣ್ಣೆಯಿಂದ ಕಾಲಿನಡಿ ಮಾಲೀಶ್‌ ಮಾಡಿ. ಈ ಸಂದರ್ಭದಲ್ಲಿ ಯಾವುದೇ ರೀತಿಯ ಗಾಯಗಳಾಗಿ ರಕ್ತಹರಿಯುತ್ತಿದ್ದರೆ ಮಲಾಮ್‌ ಹಚ್ಚಿ ಬ್ಯಾಂಡೆಡ್‌ ಹಾಕಿ. ತಕ್ಷಣ ಹತ್ತಿರದ ಆಸ್ಪತ್ರೆಗೆ ಕೊಂಡೊಯ್ಯಿರಿ.

Comments are closed.