ಆರೋಗ್ಯ

ನಿರಾಶ್ರಿತರು, ನಿರ್ಗತಿಕರಿಗೆ ಕೆ.ಎಂ.ಎಫ್ ವತಿಯಿಂದ 5000 ಲೀ ಉಚಿತ ಹಾಲು ವಿತರಣೆ

Pinterest LinkedIn Tumblr

ಉಡುಪಿ: ಕೊರೋನಾ ನಿಯಂತ್ರಣ ಕ್ರಮಗಳಿಂದ ತೊಂದರೆಗೊಳಗಾದ ಉಡುಪಿ ಜಿಲ್ಲೆಯಲ್ಲಿನ ನಿರಾಶ್ರಿತರು, ನಿರ್ಗತಿಕರು , ಕೂಲಿ ಕಾರ್ಮಿಕರು, ಮತ್ತು ಬಡ ಜನತೆಗೆ ಕೆ.ಎಂ.ಎಫ್ ವತಿಯಿಂದ ಪ್ರತಿನಿತ್ಯ 5000 ಲೀ ಹಾಲುನ್ನು ವಿತರಿಸಲಾಗುತ್ತದೆ.

 

ಏಪ್ರಿಲ್ 3 ರಿಂದ ಅಂದರೆ ಇಂದಿನಿಂದ ಎ.14 ರ ವರೆಗೆ ಉಚಿತವಾಗಿ ಹಾಲು ವಿತರಿಸುವ ಕಾರ್ಯಕ್ರಮಕ್ಕೆ ಶುಕ್ರವಾರ ಉಡುಪಿ ನಗರಸಭೆ ಆವರಣದಲ್ಲಿ ಚಾಲನೆ ನೀಡಲಾಯಿತು.

ಇದರಿಂದ ಅದೆಷ್ಟೋ ಬಡ ಜನರಿಗೆ ಹಾಲು ಭಾಗ್ಯ ಸಿಕ್ಕಿದಂತಾಗಲಿದೆ.

Comments are closed.