ಉಡುಪಿ: ಉಡುಪಿ ಜಿಲ್ಲೆಯಿಂದ ದೆಹಲಿಯ ಜಿಜಾಮುದ್ದೀನ್ ನಲ್ಲಿ ನಡೆದ ಪ್ರಾರ್ಥನೆಗೆ ಹೋದವರೂ ಯಾರೂ ಇಲ್ಲ, ಆದರೆ ಆ ಸಮಯದಲ್ಲಿ ಇತರೆ ಕಾರ್ಯದ ಮೇಲೆ ದೆಹಲಿಗೆ ಹೋಗಿದ್ದ ಜಿಲ್ಲೆಯ ೧೬ ಜನರನ್ನು ಮೊಬೈಲ್ ಟವರ್ ಮೂಲಕ ಗುರುತಿಸಲಾಗಿದೆ ಎಂದು ಉಡುಪಿ ಡಿಸಿ ಜಿ. ಜಗದೀಶ್ ತಿಳಿಸಿದ್ದಾರೆ.

16 ಮಂದಿ ಪೈಕಿ 9 ಜನರನ್ನು ಗುರುತಿಸಿ ಹಾಸ್ಪಿಟಲ್ ಕ್ವಾರಟೈಂನ್ ನಲ್ಲಿದ್ದಾರೆ. ಇತರರು ಬೇರೆ ಜಿಲ್ಲೆಯಲ್ಲಿದ್ದು ಸಂಬಂದಪಟ್ಟ ಜಿಲ್ಲಾಡಳಿತಕ್ಕೆ ಅವರ ಬಗ್ಗೆ ಮಾಹಿತಿ ನೀಡಲಾಗಿದೆ. ಜಿಲ್ಲೆಯ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸ್ಪಷ್ಠಪಡಿಸಿದರು.
Comments are closed.