ಆರೋಗ್ಯ

ದೆಹಲಿಯ ನಿಜಾಮುದ್ದೀನ್ ಸಮಾವೇಶದಲ್ಲಿ ಉಡುಪಿಯ ಯಾರೂ ಭಾಗವಹಿಸಿಲ್ಲ: ಡಿಸಿ ಜಿ.ಜಗದೀಶ್ ಸ್ಪಷ್ಟನೆ (Video)

Pinterest LinkedIn Tumblr

ಉಡುಪಿ: ದೆಹಲಿಯಲ್ಲಿ ನಡೆದ ನಿಜಾಮುದ್ದೀನ್ ಸಮಾವೇಶದಲ್ಲಿ ಉಡುಪಿಯ ಯಾರೂ ಭಾಗವಹಿಸಿಲ್ಲ ಎಂದು ಉಡುಪಿ ಡಿಸಿ ಜಿ. ಜಗದೀಶ್ ಸ್ಪಷ್ಟನೆ ನೀಡಿದ್ದಾರೆ.

ನಿಜಾಮುದ್ದೀನ್ ಸಮಾವೇಶಕ್ಕೆ ಉಡುಪಿ ಜಿಲ್ಲೆಯಿಂದಲೂ ಹಲವರು ಭಾಗಿಯಾಗಿದ್ದರು ಎಂಬ ವದಂತಿ ಹಿನ್ನೆಲೆ ಡಿಸಿ ಪ್ರಕಟನೆ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಯಾರೂ ಗಾಬರಿಯಾಗುವ ಅವಶ್ಯಕತೆ ಇಲ್ಲ. ಜಿಲ್ಲೆಯಲ್ಲಿ ಮೂರು ಜನರಿಗೆ ಸೋಂಕು ದೃಢವಾಗಿದೆ.
ಅವರನ್ನು ಮತ್ತವರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಿದ್ದೇವೆ. ಜಿಲ್ಲೆಯ ಜನ ಸರಕಾರದ ಲಾಕ್ ಡೌನ್ ಗೆ ಶಾಂತಿಯುತವಾಗಿ ಸಹಕರಿಸಬೇಕು ಎಂದು ಡಿಸಿ ಕರೆ‌ಕೊಟ್ಟಿದ್ದಾರೆ.

Comments are closed.