ಆರೋಗ್ಯ

ನಿತ್ಯದ ಆಹಾರದ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ವಿಧಾನ.

Pinterest LinkedIn Tumblr

ದೇಹವು ಆರೋಗ್ಯವಂತರಾಗಿರಬೇಕು ಅಂದರೆ ನಿಮ್ಮ ಇಮ್ಯೂನಿಟಿ ಅಥವಾ ರೋಗ ನಿರೋಧಕ ಶಕ್ತಿ ಪ್ರಬಲವಾಗಿರಬೇಕು. ಕೆಲವರಿಗೆ ಅದು ಪ್ರಕೃತಿದತ್ತವಾಗಿರಬಹುದು. ಇನ್ನು ಹಲವರು ಇಂತಹದ್ದೊಂದು ಶಕ್ತಿ ಹೆಚ್ಚಿಸಿಕೊಳ್ಳಲು ನಾನಾ ವಿಧಾನ ಅನುಸರಿಸುತ್ತಾರೆ. ಆದರೆ ಔಷಧಗಳ ಅವಲಂಬನೆ ಒಳ್ಳೆಯದಲ್ಲ. ನಿತ್ಯದ ಆಹಾರದ ಮೂಲಕವೇ ಟ್ರೈ ಮಾಡಿ.

ಸಿಟ್ರಸ್‌ ಹಣ್ಣುಗಳು: ರೋಗ ನಿರೋಧಕವಾಗಿ ಕೆಲಸ ಮಾಡುವ ವಿಟಮಿನ್‌ ಸಿ ಅಂಶವಿರುವ ಹಣ್ಣುಗಳು ಸೋಂಕನ್ನು ಸಮರ್ಥವಾಗಿ ಎದುರಿಸುತ್ತವೆ. ದ್ರಾಕ್ಷಿಹಣ್ಣು, ಕಿತ್ತಳೆ, ನಿಂಬೆಹಣ್ಣು, ನೆಲ್ಲಿಕಾಯಿ ಸೇವಿಸಿ.

ಕೆಂಪು ಮೆಣಸಿನ ಕಾಯಿ: ರೋಗ ನಿರೋಧಕ ವ್ಯವಸ್ಥೆಯನ್ನು ಉತ್ತೇಜಿಸುವುದರ ಜತೆಗೆ ಇದರಲ್ಲಿರುವ ಬೀಟಾ ಕ್ಯಾರೋಟಿನ್‌ ನಿಮ್ಮ ಕಣ್ಣು ಮತ್ತು ಚರ್ಮವನ್ನು ಆರೋಗ್ಯಕರವಾಗಿರಿಸುತ್ತದೆ.

ಬ್ರಕೋಲಿ: ವಿಟಮಿನ್‌ ಎ, ಸಿ, ಇ ಹೊಂದಿರುವ ಇದು ಆ್ಯಂಟಿ ಆಕ್ಸಿಡೆಂಟ್‌ ಮತ್ತು ನಾರಿನಂಶವನ್ನು ವ್ಯಾಪಕವಾಗಿ ಹೊಂದಿದೆ. ಆರೋಗ್ಯಕರ ತರಕಾರಿಗಳಲ್ಲಿ ಇದು ಒಂದಾಗಿದೆ.

ಬೆಳ್ಳುಳ್ಳಿ: ಸೋಂಕಿನ ವಿರುದ್ಧ ಹೋರಾಡುವಲ್ಲಿ ಬೆಳ್ಳುಳ್ಳಿ ಪ್ರಮುಖ ಪಾತ್ರ ವಹಿಸುತ್ತದೆ. ಬೆಳ್ಳುಳ್ಳಿ ರಕ್ತದೊತ್ತಡ ಸಮಸ್ಯೆಯನ್ನು ನಿವಾರಿಸುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಇದು ರೋಗ ನಿರೋಧಕವಾಗಿ ಕಾರ‍್ಯ ನಿರ್ವಹಿಸುತ್ತದೆ.

ಶುಂಠಿ: ಶುಂಠಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ಅಜೀರ್ಣ, ಗಂಟಲು ನೋವು ಮತ್ತಿತರ ಉರಿಯೂತದ ಕಾಯಿಲೆಗಳ ನಿವಾರಣೆಗೆ ಸಹಕಾರಿ. ಇತ್ತೀಚಿನ ಸಂಶೋಧನೆಯ ಪ್ರಕಾರ, ಶುಂಠಿ ದೀರ್ಘಕಾಲದ ನೋವನ್ನು ಕಡಿಮೆ ಮಾಡಲು ಮತ್ತು ಕೊಲೆಸ್ಟ್ರಾಲ್‌ ಕಡಿಮೆಗೊಳಿಸುವ ಗುಣಗಳನ್ನು ಹೊಂದಿರಬಹುದು.

ಪಾಲಕ್‌: ವಿಟಮಿನ್‌ ಎ ಇದರಲ್ಲಿ ಸಮೃದ್ಧವಾಗಿದೆ. ಆ್ಯಂಟಿಆಕ್ಸಿಡೆಂಟ್‌, ಬೀಟಾ ಕ್ಯಾರೋಟನ್‌ಗಳನ್ನು ಹೊಂದಿದೆ. ಸೋಂಕಿನ ವಿರುದ್ಧ ಹೋರಾಡುತ್ತದೆ.

ಮೊಸರು: ರೋಗಗಳ ವಿರುದ್ಧ ಹೋರಾಡುವುದರ ಜತೆ ರೋಗ ನಿರೋಧಕ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ಹಣ್ಣುಗಳೊಂದಿಗೆ ಕೂಡ ಮೊಸರನ್ನು ಸೇವಿಸಬಹುದು. ಮೊಸರು ಸಹ ವಿಟಮಿನ್‌ ಡಿ ಯ ಒಂದು ಉತ್ತಮ ಮೂಲ. ವಿಟಮಿನ್‌ ಡಿ ರೋಗನಿರೋಧಕ ವ್ಯವಸ್ಥೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ರೋಗಗಳ ವಿರುದ್ಧ ನಮ್ಮ ದೇಹದ ನೈಸರ್ಗಿಕ ರಕ್ಷ ಣೆಗಳನ್ನು ಹೆಚ್ಚಿಸುತ್ತದೆ.

ಬಾದಾಮಿ: ಇದರಲ್ಲಿರುವ ವಿಟಮಿನ್‌ ಇ ಆರೋಗ್ಯಕರ ರೋಗ ನಿರೋಧಕ ವ್ಯವಸ್ಥೆಯನ್ನು ಬಲ ಪಡಿಸುತ್ತದೆ. ಕೊಬ್ಬು ಕರಗಿಸುವ ವಿಟಮಿನ್‌ ಇದು. ಬಾದಾಮಿ ಮುಂತಾದ ಬೀಜಗಳು ವಿಟಮಿನ್‌ ಮತ್ತು ಆರೋಗ್ಯಕರ ಕೊಬ್ಬುಗಳನ್ನು ಹೊಂದಿರುತ್ತವೆ.

Comments are closed.