ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅವರಿಗೆ ಕೊರೊನಾ ವೈರಸ್ ಬರದಂತೆ ಪೋಷಕರು ಕೆಲವೊಂದು ಮುನ್ನೆಚ್ಚರಿಕೆ ಕ್ರಮ ಅನುಸರಿಸಿದರೆ ಒಳ್ಳೆಯದು. ಹಾಗಂತ ಭಯ ಪಡಬೇಕಾಗಿಲ್ಲ, ಮಕ್ಕಳನ್ನು ಹೊರಗಡೆ ಕರಕ್ಕೊಂಡು ಹೋಗಬಹುದು, ಅವರ ಜೊತೆ ಖುಷಿಯಲ್ಲಿ ಸುತ್ತಾಡಬಹುದು. ಆದರೆ ತುಂಬಾ ಜನರ ಗುಂಪು ಇರುವ ಕಡೆ ಕರೆದುಕೊಂಡು ಹೋಗಬೇಡಿ ಹಾಗೂ ಈ ಟಿಪ್ಸ್ ಪಾಲಿಸಿ.
ಮಕ್ಕಳಿಗೆ ಆಗಾಗ ಕೈ ಸ್ವಚ್ಛ ಮಾಡಲು ಹೇಳಿ ಕೊರೊನಾ ವೈರಸ್ ಯಾವ ರೀತಿ ಹರಡುತ್ತಿದೆ ಎಂಬುವುದು ಇನ್ನೂ ನಿಖರವಾಗಿ ಹೇಳಲು ಸಾಧ್ಯವಾಗಿಲ್ಲ, ಆದರೂ ಆಗಾಗ ಕೈ ತೊಳೆಯಿರಿ, ಸ್ವಚ್ಛತೆ ಕಡೆ ಗಮನ ನೀಡಿ ಎಂದು ವೈದ್ಯರು ಸೂಚಿಸುತ್ತಿದ್ದಾರೆ. ಇನ್ನು ಮಕ್ಕಳಿಗೆ ಆಗಾಗ ಕೈ ತೊಳೆಯುವಂತೆ ಹೇಳುವುದು ಆರೋಗ್ಯ ದೃಷ್ಟಿಯಿಂದ ಕೂಡ ಒಳ್ಳೆಯುವುದು. ಮಕ್ಕಳನ್ನು ಹೊರಗಡೆ ಕರೆದುಕೊಂಡು ಹೋಗಿ ಬಂದ ತಕ್ಷಣ ಅವರ ಬಟ್ಟೆ ಬಿಚ್ಚಿ, ಕೈ, ಕಾಲು ಮುಖ ತೊಳೆಸಿ. ಮಕ್ಕಳಿಗೆ ಕೈ ಕಾಲು ತೊಳೆಯುವಂತೆ ಹುರಿದುಂಬಿಸಿ.
ಹ್ಯಾಂಡ್ ಸ್ಯಾನಿಟೈಸರ್ ಸೋಪ್ ಬಳಸಿ ಕೈತೊಳೆದಷ್ಟು ಪರಿಣಾಮಕಾರಿಯಲ್ಲ. ಮಕ್ಕಳು ಕೈಗೆ ಸಿಕ್ಕ ವಸ್ತುಗಳೆನ್ನೆಲ್ಲಾ ಮುಟ್ಟುತ್ತಾ ಇರುತ್ತಾರೆ. ಸುಮ್ಮನೆ ಕೂರು ಎಂದರೆ ಕೂರುವುದಿಲ್ಲ, ಹೀಗಾಗಿ ಕೈಯಲ್ಲಿ ಬ್ಯಾಕ್ಟಿರಿಯಾಗಳು ಉಳಿಯುವ ಸಾಧ್ಯತೆ ಇದೆ. ಆದ್ದರಿಂದ ಸೋಪ್ ಬಳಸಿ ಕೈ ತೊಳೆಯುವುದು ಒಳ್ಳೆಯದು.
ಮಕ್ಕಳಿಗೆ ಹ್ಯಾಂಡ್ ಶೇಕ್ ಬದಲಿಗೆ ನಮಸ್ತೆ ಹೇಳಲು ಕಲಿಸಿಕೊಡಿ. ಈಗ ವಿಶ್ವದ ಇತರ ಕಡೆಗಳಲ್ಲಿಯೂ ಭಾರತೀಯ ಶೈಲಿಯಲ್ಲಿ ವಿಶ್ ಮಾಡಿ ಒಬ್ಬರಿಗೊಬ್ಬರು ವಿಶ್ ಮಾಡುತ್ತಿದ್ದಾರೆ. ಶಾಲೆಯಲ್ಲಿ ಮಕ್ಕಳು ಹ್ಯಾಂಡ್‌ಶೇಕ್ ಮಾಡುವುದು ಸಹಜ. ಮಕ್ಕಳಿಗೆ ಹ್ಯಾಂಡ್‌ಶೇಕ್ ಮಾಡಬೇಡ, ಇದರಿಂದ ಸೂಕ್ಷಾಣು ಜೀವಿಗಳು ಹರಡುತ್ತದೆ ಎಂಬುವುದು ಮನವರಿಕೆ ಮಾಡಿಕೊಡಿ.
ಕಡಿಮೆ ಎಂದರೂ ಒಂದು ತಿಂಗಳಿಗೆ ಏಕಾಗುವಷ್ಟು ಡಯಾಪರ್, ವೈಪ್ಸ್ ಹಾಗೂ ಅಗತ್ಯ ಔಷಧಿಯನ್ನು ಮನೆಯಲ್ಲಿ ಇಡಿ. ಮಕ್ಕಳಿಗೆ ಅಸ್ತಮಾ ಸಮಸ್ಯೆ ಇದ್ದರೆ ಇನ್‌ಹೀಲರ್ಸ್ ಕೂಡ ಮನೆಯಲ್ಲಿರಲಿ. ಆದರೆ ಯಾವುದೇ ಔಷಧಿಯನ್ನು ವೈದ್ಯರ ಸಲಹೆ ಇಲ್ಲದೆ ನೀಡಬೇಡಿ.
ಮಕ್ಕಳು ಶಾಲೆಯಿಂದ ಅಥವಾ ಹೊರಗಡೆ ಹೋಗಿ ಬಂದ ಮೇಲೆ ಶೂ ಅಥವಾ ಚಪ್ಪಲಿಯನ್ನು ಮನೆಯಿಂದ ಹೊರಗಡೆ ಕಳಚಿ ಇಡಲು ಹೇಳಿ, ಬ್ಯಾಗ್ ಸ್ವಚ್ಛತೆ ಕಡೆಯೂ ಗಮನ ಕೊಡುವುದು ಒಳ್ಳೆಯುವುದು.
ಮನೆಗೆ ಬಂದ ತಕ್ಷಣ ಬಟ್ಟೆ ಬದಲಾಯಿಸಲು ಹೇಳಿ ಮಕ್ಕಳಿಗೆ ಈ ರೀತಿಯ ಅಭ್ಯಾಸ ರೂಢಿಸುವುದು ತುಂಬಾ ಒಳ್ಳೆಯದು. ಮನೆಗೆ ಬಂದ ತಕ್ಷಣ ಶುಭ್ರವಾದ ಬಟ್ಟೆ ತೊಟ್ಟುಕೊಳ್ಳಲು ಹೇಳಿ. ಶಾಲೆಗೆ ಹೋಗುವ ಮಕ್ಕಳಿಗೆ ಶೂ ಹೊರಗಡೆ ಕಳಚಿ ಇಡಲು ಹೇಳುವುದು, ಕೈ ಕಾಲು ತೊಳೆದು, ಬಟ್ಟೆ ಬದಲಾಯಿಸಲು ರೂಢಿ ಮಾಡಿಸುವುದು ತುಂಬಾ ಒಳ್ಳೆಯದು. ಮಕ್ಕಳನ್ನು ಹೊರಗಡೆ ಆಡಲು ಬಿಡಿ ಕೊರೊನೊ, ಸೋಂಕು ಭಯದಿಂದ ಮಕ್ಕಳನ್ನು ಮನೆಯೊಳಗೇ ಇರುವಂತೆ ಹೇಳಲೇಬೇಡಿ, ಅವರು ಹೊರಗಡೆ ಇತರ ಮಕ್ಕಳೊಂದಿಗೆ ಆಡಲಿ. ಇದರಿಂದ ಅವರ ರೋಗ ನಿರೋಧಕ ಶಕ್ತಿ ಹೆಚ್ಚುವುದು.
ತುಂಬಾ ಕೊಳಚೆ ಪ್ರದೇಶದಲ್ಲಿ ಆಡಲು ಬಿಡಬೇಡಿ. ಮಣ್ಣಿನಲ್ಲಿ ಆಡಿದರೆ ತೊಂದರೆಯಿಲ್ಲ. ಹೆಚ್ಚು ಜನಸಂದಣಿ ಇರುವ ಕಡೆ ಕರ್ಕೊಂಡು ಹೋಗಬಾರದು ತುಂಬಾ ಜನರ ಗುಂಪು ಇರುವ ಕಡೆ ಕರೆದುಕೊಂಡು ಹೋಗಬೇಡಿ. ಸೋಂಕಿತ ವ್ಯಕ್ತಿ ಉಗುಳುವುದರಿಂದ, ಸೀನುವುದರಿಂದ, ಆ ವ್ಯಕ್ತಿ ಮುಟ್ಟಿದ ವಸ್ತುಗಳನ್ನು ಮುಟ್ಟುವುದರಿಂದ ಹರಡುವ ಸಾಧ್ಯತೆ ಇರುತ್ತದೆ. ಇನ್ನು ಕೆಮ್ಮು, ಜ್ವರ, ಸೀನು ಇರುವ ವ್ಯಕ್ತಿಯ ಹತ್ತಿರ ಮಕ್ಕಳನ್ನು ಬಿಡಬೇಡಿ. ನಿಮ್ಮ ಮನೆಯನ್ನು ಸ್ವಚ್ಛವಾಗಿಡಿ ಫ್ರಿಡ್ಜ್, ಮೆಟ್ಟಿಲುಗಳು, ಟೇಬಲ್, ಫೋನ್, ಮಕ್ಕಳ ಆಟಿಕೆಗಳು ಹೀಗೆ ಮಕ್ಕಳು ಅತೀ ಹೆಚ್ಚು ಮುಟ್ಟುವ ವಸ್ತುಗಳನ್ನು ಸ್ವಚ್ಛವಾಗಿಡಿ. ನೆಲವನ್ನು ಪ್ರತಿದಿನ ಒರೆಸಿ. ಕಾಯಿಲೆಯಿಲ್ಲದಿದ್ದರೆ ಮಾಸ್ಕ್ ಧರಿಸಬೇಡಿ ಈಗ ಕಾಯಿಲೆ ಇರುವವರಿಗಿಂತ ಕಾಯಿಲೆ ಇಲ್ಲದವರು ಹೆಚ್ಚಾಗಿ ಮಾಸ್ಕ್ ಬಳಸುತ್ತಿದ್ದಾರೆ. ಮಾಸ್ಕ್ ಬಳಸಲು ಗೊತ್ತಿಲ್ಲದವರು ಮಾಸ್ಕ್ ಬಳಸಿ ಆಗಾಗ ತೆಗೆಯುವುದು, ಮೂಗು ಮುಟ್ಟುವುದು ಮಾಡುತ್ತಿರುತ್ತಾರೆ.
ನೆನಪಿಡಿ, ಹೀಗೆ ಮಾಡುವುದರಿಂದ ಸೋಂಕಾಣುಗಳು ಕೂತು ಆರೋಗ್ಯವಂತರೂ ಕಾಯಿಲೆ ಬೀಳುವಿರಿ. ಇನ್ನು ಮಕ್ಕಳಿಗೆ ಸುಮ್ಮ ಸುಮ್ಮನೆ ಮಾಸ್ಕ್ ಧರಿಸಬೇಡಿ. ಇನ್ನು ಕೊರೊನಾ ವೈರಸ್ ಬಗ್ಗೆ ಹರಡುತ್ತಿರುವ ಸುದ್ದಿ ಬಗ್ಗೆ ತಲೆ ಕೆಡಿಸಿಕೊಳ್ಳದೆ ನೀವು ಕೆಲವು ಮುನ್ನಚ್ಚರಿಕೆ ಕ್ರಮಗಳೊಂದಿಗೆ ನಿಮ್ಮ ಬದುಕನ್ನು ಎಂದಿನಂತೆ ಸಾಗಿಸಿ. ಮಕ್ಕಳಿಗೂ ನಲಿದಾಡಲು ಬಿಡಿ.
Comments are closed.