ಬೆಂಗಳೂರು: ಕೊರೋನಾ ವೈರಸ್ ಮುಂಜಾಗ್ರತೆ ಹಾಗೂ ಅದನ್ನು ತಡೆಯುವ ನಿಟ್ಟಿನಲ್ಲಿ ಮಾರ್ಚ್ 14ರಿಂದ ಕರ್ನಾಟಕದಲ್ಲಿ ಸಾರ್ವಜನಿಕರು ಹೆಚ್ಚಾಗಿ ಸೇರುವ ಸ್ಥಳಗಳನ್ನು ಒಂದು ವಾರ ಬಂದ್ ಮಾಡಲು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಸೂಚನೆ ನೀಡಿಮಹತ್ವದ ಆದೇಶ ಮಾಡಿದ್ದಾರೆ.

ರಾಜ್ಯದ ಜನರ ಆರೋಗ್ಯದ ಹಿತದ್ರಷ್ಟಿಯಿಂದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಏನೇನು ಬಂದ್ ಆಗಲಿದೆ ಎನ್ನುವ ಮಾಹಿತಿ ಇಲ್ಲಿದೆ:
ಒಂದು ವಾರದ ಮಟ್ಟಿಗೆ ಕ್ಲಬ್, ಪಬ್ ಬಂದ್
ರಾಜ್ಯದ ವಿಶ್ವ ವಿದ್ಯಾಲಯಗಳೂ ಒಂದು ವಾರ ಬಂದ್
ರಾಜ್ಯಾದ್ಯಂತ ಸಾರ್ವಜನಿಕ ಕಾರ್ಯಕ್ರಮ – ಬರ್ತಡೇ -ಎಂಗೇಜ್ ಮೆಂಟ್ ಬಂದ್
ಸರಳ ರೀತಿಯ ಮದುವೆಗೆ ಸೂಚನೆ
ಮದುವೆಗೆ 100 ಜನಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ
ಯಾವುದೇ ಕಾರ್ಯಕ್ರಮಗಳಿಗೂ ಜಿಲ್ಲಾಧಿಕಾರಿಯಿಂದ ಅನುಮತಿ ಕಡ್ಡಾಯ
ವಿದೇಶ ಪ್ರವಾಸಕ್ಕೆ ತೆರಳದಂತೆ ಸೂಚನೆ
ಎಲ್ಲಾ ಮಾದರಿಯ ಕ್ರೀಡೆಗಳಿಗೂ ನಿಷಿದ್ಧ
ಒಂದು ವಾರಗಳ ಕಾಲ ಮಾಲ್ ಗಳು ಬಂದ್
ವಸ್ತು ಪ್ರದರ್ಶನಗಳು ರದ್ದು
ಪರೀಕ್ಷೆಗಳು ಎಂದಿನಂತೆ ನಡೆಯಲಿವೆ
ಜಾತ್ರೆ ನಡೆಸದಂತೆ ಮುಖ್ಯಮಂತ್ರಿ ಸೂಚನೆ
ಎಲ್ಲಿಯೂ ಸಮ್ಮರ್ ಕ್ಯಾಂಪ್ ನಡೆಸದಂತೆ ಆದೇಶ
ಇನ್ನು ಸರಕಾರಿ ಕಛೇರಿಗಳು ತೆರೆದಿರುತ್ತದೆ ಮತ್ತು ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಸೇರಿದಂತೆ ಪರೀಕ್ಷೆಗಳು ವೇಳಾ ಪಟ್ಟಿಯಂತೆ ನಡೆಯುತ್ತದೆ. ವಾರಗಳ ಕಾಲ ವಸ್ತುಸ್ಥಿತಿ ಪರಾಮರ್ಷೆ ಮಾಡಿ ಮುಂದಿನ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಹೇಳಿದ್ದಾರೆ.
Comments are closed.